ಕೋಲಾರ

ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಹಕರ ಪರದಾಟ

Published On :

ಶಿಡ್ಲಘಟ್ಟ: ಅಧಿಕಾರಿಗಳು ಮತ್ತು ಕಂಪ್ಯೂಟರ್ ನಿರ್ವಾಹಕರ ನಿರ್ಲಕ್ಷ್ಯದಿಂದಾಗಿ ನೂರಾರು ಪಡಿತರ ಚೀಟಿದಾರರು ಪಡಿತರವಿಲ್ಲದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.  ಕಳೆದ 3 ತಿಂಗಳ ಹಿಂದೆಯಷ್ಟೇ ಹೊಸ ಪಡಿತರ ಕಾರ್ಡುಗಳನ್ನು ವಿತರಿಸಿ ಒಮ್ಮೆ ಮಾತ್ರ ಪಡಿತರ ನೀಡಲಾಗಿತ್ತು. ಫೆಬ್ರವರಿ ತಿಂಗಳ ಪಡಿತರ ಪಡೆಯಲು ಹೋದವರನ್ನು ಮತ್ತೊಮ್ಮೆ ತಾಲೂಕು ಕಚೇರಿಯಲ್ಲಿ ತಮ್ಮ ಹೆಬ್ಬೆಟ್ಟಿನ ಮುದ್ರೆಯನ್ನು ದಾಖಲಿಸಿದಲ್ಲಿ ಮಾತ್ರ ಪಡಿತರ ನೀಡುವುದಾಗಿ ವಾಪಸ್ ಕಳುಹಿಸಿದ್ದು ಅಧಿಕಾರಿಗಳು ಹಾಗೂ ಕಂಪ್ಯೂಟರ್ ನಿರ್ವಾಹಕರ ನಿರ್ಲಕ್ಷ್ಯದಿಂದಾಗಿ ಪಡಿತರದಾರರು ದಾಖಲಿಸಿದ್ದ ಹೆಬ್ಬೆಟ್ಟಿನ ಮುದ್ರೆ ಕಂಪ್ಯೂಟರ್‌ಗಳಲ್ಲಿ ಮಾಯವಾಗಿದ್ದು ಪಡಿತರ ಚೀಟಿದಾರರು ಪರದಾಡುವಂತಾಗಿದೆ. ಪಡಿತರ ಪಡೆಯಲು ಅಂಗಡಿಗಳಿಗೆ ಹೋಗಿದ್ದ ಪಡಿತರದಾರರಿಗೆ ಮತ್ತೊಮ್ಮೆ ತಾಲೂಕು ಕಚೇರಿಗೆ ಹೋಗಿ ತಮ್ಮ ಹೆಬ್ಬೆಟ್ಟಿನ ಗುರುತು ನೀಡುವವರೆಗೂ ಪಡಿತರವನ್ನು ವಿತರಿಸಲಾಗದೆಂದು ತಿಳಿಸಿದ ಕಾರಣ, ನೂರಾರು ಸಂಖ್ಯೆಯಲ್ಲಿ ಜನ ತಾಲೂಕು ಕಚೇರಿಗೆ ಬಂದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಪೋಲಿಸರನ್ನು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು. ಯಾರೋ ಮಾಡಿದ ತಪ್ಪಿನಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದ್ದು ಇಡೀ ದಿನ ಊಟ ನೀರು ಬಿಟ್ಟು ತಾಲೂಕು ಕಚೇರಿಯಲ್ಲಿ ಮಹಿಳೆಯರು ವೃದ್ಧರೆನ್ನದೇ ನೂರಾರು ಜನ ಗಂಟೆಗಟ್ಟಲೇ ಉದ್ದನೆಯ ಸಾಲಿನಲ್ಲಿ ನಿಲ್ಲುವ ಶಿಕ್ಷೆ ಅನುಭವಿಸಬೇಕಾಗಿದೆ.
ಕವಿಗೋಷ್ಠಿ
ಶಿಡ್ಲಘಟ್ಟ: ಶ್ರೀಸಾಮಾನ್ಯರಲ್ಲಿನ ಸಾಹಿತ್ಯ ಪ್ರತಿಭೆಯನ್ನು ಹೊರ ಹೂಮ್ಮಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಗಬೇಕೆಂದು ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶೆ ವಿಜಯ ದೇವರಾಜ ಅರಸ್ ಕರೆ ನೀಡಿದರು.  ನಿಕಟಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ವಿ. ನಾಗರಾಜರಾವ್ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ 5ನೇ ಮನೆ ಮನೆಗೆ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಭಾವಜೀವಿ ಮಾತ್ರ ಕವಿಯಾಗಿ ಹೂರ ಹೊಮ್ಮಲು ಸಾಧ್ಯ. ತಾನು ಕಂಡ ಭಾವನೆಗಳನ್ನು ಸಾಹಿತ್ಯಕ್ಕಿಳಿಸುವುದೇ ಕಾವ್ಯವೆಂದ ನ್ಯಾಯಾಧೀಶರು, ಸತತ ಪರಿಶ್ರಮದಿಂದ ಮಾತ್ರ ಉತ್ತಮ ಕಾವ್ಯ ರಚನೆ ಸಾಧ್ಯ ಎಂದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ. ಹನುಮಂತಪ್ಪ ಮಾತನಾಡಿದರು.  ತಾಲೂಕು ಕ.ಸಾ.ಪ ಅಧ್ಯಕ್ಷ ವಿ. ಕೃಷ್ಣ ಸ್ವರಚಿತ ಕವನ ವಾಚಿಸುವುದರ ಮುಖಾಂತರ ಕವಿಗೋಷ್ಠಿಗೆ ಚಾಲನೆ ನೀಡಿದರು.  ತಾಲೂಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರೂಪಸಿ ರಮೇಶ್, ಕಾರ್ಯದರ್ಶಿ ಮಂಜುನಾಥ್, ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.