ಕೊಡಗು

'ಬಿಎಸ್‌ಎನ್‌ಎಲ್ ಹಳ್ಳ'; ಸಂಚಾರ ಸಂಚಕಾರ

Published On :

ಶನಿವಾರಸಂತೆ: ಸಮೀಪದ ಗೊಣಿಮಾರೂರು ಗ್ರಾಮಪಂಚಾಯ್ತಿಯ ಬಾಣವಾರ ಗೇಟ್ ಬಳಿ ಬಿಎಸ್‌ಎನ್‌ಎಲ್‌ನವರು ರಸ್ತೆ ಪಕ್ಕ ತೋಡಿಗ ಹಳ್ಳವನ್ನು ಮುಚ್ಚದೆ ಬಿಟ್ಟಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಈ ವ್ಯಾಪ್ತಿಯ ದೂರವಾಣಿ ಸಂಪರ್ಕಗಳು ಸ್ಥಗಿತಗೊಂಡಿದ್ದವು. ಇದನ್ನು ಸರಿಪಡಿಸಲು ಇಲಾಖೆ ಶನಿವಾರಸಂತೆ ಕುಶಲನಗರ ಮುಖ್ಯರಸ್ತೆಯ ಬಾಣವಾರ ಗೇಟ್ ಬಳಿ ಸುಮಾರು 6 ಅಡಿ ಆಳದಷ್ಟು ಅಗೆದು ದೂರವಾಣಿ ಸಂಪರ್ಕ ಸರಿಪಡಿಸಿತು.
ಆದರೆ ಮುಖ್ಯರಸ್ತೆಯ ಪಕ್ಕ ಹಳ್ಳ ತೋಡಿ ಹಾಗೆಯೇ ಬಿಟ್ಟಿದ್ದಾರೆ. ಈ ಹಳ್ಳದಿಂದಾಗಿ ವಾಹನ ಸವಾರರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ನಂತರ ಅಲ್ಪ ಸ್ವಲ್ಪ ಮಣ್ಣು ಹಾಕಿ ಸರಿಪಡಿಸಿದರು.
ಇದನ್ನು ನಂತರ ಹಾಗೆಯೇ ಬಿಟ್ಟಿದ್ದರು. ಇದೀಗ, ಈ ಅಗೆದ ರಸ್ತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದೀಗ ಈ ಅಗೆದ ರಸ್ತೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು  ವೇಗವಾಗಿ ಬರುವ ವಾಹನಗಳು ದೂರವಾಣಿ ಇಲಾಖೆ ತೋಡಿರುವ ಹಳ್ಳದಲ್ಲಿ ಬೀಳುವ ಅಪಾಯವಿದೆ.
ಮಳೆಗೆ ಈ ಹಳ್ಳದಲ್ಲಿ ನೀರು ರಸ್ತೆಗೆ ಸಮಾನವಾಗಿ ನಿಲ್ಲುತ್ತಿದ್ದು ಹಳ್ಳ ಯಾವುದು? ರಸ್ತೆ ಯಾವುದೆಂದು ಗೊತ್ತಾಗದೆ ಪ್ರತಿನಿತ್ಯ ಈ ಹಳ್ಳಕ್ಕೆ ಬಿದ್ದು ಏಳುವಂತಾಗಿದ್ದು ಈ ಬಗ್ಗೆ ಸಂಬಂಧಪಟ್ಟವರಿಗೆ ಖುದ್ದಾಗಿ ಗೋಣಿಮಾರೂರು ಗ್ರಾಮಪಂಚಾಯ್ತಿ ಅದ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ. ಆದರೂ, ಈ ವರೆಗೆ ಯಾವುದೇ ಕ್ರಮ ಕೈಗೊಳ್ಳಲು ಪಂಚಾಯಿತಿ ಮುಂದಾಗಿಲ್ಲ.
ಈ ರಸ್ತೆಯಲ್ಲಿ ಪ್ರತಿನಿತ್ಯ ಶನಿವಾರಸಂತೆಯಿಂದ ಮೈಸೂರು, ವಿರಾಜಪೇಟೆ, ಸೋಮವಾರಪೇಟೆ, ಹಾಸನ ಮುಂತಾದೆಡೆಗೆ ನೂರಾರು ವಾಹನಗಳು ಹಗಲು ರಾತ್ರಿ ಸಂಚರಿಸುತ್ತಿವೆ. ಈ ಹಳ್ಳವನ್ನು ನೋಡದ ಜನಪ್ರತಿನಿಧಿಗಳಿಲ್ಲ, ಅಧಿಕಾರಿಗಳಿಲ್ಲ. ಆದರು ಮುಖ್ಯರಸ್ತೆಯಲ್ಲಿ ಹಳ್ಳ ತೋಡಿ ಮೌನವಾಗಿರುವ ದೂರವಾಣಿ ಇಲಾಖೆ ತಕ್ಷಣ ಸರಿಪಡಿಸಲು ಮುಂದಾಗದಿರುವುದು ವಿಪರ್ಯಾಸ.
ತಕ್ಷಣ ಈ ರಸ್ತೆ ಸರಿಪಡಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕೆಂದು ಗೋಣಿಮಾರೂರು ಗ್ರಾ.ಪಂ ಅದ್ಯಕ್ಷ ಚಂದ್ರಶೇಖರ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.