ಕೋಲಾರ

ಟ್ಯಾಂಕರ್ ಸ್ಫೋಟ: ಸತ್ತವರು ಮೂವರು

Published On :

ಕೋಲಾರ/ಮುಳಬಾಗಿಲು: ಮುಳಬಾಗಿಲು ಹೊರವಲಯದ ನರಸಿಂಹತೀರ್ಥ ಸಮೀಪದ ದಾರನೇಹಳ್ಳಿ ಮಿಟ್ಟೆಯಲ್ಲಿ ಬಳಿ ಸೋಮವಾರ ರಾತ್ರಿ ಸಂಭವಿಸಿದ ಕಾರ್ಬನ್ ಡೈ ಆಕ್ಸೈಡ್ ತುಂಬಿದ ಟ್ಯಾಂಕರ್ ಸ್ಫೋಟದಲ್ಲಿ ಸತ್ತವರು ನಾಲ್ವರು ಅಲ್ಲ, ಮೂವರು ಎಂದು ಐಜಿಪಿ ಅಮರ್‌ಕುಮಾರ್ ಪಾಂಡೆ ತಿಳಿಸಿದ್ದಾರೆ. ಟ್ಯಾಂಕರ್‌ಗೆ ಮರಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿತ್ತು. ಸತ್ತವರ ಮೂವರ ಪೈಕಿ ಸುರೇಶ್ ಎಂಬುವವರು ಹುಬ್ಬಳ್ಳಿ ಕಡೆಯವರಾಗಿದ್ದು, ಟ್ಯಾಂಕರ್ ಲಾರಿಯನ್ನು ಓಡಿಸುತ್ತಿದ್ದರು. ಇನ್ನಿಬ್ಬರು ಮರಳು ಲಾರಿಯ ಚಾಲಕ ಕೇಶವ ಹಾಗೂ ಮತ್ತೊಬ್ಬ ನಾರಾಯಣಪ್ಪ. ಇವರಿಬ್ಬರು ಮುಳಬಾಗಿಲು ತಾಲೂಕಿನ ಅಣಿಹಳ್ಳಿ ಗ್ರಾಮದವರು ಎಂದು ಅಮರ್‌ಕುಮಾರ್ ಪಾಂಡೆ ತಿಳಿಸಿದ್ದಾರೆ. ಟ್ಯಾಂಕರ್ ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ತಮಿಳುನಾಡಿನ ಅರಕೋಣಂನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‌ಡಿಆರ್‌ಎಫ್)ದ 45 ಸಿಬ್ಬಂದಿ ಹಾಗೂ ಬೆಂಗಳೂರಿನ ಎಫ್‌ಎಸ್‌ಎಳ್ ಅಧಿಕಾರಿ ಬಿ.ಸಿ.ರವೀಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.