ಕೋಲಾರ

350 ಲೀಟರ್ ಬೆಲ್ಲದ ಕೊಳೆ ವಶ

Published On :

ಕೋಲಾರ: ಶ್ರೀನಿವಾಸಪುರ ತಾಲೂಕಿನ ಗಡಿ ಭಾಗದ ಕನ್ನಂಪಲ್ಲಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ರೆಡ್ಡಪ್ಪ ಎಂಬವರು ಕಳ್ಳಭಟ್ಟಿ ಸಾರಾಯಿ ತಯಾರಿಸಲು ಅಕ್ರಮವಾಗಿ ಸುಮಾರು 350 ಲೀಟರ್ ಬೆಲ್ಲದ ಕೊಳೆಯನ್ನು ಶೇಖರಣೆ ಮಾಡಿದ್ದನ್ನು ಅಬಕಾರಿ ಇಲಾಖೆಯವರು ಪತ್ತೆ ಮಾಡಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಕೋಲಾರ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಹೆಚ್.ವಿ.ಬಾಲಗಂಗಾಧರ ರವರ ಆದೇಶದಂತೆ ವಲಯದ ನಿರೀಕ್ಷಕರಾದ ಡಿ.ಜಯರಾಮ್, ಉಪ ನಿರೀಕ್ಷಕ ಕೆ.ಎಂ.ಕೃಷ್ಣಪ್ಪ, ಅಬಕಾರಿ ರಕ್ಷಕರಾದ ಹೆಂಜಾರಪ್ಪ, ಶ್ರೀನಿವಾಸ್, ಶಿವಪ್ಪ ಮತ್ತು ಗೃಹ ರಕ್ಷಕದಳ ಮನೋಹರ್, ರಾಮಾಂಜನಪ್ಪ, ಕಿಟ್ಟಪ್ಪ,ಶ್ರೀನಿವಾಸ್ ಅವರುಗಳು ದಾಳಿ ನಡೆಸಿದಾಗ ಅಕ್ರಮ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.