'ಸ್ವಸ್ಥ ಮನಸ್ಸಿಗೆ ಯೋಗವೇ ಮದ್ದು
ಚಿಂತಾಮಣಿ: ಮಾನವನ ಎಲ್ಲಾ ಚಟುವಟಿಕೆಗಳಿಗೆ ಮೂಲ ಮನಸ್ಸು. ಸ್ವಸ್ಥ ಮನಸ್ಸಿನ ನಿರ್ಮಾಣದಲ್ಲಿ ಯೋಗದ ಪಾತ್ರ ಮಹತ್ವದ್ದು. ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗ ಸಹಕಾರಿ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ಕೈವಾರ ಯೋಗಿ ನಾರೇಯಣ ಮಠದ ಸಭಾಂಗಣದಲ್ಲಿ ಬೆಂಗಳೂರಿನ ಓಂ ಯೋಗ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಯೋಗಿಗಳಾದ ಕೈವಾರ ತಾತಯ್ಯನವರು ಸಹ ಮನಸ್ಸೇ ಯೋಗದ ರಹಸ್ಯ ಎಂದು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದಾರೆ. ಶರೀರಕ್ಕಿಂತ ಇಂದ್ರಿಯಗಳು ಪ್ರಬಲ,ಇಂದ್ರಿಯಗಳಿಗಿಂತಲೂ ಮನಸ್ಸಿನ ರಹಸ್ಯವನ್ನು ತಿಳಿಯುವುದಕ್ಕೆ ಯೋಗದ ಅವಶ್ಯಕತೆಯಿದೆ ಎಂದರು. ಯೋಗವು ಸಹಸ್ರಾರು ವರ್ಷಗಳ ಹಿಂದೆಯೇ ರೂಪಗೊಂಡಿರುವ ಒಂದು ಪರಿಪೂರ್ಣವಾಗಿರುವ ವಿಜ್ಞಾನ. ಮಹರ್ಷಿ ಪತಂಜಲಿಯವರು ಅಷ್ಟಾಂಗಯೋಗವನ್ನು ಆರೋಗ್ಯವರ್ಧನೆಗೆ, ಸಾರ್ಥಕ ಜೀವನಕ್ಕಾಗಿ ಹಾಗೂ ಮೋಕ್ಷ ಸಾಧಿಸಲು ಪ್ರತಿಪಾದಿಸಿದ್ದಾರೆ. ಇಂದಿನ ಪ್ರಸ್ತುತ ಯಾಂತ್ರಿಕ ಬದುಕನ್ನು ಅವಲೋಕಿಸಿದಾಗ, ಅವೈಜ್ಞಾನಿಕ ಹಾಗೂ ಭೋಗಜೀವನ ಶೈಲಿಯತ್ತ ಸಾಗುತ್ತಿರುವುದು ಹಲವಾರು ಖಾಯಿಲೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು. ರಮೇಶ್, ಲಕ್ಷ್ಮಿನಾರಾಯಣ ಮತ್ತು ಯೋಗ ಶಿಬಿರಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

