ಕೊಡಗು

ಅಂದು ಪ್ರವಾಹ, ಇಂದು ಹರಿವೇ ಇಲ್ಲ!

Published On :

ಮಡಿಕೇರಿ: ಕಾವೇರಿಯ ಉಗಮತಾಣ ತಲಕಾವೇರಿ ಮತ್ತು ದಕ್ಷಿಣ ಪ್ರಯಾಗ ಕ್ಷೇತ್ರ ಭಾಗಮಂಡಲದಲ್ಲಿಯೇ ಈ ವರ್ಷ ಮಳೆ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾಗಮಂಡಲದಲ್ಲಿ ಈ ಸಲ 100 ಸೆಂಟಿ ಮೀಟರ್‌ನಷ್ಟು ಮಳೆಯ ಕೊರತೆ ಕಂಡುಬಂದಿದೆ.
 ಕಳೆದ ವರ್ಷ ಜುಲೈ 4 ರಂದು ತ್ರಿವೇಣಿ ಸಂಗಮದಲ್ಲಿ ಕಾವೇರಿ ಪ್ರವಾಹ ಪರಿಸ್ಥಿತಿ ಕಂಡುಬಂದಿದ್ದರೆ ಈ ಬಾರಿ ನದಿ ನೀರಿನ ಹರಿವೇ ಕ್ಷೀಣಿಸಿದೆ.
ಜುಲೈ ತಿಂಗಳ ಮೊದಲ ವಾರ ಮುಗಿಯುತ್ತಾ ಬಂದರೂ ಕೊಡಗಿನಲ್ಲಿ ವರುಣನ ಸುಳಿವಿಲ್ಲ. ಎಲ್ಲೆಡೆ ಬಿಸಿಲಿನ ವಾತವರಣವೇ ಇದ್ದು, ತುಂತುರು ಮಳೆ ಆಗಿಂದಾಗ್ಗೆ ಬರುತ್ತಿದ್ದರೂ ಮುಂಗಾರು ಮಳೆಯ ಲಕ್ಷಣವೇ ಇಲ್ಲ. ಕಾವೇರಿ ಉಗಮ ತಾಣ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿಯೂ ವರ್ಷಧಾರೆ ಇಲ್ಲ. ಸಾಮಾನ್ಯವಾಗಿ ಕೊಡಗಿನಲ್ಲಿ ಧಾರಾಕಾರ ಮಳೆ ಆರಂಭವಾಗುವುದೇ ಬ್ರಹ್ಮಗಿರಿ ತಪ್ಪಲಿನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ. ಆದರೆ ಈ ವರ್ಷ ತುಂತುರು ಮಳೆ ಮಾತ್ರ ಬರುತ್ತಿದೆ.
ಕಾವೇರಿ ಹರಿವು ಕ್ಷೀಣ: ಕಳೆದ ವರ್ಷ ಭಾಗಮಂಡಲದಲ್ಲಿ 214 ಸೆಂ. ಮೀಟರ್ ಮಳೆಯಾಗಿದ್ದರೆ, ಈ ವರ್ಷ 112 ಸೆಂ.ಮೀ. ಮಾತ್ರ ಮಳೆ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾಗಮಂಡಲದಲ್ಲಿಯೇ 102 ಸೆಂ.ಮೀ. ಗಳಷ್ಟು ಮಳೆ ಕಡಿಮೆಯಾಗಿದೆ. ಜೂನ್ ತಿಂಗಳಲ್ಲಿ ಕಳೆದ ವರ್ಷ 159 ಸೆಂ.ಮೀ. ಮಳೆಯಾಗಿದ್ದರೆ ಈ ವರ್ಷ ಜೂನ್ ತಿಂಗಳಲ್ಲಿ 73 ಸೆಂ.ಮೀ. ಮಾತ್ರ ಮಳೆ ಬಿದ್ದಿದೆ.. ಹೋಲಿಕೆಯಲ್ಲಿ ಭಾಗಮಂಡಲದಲ್ಲಿ ಜೂನ್ ತಿಂಗಲೊಂರಲ್ಲಿಯೇ 86 ಸೆಂ.ಮೀ. ಮಳೆಯಾಗಿದೆ.
 ಆಕಾಶದಲ್ಲಿ ಕಾಣುವ ಮೋಡಗಳ ಸಾಲು ಸಾಲು, ಮಳೆಯ ಸಿಂಚನ ಮಾತ್ರ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ತವರೇ ಈಗ ಮಳೆಯಿಲ್ಲದೆ ಸೊರಗುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.