ಶ್ರೀ ಲಕ್ಷ್ಮೀನಾರಾಯಣ ಮಹಾಯಾಗ ನಾಳೆಯಿಂದ
ಸೋಮವಾರಪೇಟೆ: ಲೋಕ ಕಲ್ಯಾಣಾರ್ಥ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕಾಗಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಇಲ್ಲಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮಹಾಯಾಗ 25ರಿಂದ 29ರವರಗೆ ನಡೆಯಲಿದೆ ಎಂದು ದೇವಾಲಯ ಮಹಾಯಾಗ ಸಮಿತಿ ಗೌರವಾಧ್ಯಕ್ಷ ಎಸ್.ಜಿ. ಮೇದಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶ್ರೀ ಶಾಂತ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ, ಮಂಗಳೂರು ಯಕ್ಷಕ್ಷೇತ್ರ ಪ್ರತಿಷ್ಠಾನ ಸಹಯೋಗದಲ್ಲಿ, ಉಜ್ಜೈನಿಯ ಆಚಾರ್ಯ ಪಂಡಿತ್ ಲಕ್ಷ್ಮೀನಾರಾಯಣ ತಿವಾರಿ ಪೌರೋಹಿತ್ಯದಲ್ಲಿ ಮಹಾಯಾಗ ನಡೆಯಲಿದೆ.
25ರಂದು ಬೆಳಗ್ಗೆ 7ಗಂಟೆಗೆ ಯಾಗದ ಪೂಜಾ ಕಾರ್ಯಗಳು ಪ್ರಾರಂಭವಾಗಲಿವೆ. ಯಾಗ ಮುಗಿಯುವವರೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಮವಾರಪೇಟೆಯಿಂದ ವಾಹನದ ವ್ಯವಸ್ಥೆ ಇರುತ್ತದೆ.
ಗಣ್ಯರ ಉಪಸ್ಥಿತಿ: ರಾಜಸ್ಥಾನ ಪಿಲಾನಿಯ ಶ್ರೀ 108 ಕಪಿಲ್ಜೀ ಮಹಾರಾಜ್, ವಿಜಯವಾಡ ಧರ್ಮಪರಿಷತ್ ಸಂಸ್ಥಾಪಕ ಅವ್ವ ಹೇಮಚಂದ್ರ ಶರ್ಮ ವರಪ್ರಸಾದ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಸಿ.ಟಿ. ರವಿ, ಅಪ್ಪಚ್ಚು ರಂಜನ್, ಎಸ್. ಅಂಗಾರ, ಶಕುಂತಳಾ ಶೆಟ್ಟಿ, ಮಾಜಿ ಸಚಿವರಾದ ಬಿ.ಎ. ಜೀವಿಜಯ, ಕೃಷ್ಣ ಜೆ.ಪಾಲೆಮಾರ್ ಭಾಗವಹಿಸಲಿದ್ದಾರೆ.
ಮಾಹಿತಿಗಾಗಿ ದೂ. 9483843526, 9448005646, 9481772134 ಸಂಪರ್ಕಿಸಬಹುದು.
ದೇವಾಲಯ ಸಮಿತಿ ಕಾರ್ಯದರ್ಶಿ ವಿಜಯಕುಮಾರ್, ಸಹ ಕಾರ್ಯದರ್ಶಿ ಪ್ರದೀಪ್, ಚೌಡೇಶ್ವರಿ ಸಮಿತಿ ಕಾರ್ಯದರ್ಶಿ ದೇಶ್ರಾಜ್, ನಿರ್ದೇಶಕರಾದ ದಿನೇಶ್, ಪರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

