ಕೋಲಾರ

ಸಿಡಿದ ಫ್ರಿಡ್ಜ್: ನಷ್ಟ

Published On :

ಮುಳಬಾಗಲು:  ಇಲ್ಲಿನ ಹೈದರ್‌ನಗರದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫ್ರಿಡ್ಜ್ ಸಿಡಿದು ಗೃಹೋಪಯೋಗಿ ವಸ್ತುಗಳು ಸುಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಸೈಯದ್ ನ್ಯಾಮತ್ ಅಲಿ ಕುಟುಂಬ ಸದಸ್ಯರು ಊರಿಗೆ ಹೋಗಿದ್ದಾಗ ಘಟನೆ ನಡೆದಿದೆ. ಮನೆಯಿಂದ ಬರುತ್ತಿದ್ದ ಬೆಂಕಿಯನ್ನು ಗಮನಿಸಿದ ಸ್ಥಳೀಯರು ಸೈಯದ್ ಅವರಿಗೆ ತಿಳಿಸಿದರು. ಅಗ್ನಿಶಾಮಕ ದಳದವರು ಆಗಮಿಸಿ ಗುರುವಾರ ಬೆಳಗಿನ ಜಾಮದವರೆವಿಗೂ ಬೆಂಕಿ ನಂದಿಸಲು ಶ್ರಮಿಸಿದರು. ಮುಳಬಾಗಲು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸತ್ಯಮ್ಮ ದೇವಿ ಜಾತ್ರೋತ್ಸವ
ಗೌರಿಬಿದನೂರು:  ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಗ್ರಾಮದ ಜನತೆ ಗುರುವಾರ ಗ್ರಾಮದೇವತೆ ಜಾತ್ರೆಯನ್ನು ಆಚರಿಸಲಾಯಿತು. ಸತ್ಯಮ್ಮ ದೇವತೆ ಹೆಸರಿನ ಈ ಜಾತ್ರೆ ಆಚರಣೆ ವೇಳೆ ಗ್ರಾಮಸ್ಥರು ಮುಂಜಾನೆ 6 ಗಂಟೆಗೆ ಗ್ರಾಮದ ಹೊರಕ್ಕೆ ಬರುತ್ತಾರೆ. ಬರುವಾಗ ಇವರೊಂದಿಗೆ ಅವರ ಪೋಷಣೆಯ ಸಾಕು ಪ್ರಾಣಿಗಳನ್ನು ಗ್ರಾಮದಿಂದ ಹೊರಕ್ಕೆ ಸಾಗಿಸುತ್ತಾರೆ.
ಗ್ರಾಮದ ಜನರೆಲ್ಲರೂ ಹೊರಗೆ ಬಂದ ಮೇಲೆ ಗ್ರಾಮದೊಳಕ್ಕೆ ಹೋಗುವ ದಾರಿಗಳಿಗೆ ಮುಳ್ಳಿನ ಕಂಪೆಗಳಿಂದ ಮುಚ್ಚುತ್ತಾರೆ. ಯಾರಾದರೂ ಒಳಗೆ ಹೋದರೆ ಕೇಡು ಸಂಭವಿಸುತ್ತೆ ಎಂಬುದು ಗ್ರಾಮಸ್ಥರ ನಂಬಿಕೆ. ಗ್ರಾಮದ ಹೊರಗೆ ಗುಡಾರಗಳು, ಟೆಂಟ್‌ಗಳು, ಷಾಮಿಯಾನಗಳು ಮರದ ನೆರಳಿನಲ್ಲಿ ಹಾಕಿ ಒಂದು ದಿನದ ಮಟ್ಟಿಗೆ ಮಾತ್ರ ವಾಸ ಮಾಡುತ್ತಾರೆ. ಅವರವರ ಆಚಾರಕ್ಕೆ ತಕ್ಕಂತೆ ಮಾಂಸಾಹಾರ, ಶಾಖಾಹಾರದ ಹಬ್ಬದ ಅಡಿಗೆಯನ್ನು ಮಾಡಿ ಭೋಜನ ಮಾಡಿದರು. ಸಂಜೆ ಸತ್ಯಮ್ಮ ದೇವತೆಯೊಂದಿಗೆ ಪ್ರಾಣಿಯನ್ನು ಬಲಿಕೊಟ್ಟು ಜನರು ಗ್ರಾಮದೊಳಕ್ಕೆ ಪ್ರವೇಶ ಮಾಡಿದರು.  ಈ ಸಂಪ್ರದಾಯ ಹಲವಾರು ವರ್ಷಗಳಿಂದಲೂ ಜಾರಿಯಲ್ಲಿದೆ ಎನ್ನುತ್ತಾರೆ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ  ಧರಣೇಂದ್ರಯ್ಯ ತಿಳಿಸಿದ್ದಾರೆ.
ಬ್ರಹ್ಮರಥೋತ್ಸವ
ಗೌರಿಬಿದನೂರು:  ಫೆ.25ರಂದು ಮಾಘಶುದ್ಧ ಪೌರ್ಣಿಮೆ ದಿನದಂದು ಪಟ್ಟಣದ ಲಕ್ಷ್ಮಿವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ ಜರುಗಲಿದೆ. ತಹಶೀಲ್ದಾರ್ ಎನ್.ಭಾಸ್ಕರ್ ನೇತೃತ್ವದಲ್ಲಿ ನಡೆಯಲಿರುವ ರಥೋತ್ಸವ ಅಂಗವಾಗಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಸತ್ಯನಾರಾಯಣ ಸ್ವಾಮಿ ಪೂಜೆ, 10.30ಕ್ಕೆ ವಾಣಿ ಮಹಿಳಾ ಮಂಡಲಿಯವರಿಂದ ಲಲಿತಾ ಸಹಶ್ರನಾಮ, ವಿಷ್ಣು ಸಹಶ್ರನಾಮ ಪಾರಾಯಣ ಸ್ವಾಮಿಗೆ ಮಹಾಮಂಗಳಾರತಿ  ಏರ್ಪಡಿಸಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.