ಕೋಲಾರ

ರೈತ ಮಹಿಳೆ ಮಂಜುಳ ದಯಾಮರಣ ಕೋರಿಕೆ

Published On :

ಚಿಂತಾಮಣಿ: ಮಾವಿನ ಸಸಿಗಳನ್ನು ನೆಟ್ಟು 20 ವರ್ಷ ಮರಗಳನ್ನು ಪೋಷಿಸಿ ಬೆಳೆದ ಮಾವಿನ ಫಸಲನ್ನು ಅಧಿಕಾರಿಗಳು ರಾಜಕೀಯ ದುರುದ್ದೇಶಕ್ಕೆ ಮಣಿದು ಹರಾಜು ಹಾಕಲು ಹೊರಟಿರುವ ಧೋರಣೆಯಿಂದ ಬೇಸತ್ತ ರೈತ ಮಹಿಳೆ ಮಂಜುಳ ದಯಾಮರಣಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದ್ದಾರೆ. ತಾಲೂಕಿನ ಮುರುಗಮಲ್ಲ ಹೋಬಳಿ ಜೋಗ್ಯಾನಹಳ್ಳಿ ಗ್ರಾಮದ ಸರ್ವೆ ನಂ.22 ರ 5 ಎಕರೆ 27 ಕುಂಟೆ ಜಮೀನಿನಲ್ಲಿ ಪೋಷಣೆ ಮಾಡಿ ಬೆಳೆದ ಮಾವಿನ ಫಸಲಿನಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದ ರೈತ ಮಹಿಳೆ ಮಂಜುಳರವರ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಉಂಟಾಗಿದೆ.
ವಕ್ಕಲಿಗ ಜನಾಂಗಕ್ಕೆ ಸೇರಿದ ಈಕೆ ಕಡು ಬಡವಳಾಗಿದ್ದು ಕುಟುಂಬ ಪೋಷಣೆಗಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಸಹ ಪ್ರಯೋಜನವಾಗದಿರುವುದಿಂದ ಬೇಸತ್ತು ಸಹಿ ಮಾಡಿ ತನಗೆ ದಯಾ ಮರಣಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮಾಧ್ಯಮಗಳ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಾಗಿ ತಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವುದಾಗಿ ಆರೋಪಿಸಿ ಕಳೆದ 4 ದಿನಗಳಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರ ಇಟ್ಟು ತಾವು ಮತ್ತು ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಧರಣಿ ನಡೆಸುತ್ತಿದ್ದರೂ ನ್ಯಾಯ ಸಿಗದ ಪರಿಣಾಮ ವಿಧಿಯಿಲ್ಲದೆ ತಮಗೆ ದಯಾ ಮರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸೇನೆಯ ಆಗ್ರಹ: ಬಡವರ ಮಾವಿನ ಫಸಲನ್ನು ಹರಾಜು ಮಾಡಲು ಹೊರಟಿರುವ ತಾಲೂಕು ಆಡಳಿತ ಕಾರ್ಯವೈಖರಿಯನ್ನು ದಲಿತ ಸಂಘರ್ಷ ಸೇನೆ ತೀವ್ರವಾಗಿ ಖಂಡಿಸಿದೆ. ರಾಜಕೀಯ ಬಲಾಡ್ಯರು ಸರ್ಕಾರದ ಆಸ್ತಿಗಳನ್ನು ತಿಂದು ತೇಗುತ್ತಿದ್ದರು ಕಾನೂನು ಕ್ರಮ ಜರುಗಿಸದೆ ಕರ್ತವ್ಯ ಲೋಪ ಎಸಗುತ್ತಿರುವುದು ಖಂಡಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಆಡಳಿತವಾಗಲಿ, ಜಿಲ್ಲಾ ಆಡಳಿತವಾಗಲಿ ದಲಿತ ಪರ ಸಂಘಟನೆಗಳ ಹೋರಾಟಕ್ಕೆ ಗೌರವ ತೋರದೆ ಸಂವಿದಾನ ಬದ್ದ ಹಕ್ಕುಗಳನ್ನು ಗಾಳಿಗೆ ತೂರಿ ಸೌಜನ್ಯಕ್ಕಾದರು ಸ್ಥಳಕ್ಕೆ ಬಾರದೆ ಅವಮಾನ ಮಾಡಿದ್ದಾರೆ. 15 ದಿನಗಳ ಒಳಗೆ ನ್ಯಾಯ ದೊರೆಯದೆ ಹೋದರೆ ದಲಿತ ಸಂಘರ್ಷ ಸೇನೆಯಿಂದ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ರಾಜ್ಯ ಉಪಾಧ್ಯಕ್ಷ ಎಂ.ಆನಂದ್, ಕಾರ್ಯದರ್ಶಿ ರವಿತೇಜ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಶಂಕರ್, ಕಾರ್ಯದರ್ಶಿ ನಾರಾಯಣಸ್ವಾಮಿ, ಜಯಮ್ಮ, ತಾಲೂಕು ಅಧ್ಯಕ್ಷ ಆಂಜಪ್ಪ, ಉಪಾಧ್ಯಕ್ಷ ಸದಾಶಿವ, ಉಪಾಧ್ಯಕ್ಷ ಕೊಂಡ್ಲಿಗಾನಹಳ್ಳಿ ಶ್ರೀನಿವಾಸ್ ಸೇರಿದಂತೆ ನೂರಾರು ಕಾರ್ಯಕರ್ತರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.