ಕೊಡಗು

ಮಿತಿ ಮೀರಿದ ಕಾಡಾನೆ ಹಾವಳಿ

Published On :

ಸಿದ್ದಾಪುರ: ಗುಹ್ಯ ಭಾಗದ ಕಾಫಿತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನಿಂದ ಅಪಾರ ಪ್ರಮಾಣದ ಕೃಷಿ ಫಸಲು ನಷ್ಟ ಉಂಟಾಗಿದ್ದು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಭಯಭೀತರಾಗಿ ಬದುಕುವಂತಾಗಿದೆ.
 ಕಳೆದ ಮೂರು ತಿಂಗಳಿಂದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮರಿಯಾನೆಗಳೊಂದಿಗೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು ತೋಟಗಳಲ್ಲಿ ನುಗ್ಗಿ ಅಪಾರ ಪ್ರಮಾಣದ ಕಾಫಿ, ತೆಂಗು, ಬಾಳೆ, ಬತ್ತ ಸೇರಿದಂತೆ ಕೃಷಿ ಫಸಲುಗಳನ್ನು ನಾಶ ಪಡಿಸುತ್ತಿದ್ದು ಬೆಳೆಗಾರರಿಗೆ ತುಂಬಾ ಸಂಕಷ್ಟ ಉಂಟು ಮಾಡುತ್ತಿದೆ.
 3 ದಿನಗಳ ಹಿಂದೆ ಮದುಸೂದನ್ ಅವರಿಗೆ ಸೇರಿದ ಕಾಫಿ ತೋಟದಲ್ಲಿ 50ಕ್ಕೂ ಹೆಚ್ಚು ತೆಂಗು ಸೇರಿದಂತೆ ಕೃಷಿ ಫಸಲುಗಳನ್ನು ನಾಶಪಡಿಸಿದ್ದು, ಅಂದಾಜು ರು. 5 ಲಕ್ಷಕ್ಕೂ ಹೆಚ್ಚು ಬೆಳೆಹಾನಿಯಾಗಿದೆ ಎಂದು ತಿಳಿಸಿದರು.
ಕೃಷಿ ಬೆಳೆಗಳಿಗೆ ಸಾಲ ಮಾಡಿ ಹಣ ಖರ್ಚು ಮಾಡುತ್ತಿದ್ದು, ಆನೆ ಹಾವಳಿಯಿಂದ ಫಸಲು ಕೈ ಸಿಗದಂತಾಗಿದೆ.
 ಕಾಟಾಚಾರಕ್ಕೆ ಬಂದು ಸ್ಧಳ ಪರಿಶೀಲನೆ ಮಾಡಿ ಅಲ್ಪ ಮೊತ್ತದ ಪರಿಹಾರ ಇಲಾಖೆ ನೀಡುತ್ತಿದ್ದು ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿದೆ.
ಈ ಭಾಗದಲ್ಲಿರುವ ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದು ತೋಟದ ಮಾಲೀಕರೇ ಕೆಲಸಗಳನ್ನು ನಿರ್ವಹಿಸುವಂತಾಗಿದೆ. ಶಾಲಾ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲಾಗದೇ ಮನೆಗಳಲ್ಲಿ ಉಳಿಯುವಂತಾಗಿದೆ. ಕೂಡಲೇ ಆನೆ ಹಾವಳಿ ತಡೆಗಟ್ಟಿ ಕೃಷಿ ಫಸಲುಗಳನ್ನು ರಕ್ಷಿಸಬೇಕೆಂದು ಭಾಗದ ನಿವಾಸಿಗಳು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.