ಒಣಗಿದ ಮರ ಬಿದ್ದು ಮಹಿಳೆ ಸಾವು
ಸೋಮವಾರಪೇಟೆ: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಒಣಗಿದ ಮರ ಕಾರ್ಮಿಕ ಮಹಿಳೆ ಮೇಲೆ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಕಿರಗಂದೂರು ಗ್ರಾಮದಲ್ಲಿ ಸಂಭವಿಸಿದೆ.
ನಗರ ಸಮೀಪದ ಬಜೆಗುಂಡಿ ಗ್ರಾಮದ ದಿ. ಬೋಜ ಎಂಬವರ ಪತ್ನಿ ರಾಧ (50) ಮೃತರು.
ಭಾನುವಾರ ಅವರಿಗೆ ಕಿರಗಂದೂರು ಗ್ರಾಮದ ಚಂಗಪ್ಪ ಎಂಬವರ ತೋಟದಲ್ಲಿ ಗೊಬ್ಬರ ಹಾಕುವ ಕೆಲಸವಿತ್ತು. ಇತರ ಕಾರ್ಮಿಕರೊಂದಿಗೆ ಗೊಬ್ಬರ ಹಾಕಿ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಕೆಲಸದ ಮಧ್ಯೆ ಕೆಲ ನಿಮಿಷ ವಿಶ್ರಾಂತಿ ತೆಗೆದುಕೊಳ್ಳಲೆಂದು ತೋಟದೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕುಳಿತಿದ್ದರು.
ಈ ಸಂದರ್ಭ ಇದ್ದಕ್ಕಿದಂತೆ ಮರ ಮುರಿದ ಶಬ್ದ ಕೇಳಿದೆ. ಶಬ್ದ ಕೇಳಿದ ತಕ್ಷಣ ಎಲ್ಲರೂ ಅಲ್ಲಿಂದ ಓಡಿಹೋಗಿದ್ದಾರೆ. ಅವರಲ್ಲಿ ರಾಧ ಓಡುವುದು ಸ್ವಲ್ಪ ತಡವಾದ್ದರಿಂದ ಮುರಿದು ಬಿದ್ದ ಒಣಗಿದ ಮರ ತಲೆ ಮೇಲೆ ಬಿದ್ದಿದೆ. ಪರಿಣಾಮ ತಲೆ, ಮುಖ ಭಾಗಕ್ಕೆ ತೀವ್ರ ಗಾಯಗಳಾಗಿ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ರಾಧ ಅವರ ಪತಿ ಬೋಜ ನಿಧನರಾಗಿ ಒಂದು ವರ್ಷ ಸಂದ ದಿನವೇ ಪತ್ನಿ ರಾಧ ಮೃತರಾಗಿದ್ದಾರೆ. ರಾಧರೊಂದಿಗೆ ಮಗಳೂ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಮಗಳಿಗೆ ಜ್ವರ ಬಾಧಿಸಿದ್ದ ಕಾರಣ ಭಾನುವಾರ ಕೆಲಸಕ್ಕೆ ಹೋಗಿರಲಿಲ್ಲ. ಇದೀಗ ಅಪ್ಪ, ಅಮ್ಮನನ್ನು ಕಳೆದುಕೊಂಡ ಮಗಳು ಏಕಾಂಗಿಯಾಗಿದ್ದಾಳೆ. ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ನಂದೀಶ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

