ಕೆಜಿಎಫ್: ಕೆಜೆಪಿಯಲ್ಲಿ ಟೆಕೆಟ್‌ಗೆ ವೆಂಕಟೇಶ್, ಭಾಸ್ಕರನ್ ಪೈಪೋಟಿ
ಕ.ಪ್ರ. ವಾರ್ತೆ ್ಣ ಕೆಜಿಎಫ್ ್ಣ ಮಾ.29
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕರ್ನಾಟಕ ಜನತಾ ಪಕ್ಷದ ಆಕಾಂಕ್ಷಿಗಳಾದ ಎಸಿಪಿ ವೆಂಕಟೇಶ್ ಹಾಗೂ ಭಾಸ್ಕರನ್ ನಡುವೆ ಟಿಕೆಟ್ ಪಡೆಯಲು ಮುಸುಕಿನ ಗುದ್ದಾಟ ನಡೆಯುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಪ್ರಥಮವಾಗಿ ಕೆಜಿಎಫ್ ನಗರಸಭೆಯಲ್ಲಿ ಕೆಜೆಪಿ ಯಿಂದ ಇಬ್ಬರು ಸದಸ್ಯರು ಆಯ್ಕೆಯಾಗುವ ಮೂಲಕ ಖಾತೆ ತೆರೆದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಜೆಪಿ ಕಾತುರದಿಂದಿದೆ. ಕಳೆದ ವಾರದ ಹಿಂದೆ ಬೇತಮಂಗಲ ಗ್ರಾಮ ಮತ್ತು ನಗರದ ಮೊಯ್ದಿದು ಮಹಾಲ್‌ನಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಎಸಿಪಿ ವೆಂಕಟೇಶ್ ಅವರು ಮೂಲತ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬೇತಮಂಗಲ ಹೋಬಳಿಯ ಮಹದೇವಪುರ ಗ್ರಾಮದಲ್ಲಿ ಜನಿಸಿದವರು. ಉನ್ನತ ವ್ಯಾಸಂಗ ಮಾಡಲು ಬೆಂಗಳೂರಿಗೆ ತೆರಳಿ ಅಲ್ಲಿ ಪೊಲೀಸ್ ಇಲಾಖೆಗೆ ಸೇರಿ ಉತ್ತಮ ಸ್ಥಾನ ಮಾನವನ್ನು ಪಡೆದು ಎಸಿಪಿ ಹುದ್ದೆಗೇರಿ ನಂತರ ನಿವೃತ್ತಿ ಪಡೆದಿದ್ದಾರೆ. ಎಸಿಪಿ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಸೇರಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಇದೀಗ ಯಡಿಯೂರಪ್ಪ ಅವರು ಕೆಜೆಪಿ ಪಕ್ಷವನ್ನು ಕಟ್ಟಿದ ನಂತರ ಪಕ್ಷಕ್ಕೆ ಸೇರ್ಪಡೆಗೊಂಡ ಎಸಿಪಿ ವೆಂಕಟೇಶ್ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾತುರದಿಂದ ಇದ್ದಾರೆ. ಪಕ್ಷದಿಂದ ತಮಗೆ ಟಿಕೆಟ್ ಸಿಗುವುದಾಗಿ ವಿಶ್ವಾಸ ಹೊಂದಿದ ಎಸಿಪಿ ವೆಂಕಟೇಶ್ ಈಗಾಗಲೇ ಕ್ಷೇತ್ರದಲ್ಲಿ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತೊಂದು ವಿಷಯ ಎಂದರೆ ಕೆಜಿಎಫ್ ವಿಧಆನಸಭಾ ಕ್ಷೇತ್ರದ ಮೂಲದವರಿಗೆ ಮಾತ್ರ ಪಕ್ಷದಲ್ಲಿ ಟಿಕೆಟ್ ನೀಡಬೇಕು ಎಂಬುದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಬೇಡಿಕೆಯಾಗಿದೆ. ಅದೇ ರೀತಿ ಇತ್ತ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬೆಂಗಳೂರಿನ ಮೂಲದವರಾದ ಭಾಸ್ಕರನ್ ಸಹ ಕೆಜೆಪಿ ಪಕ್ಷದಿಂದ ಟಿಕೆಟ್ ತರಲು ಬಾರಿ ಪೈಪೋಟಿ ನಡೆಸಿದ್ದು ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ಭಾಸ್ಕರನ್ ಅವರು ಕೆಜೆಪಿ ಪಕ್ಷವನ್ನು ಸೇರುವ ಮುನ್ನ ಕಾಂಗ್ರೆಸ್‌ನದ್ದು ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಆಪ್ತರಾಗಿದ್ದು ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೆ.ಹೆಚ್. ಮುನಿಯಪ್ಪ ಭಾಸ್ಕರನ್‌ಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರಿಂದ ಖುಷಿಯಾಗಿದ್ದ ಭಾಸ್ಕರನ್ ಕೊಣೆ ಕ್ಷಣದಲ್ಲಿ ಕೆ.ಹೆಚ್. ಮುನಿಯಪ್ಪ ತಮ್ಮ ಪುತ್ರಿ ರೂಪಾ ಶಶಿಧರ್‌ಗೆ ಕೆಜಿಎಫ್‌ನಲ್ಲಿ ಚುನಾವಣೆ ಕಣಕ್ಕಿಳಿಸುವುದಾಗಿ ತಿಳಿದ ಬಳಿಕ ಕಾಂಗ್ರೆಸ್ ಪಕ್ಷವನ್ನು ತೊರೆದು ಕೆಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ ಯಡಿಯೂರಪ್ಪ ಬಳಿ ಗುರುತಿಸಿಕೊಂಡ ಭಾಸ್ಕರನ್ ಕೆಜಿಎಫ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

