ಮಾರ್ಗಸೂಚಿ ಅಭ್ಯಾಸದಿಂದ ಯಶಸ್ಸು: ದಯಾನಂದ್
ಗೌರಿಬಿದನೂರು: ಟಿವಿ, ಮೊಬೈಲ್, ರೇಡಿಯೋ ಮೊದಲಾದ ಮಾಧ್ಯಮಗಳ ಬಳಕೆ ನಿರ್ಬಂಧಿಸಿ ನಿರಂತರವಾಗಿ ಮಾರ್ಗಸೂಚಿಯಂತೆ ಶ್ರದ್ಧೆಯಿಂದ ವಿದ್ಯಾಥಿಗಳು ಅಭ್ಯಾಸ ಮಾಡಿದರೆ ಯಶಸ್ಸು ನಿಶ್ಚಿತ ಎಂದು ಆರಕ್ಷಕ ಉಪ ನಿರೀಕ್ಷಕ ದಯಾನಂದ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು, ಪೋಷಕರಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಶಿಕ್ಷಕಿ ವಿನುತಾ ಮಾತನಾಡಿ, ಕೃಷಿ, ಗೃಹ ಮತ್ತಿತರೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೆ ಉಳಿದ ದಿನಗಳಲ್ಲಿ ಇಷ್ಟಪಟ್ಟು ವೇಳಾಪಟ್ಟಿ ತಯಾರು ಮಾಡಿಕೊಳ್ಳಬೇಕು. ಅದರಂತೆ ಖಚಿತಗುರಿಯೊಂದಿಗೆ ಸಂಕಲ್ಪ ತೊಟ್ಟು ಯತ್ನಿಸಿದರೆ ಗುಣಮಟ್ಟದ ಸಾಧನೆ ಸಾಧಿಸಬಹುದು ಎಂದರು. ಪೋಷಕರ ಪರವಾಗಿ ಅಶ್ವತ್ಥನಾರಾಯಣ, ಮಾತನಾಡಿದರು. ಗೆದರೆ ಗ್ರಾಪಂ ಅಧ್ಯಕ್ಷ ಶಿವಾನಂದರೆಡ್ಡಿ, ಗ್ರಾಪಂ ಸದಸ್ಯ ಜಿ.ಸಿ. ಶ್ರೀನಿವಾಸ ಉಪಸ್ಥಿತರಿದ್ದರು.
ಸಿ.ಶಶಿಧರ್, ಚಿಕ್ಕಸಿದ್ದಯ್ಯ, ಆನಂದರೆಡ್ಡಿ ಅವರನ್ನು ಅಭಿನಂದಿಸಲಾಯಿತು. ಮಾರ್ಗದರ್ಶಿ ಶಿಕ್ಷಕ ಜಿ.ಸಿ. ರಾಮಚಂದ್ರಯ್ಯ, ರಾಜಶೇಖರ್, ಡಿ.ಎಚ್. ಆಂಜಿನಪ್ಪ, ಜಿ.ಸಿ. ನಾಗರಾಜ್, ಅಬ್ದುಲ್ಲಾ ಪೆದ್ದಗಂಗಪ್ಪ, ಮೋಹನ್ ಮತ್ತು ಶ್ರೀರಾಮಯ್ಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

