ನಂದಿಗಿರಿಯಲ್ಲಿ ಪ್ರೇಮಿಗಳ ಕಲರವ
ಚಿಕ್ಕಬಳ್ಳಾಪುರ: ವ್ಯಾಲೆಂಟೈನ್ ದಿನವಾದ ಗುರುವಾರ ದೂರದ ವಿವಿಧೆಡೆಯಿಂದ ಆಗಮಿಸಿದ ಪ್ರೇಮಿಗಳು ಐತಿಹಾಸಿಕ ನಂದಿಗಿರಿಧಾಮದಲ್ಲಿ ಅಡ್ಡಾಡಿ ಸಂಭ್ರಮದಿಂದ ಕಾಲ ಕಳೆದರು. ಪ್ರತಿವರ್ಷ ಫೆ.14ರ ಪ್ರೇಮಿಗಳ ದಿನಾಚರಣೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಪ್ರೇಮಿಗಳು ಈ ಬಾರಿ ಕಡಿಮೆ ಪ್ರಮಾಣದಲ್ಲಿದ್ದರು. ಇದಕ್ಕೆ ಸ್ಥಳೀಯ ಇಲಾಖೆಯ ಬಿಗಿ ಕ್ರಮವೂ ಸಾಕ್ಷಿಯಾಗಿದೆ.
ವೈವಿಧ್ಯಮಯ ಪ್ರಾಕೃತಿಕ ಸೊಬಗಿನಿಂದ ರೋಮಾಂಚನಗೊಳಿಸುವ ನಂದಿಗಿರಿಧಾಮ ಕರ್ನಾಟಕದ ಊಟಿ ಎಂತಲೂ ಫೇಮಸ್. ಈ ಹಿನ್ನೆಲೆಯಲ್ಲಿ ಪ್ರತಿದಿನ ಹೆಚ್ಚು ಪ್ರವಾಸಿಗರು ತಮ್ಮ ಕುಟುಂಬ ಅಥವಾ ಗೆಳೆಯರ ಜತೆಯಲ್ಲಿ ನಂದಿಗಿರಿಧಾಮಕ್ಕೆ ಬಂದು ಇಲ್ಲಿನ ಆಹ್ಲಾದಕರ ವಾತಾವರಣದಲ್ಲಿ ತಿರುಗಾಡಿ ಸಂತಸ ಕಾಣುತ್ತಾರೆ. ಗಿರಿಧಾಮದಲ್ಲಿನ ಆಲಯಗಳಿಗೆ ಭೇಟಿ ನೀಡಿ ಭಕ್ತಿ ಮೆರೆಯುತ್ತಾರೆ.
ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪದ ನಂದಿಗಿರಿಧಾಮ ಇರುವುದರಿಂದ ಬೆಂಗಳೂರು, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆ ಸೇರಿ ಬೇರೆ ಬೇರೆ ಕಡೆಯಿಂದ ಪ್ರೇಮಿಗಳು ಬರುತ್ತಾರೆ. ದ್ವಿಚಕ್ರ ವಾಹನಗಳಲ್ಲೇ ಹೆಚ್ಚಾಗಿ ಆಗಮಿಸುತ್ತಾರೆ. ಗಿರಿಧಾಮದಲ್ಲಿ ಗುರುವಾರ ದ್ವಿಚಕ್ರ ವಾಹನಗಳಿಂದಲೇ ಹೆಚ್ಚಿಗೆ ವಾಹನ ಶುಲ್ಕವು ವಸೂಲಿಯಾಗಿರುವುದು ಇದಕ್ಕೆ ನಿದರ್ಶನ. ಗಿರಿಧಾಮಕ್ಕೆ ಬಂದಂತಹ ಪ್ರವಾಸಿಗರಲ್ಲಿ ಹೆಚ್ಚಿಗೆ ಪ್ರೇಮಿಗಳೇ ಕಾಣಿಸಿದರು. ಮುಂಜಾವದಿಂದಲೇ ಪ್ರೇಮಿಗಳ ಆಗಮನವು ಕಂಡುಬಂತು. ಯಾವುದೇ ರೀತಿಯ ಅನಾಹುತ, ಅನೈತಿಕ ಚಟುವಟಿಕೆಗಳು ನಡೆಯದಿರಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ತಪಾಸಣೆ ಚುರುಕುಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

