ಕೋಲಾರ

ಇಂದು ನಗರದಲ್ಲಿ ವಿದ್ಯುತ್ ವ್ಯತ್ಯಯ

Published On :


ಕೋಲಾರ: ನಗರದಲ್ಲಿ ವಿದ್ಯುತ್ ಸರಬರಾಜು ಅಭಿವೃದ್ಧಿ ಸಲುವಾಗಿ ಹಾಲಿ ಇರುವ ವಿದ್ಯುತ್ ಮಾರ್ಗಗಳನ್ನು ಉನ್ನತಿಗೇರಿಸಲು ಕಾಮಗಾರಿ ಪ್ರಾರಂಭವಾಗಿರುವುದರಿಂದ ಫೆ.6 ರಂದು ಕಠಾರಿ ಪಾಳ್ಯ, ಅರಳೆ ಪೇಟೆ, ಬ್ರಾಹ್ಮಣ ಬೀದಿ, ದೊಡ್ಡಪೇಟೆ ಮುಖ್ಯರಸ್ತೆ ಮತ್ತು ನೀರು ಸರಬರಾಜು ಫೀಡರ್ ವ್ಯಾಪ್ತಿಯ ಕೆ.ಇ.ಬಿ ಕಾಲೋನಿ, ಆಟೋನಗರ, ಕೊಂಡರಾಜನಹಳ್ಳಿ, ಅಮ್ಮೇರಹಳ್ಳಿ ಮತ್ತು ಎಂ.ಪಿ.ಎಂ.ಸಿ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಕುಂದುಕೊರತೆ ವಿಚಾರಣೆ
ಕೋಲಾರ: ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಫೆ.7 ರಂದು ಬೆ.11 ಗಂಟೆಗೆ ಮಾಲೂರು ತಾಲೂಕಿನ ಟೇಕಲ್ ಗ್ರಾಪಂ ಸಭಾಂಗಣದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ವಿಚಾರಣೆ ಮಾಡಲಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ ಮತ್ತು ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಲಿಖಿತ ಅಹವಾಲುಗಳನ್ನು ಅಂದು ಬೆಳಿಗ್ಗೆ 11 ಗಂಟೆಯಿಂದ ಸ್ವೀಕರಿಸಲಿದ್ದು ಟೇಕಲ್ ಹೋಬಳಿ ವ್ಯಾಪ್ತಿಗೆ ಸೇರಿದ ಸಾರ್ವಜನಿಕರು ಲಿಖಿತ ದೂರುಗಳನ್ನು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜೆಡಿಎಸ್‌ಗೆ ಆಯ್ಕೆ
ಬಂಗಾರಪೇಟೆ: ತಾಲೂಕು ಜಾತ್ಯತೀತ ಜನತಾದಳ ಅಲ್ಪ ಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಮರಗಲ್ ಗ್ರಾಮದ ಸಜಾದ್ ಖಾನ್, ಕಾರ್ಯಾಧ್ಯಕ್ಷರಾಗಿ ನಯಿಮ್ ಪಾಷ, ಪ್ರಧಾನ ಕಾರ್ಯದರ್ಶಿಯಾಗಿ ಇಂತಿಯಾಜ್, ಉಪಾಧ್ಯಕ್ಷರಾಗಿ ನವ್ಶ್‌ದ್, ಸೈಯದ್ ಮೈನೋದೀನ್,ಅಲೀಂ ಖಾನ್, ಶೌಕತ್ ಅಲಿ ಖಾನ್ ಮತ್ತು ಸೈಯದ್ ರಿಯಾಸ್ ಪಾಷ, ಜಂಟಿ ಕಾರ್ಯದರ್ಶಿಯಾಗಿ ಸೇಕ್ ಮೌಲಾ ಮತ್ತು ಅಹ್ಮದ್ ಖಾನ್, ಸಂಘಟನಾ ಕಾರ್ಯದರ್ಶಿಯಾಗಿ ಸೈಯದ್ ಬಾಬು ಮತ್ತು ಬಾಬು ಖಾನ್ ಹಾಗೂ ನಗರ ಘಟಕದ ಪದಾಧಿಕಾರಿಗಳಾಗಿ ಗೌಸ್ ಪಾಷ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಗುಲ್ಜಾರ್, ಕಾರ್ಯಾಧ್ಯಕ್ಷರಾಗಿ ಷವರ್, ಕಾರ್ಯದರ್ಶಿಯಾಗಿ ಖಾಜಾ ಸಫಿರುಲ್ಲಾ, ಪ್ರದಾನ ಕಾರ್ಯದರ್ಶಿಯಾಗಿ ಅಲ್ಲಾ ಬಕಾಶ್ ಕಾನ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಇಬ್ರತುಲ್ಲಾ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.