ರಾಜಾಪುರದಲ್ಲಿ ಗಾಯಾಳು ಕಾಡಾನೆ ಸಾವು
ಮಡಿಕೇರಿ: ಕಾಡಾನೆ ತಿವಿತದಿಂದ ಗಾಯಗೊಂಡಿದ್ದ ಹೆಣ್ಣಾನೆಯೊಂದು ಸಾವಿಗೀಡಾದ ಘಟನೆ ಗೋಣಿಕೊಪ್ಪಲು ಬಳಿಯ ರಾಜಾಪುರದಲ್ಲಿ ನಡೆದಿದೆ. ಸಾವಿಗೀಡಾಗಿ 3 ದಿನಗಳಾಗಿರಬಹುದೆಂದು ಶಂಕಿಸಲಾಗಿದೆ. ತಿತಿಮತಿ ಅರಣ್ಯ ವಲಯದ ಕಾಫಿ ಬೆಳೆಗಾರರಾದ ಶಾರದಾ ಅವರಿಗೆ ಸೇರಿದ ತೋಟದಲ್ಲಿ ಹೆಣ್ಣು ಕಾಡಾನೆ ಶವ ಪತ್ತೆಯಾಗಿತ್ತು. ಮೃತಪಟ್ಟ ಆನೆಗೆ 25 ವರ್ಷವಿರಬಹುದೆಂದು ಅಂದಾಜಿಸಲಾಗಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆಯ ಶವ ಪತ್ತೆಯಾಗಿದೆ. ಮದ ಬಂದ ಗಂಡಾನೆ, ಹೆಣ್ಣಾನೆಗೆ ತಿವಿದಿದ್ದು, ಇದರಿಂದಾಗಿ ಗಾಯವಾದ ಜಾಗ ಕೊಳೆತು ಆನೆ ಸಾವನಪ್ಪಿದೆ. ಪಶು ವೈದ್ಯಾಧಿಕಾರಿ ಉಮಾಶಂಕರ್ ಶವ ಪರೀಕ್ಷೆ ನಡೆಸಿದರು. ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್ ಹಾಗೂ ಸಿಬ್ಬಂದಿ ಮೃತ ಕಾಡಾನೆ ಮಹಜರು ನಡೆಸಿದರು.
ಸಂಸದ ಆಪ್ತ ಸಹಾಯಕ ಪ್ರದೀಪ್ ಉತ್ತಯ್ಯ
ಮಡಿಕೇರಿ: ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಮಡಿಕೇರಿಯಲ್ಲಿನ ಕಚೇರಿಯಲ್ಲಿ ಸಂಸದರ ಆಪ್ತ ಸಹಾಯಕರಾಗಿ ಕಂಜಿತಂಡ ಪ್ರದೀಪ್ ಉತ್ತಯ್ಯ ನೇಮಕಗೊಂಡಿದ್ದಾರೆ. ಸಂಸದರಿಗೆ ಮನವಿ ಸಲ್ಲಿಸಲು ಮಡಿಕೇರಿ ಕೋಟೆ ಆವರಣದಲ್ಲಿನ ಸಂಸದರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

