ಫೆ.16-17 ರಂದು ಸೂಪರ್ ಸೆವೆನ್ ಪಂದ್ಯಾವಳಿ
ಮಡಿಕೇರಿ: ಮಡಿಕೇರಿಯ ಮ್ಯಾನ್ಸ್ ಕಂಪೌಂಡ್ ಮೈದಾನದಲ್ಲಿ ಫೆ.16 ಮತ್ತು 17 ರಂದು ಸೂಪರ್ ಸೆವೆನ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಕ್ಕೆ ಪಾರಿತೋಷಕ ಹಾಗೂ ರು. 12 ಸಾವಿರ ಪ್ರಥಮ ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಪಾರಿತೋಷಕ ಹಾಗೂ ರು. 6 ಸಾವಿರ ನಗದು ಬಹುಮಾನ ನೀಡಲಾಗುವುದು. ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449767492 ಮತ್ತು 9535418041ನ್ನು ಸಂಪರ್ಕಿಸಬಹುದು.
ವಿವಿಧ ತರಬೇತಿ: ಅರ್ಜಿ ಆಹ್ವಾನ
ಮಡಿಕೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 2012-13ನೇ ಸಾಲಿಗೆ ನರ್ಸಿಂಗ್ ಮತ್ತು ಕೌಶಲ್ಯ ಯೋಜನೆಯಡಿ ನೀಡುವ ಪ್ಲಾಸ್ಟಿಕ್ ಪ್ರೊಸೆಸಿಂಗ್ ಟೆಕ್ನಾಲಜಿ ತರಬೇತಿ ಪಡೆಯಲು ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜ.30 ಕೊನೆಯ ದಿನ.
ಕೋರ್ಸ್ ವಿವರ: ಇನ್ಜೆಕ್ಷನ್ ಮೌಲ್ಡಿಂಗ್ ಮೆಶಿನ್ ಆಪರೇಶನ್ ಆಂಡ್ ಮೈಂಟೆನನ್ಸ್, ವಿದ್ಯಾರ್ಹತೆ ಪಿಯುಸಿ, ಪದವಿ ಹೊಂದಿರಬೇಕು. 18ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿ 6 ತಿಂಗಳು. ರು. 22,000 ಆದಾಯ ಮಿತಿಯೊಳಗಿರಬೇಕು.
ಮೌಲ್ಡ್ ಮೇಕಿಂಗ್ ಟೆಕ್ನಾಲಜಿ: ವಿದ್ಯಾರ್ಹತೆ ಎಸ್ಎಸ್ಎಲ್ಸಿ/ ಪದವಿ ಹೊಂದಿರಬೇಕು. 18ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿ 6 ತಿಂಗಳು. ರು. 22,000 ಆದಾಯ ಮಿತಿಯೊಳಗಿರಬೇಕು.
ನರ್ಸಿಂಗ್: ವಿದ್ಯಾರ್ಹತೆ ಎಸ್ಎಸ್ಎಲ್ಸಿ/ ಪಿಯುಸಿ/ ಪದವಿ ಹೊಂದಿರಬೇಕು. 17ರಿಂದ 25 ವರ್ಷದೊಳಗಿರಬೇಕು. ರು. 1 ಲಕ್ಷ ಆದಾಯ ಮಿತಿಯೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮ್ಯಾನ್ಸ್ ಕಂಪೌಂಡ್ ಹತ್ತಿರ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿ ಅಥವಾ ದೂ. ಸಂಖ್ಯೆ -08272225628 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

