ಕೊಡಗು

ಸಾಮೂಹಿಕ ಗಣಹೋಮ ಜು.1ರಂದು

Published On :

ಮಡಿಕೇರಿ: ಶ್ರೀ ಓಂಕಾರೇಶ್ವರ ದೇವಾಲಯದ ಆಶ್ರಯದಲ್ಲಿರುವ ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಜು. 1 ರಂದು ಬೆಳಗ್ಗೆ 9.30 ಗಂಟೆಗೆ ಸಾಮೂಹಿಕ ಗಣಹೋಮ ನಡೆಯಲಿದೆ. ಜು. 15ರಂದು ಸಂಜೆ 6.30 ಗಂಟೆಯಿಂದ ಅಂಗಾರಕ ಸಂಕಷ್ಟಿ ಪೂಜೆಯು ನಡೆಯಲಿದೆ. ಜು. 12ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಬೆಳಗ್ಗೆ 9.30 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯು ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಮೇಶ್ ಹೊಳ್ಳ ತಿಳಿಸಿದ್ದಾರೆ.
'ಮೈ ಸ್ಟ್ಯಾಂಪ್‌'
ಸೌಲಭ್ಯ ಆರಂಭ
ಮಡಿಕೇರಿ: ಅಂಚೆ ಚೀಟಿಯೊಂದಿಗೆ ಭಾವಚಿತ್ರವನ್ನು ಅಳವಡಿಸುವ ಅಂಚೆ ಇಲಾಖೆಯ ಯೋಜನೆ ಮೈ ಸ್ಟ್ಯಾಂಪ್ ಸೌಲಭ್ಯವನ್ನು ಮಡಿಕೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ಆರಂಭಿಸಲಾಗಿದೆ.
ಈ ಸೌಲಭ್ಯ ಪಡೆಯಲು ಆಸಕ್ತರು ಯಾವುದೇ ವಯಸ್ಸಿನ ನಿರ್ಭಂದವಿಲ್ಲದೆ ವಿಳಾಸದ ಗುರುತಿನ ಚೀಟಿಯೊಂದಿಗೆ ಬಂದು ರು. 300 (ಮುನ್ನೂರು ರೂಪಾಯಿ) ಪಾವತಿಸಬೇಕು. ನಿಮ್ಮ ಅಥವಾ ಕುಟುಂಬದ ಸಂಬಂಧಿಕರ, ಸ್ನೇಹಿತರ, ಭಾವಚಿತ್ರ ತೆಗೆಯುವ ಕಾರ್ಯವನ್ನು ಉಚಿತವಾಗಿ ಮಾಡಲಾಗುತ್ತದೆ. ತಕ್ಷಣವೇ  ಭಾವಚಿತ್ರ ಹೊಂದಿರುವ 12 ಅಂಚೆ ಚೀಟಿಗಳನ್ನು ನಿಮಗೆ ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಡಿಕೇರಿ: ನವದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‌ಫೇರ್ (ಐಸಿಸಿಡಬ್ಲ್ಯೂ) ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 6ರಿಂದ 15 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಪ್ರದರ್ಶಿಸಿರಬೇಕು. ಅಂತಹ ಪ್ರಕರಣವು ಜು.1, 2013ರಿಂದ 2014 ಜೂ.30ರೊಳಗೆ ನಡೆದಿರಬೇಕು. ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ಒಳಗೊಂಡಿದೆ. ಅರ್ಜಿ ಕಳುಹಿಸಿಕೊಡಲು ಜು.15 ಕೊನೆಯ ದಿನ. ಅರ್ಜಿ ನಮೂನೆಗಳಿಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಂತಾ ಕಾಂಪ್ಲೆಕ್ಸ್, ಓಂಕಾರೇಶ್ವರ ದೇವಸ್ಥಾನ ರಸ್ತೆ, ಕೊಡಗು ಜಿಲ್ಲೆ, ದೂ. 08272-228010 ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.