ಐನ್ಮನೆಯಲ್ಲಿ ಕಾರ್ಯಪ್ಪ ಜಯಂತಿ
ಗೋಣಿಕೊಪ್ಪಲು: ಇದೇ ಪ್ರಥಮ ಬಾರಿಗೆ ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದ ಕೊಡೆಂದೇರ ಐನ್ಮನೆಯಲ್ಲಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ, ಕೊಡೆಂದೇರ ಜನರಲ್ ತಿಮ್ಮಯ್ಯ ಹಾಗೂ ಕುಟುಂಬದ ಹಿರಿಯರಿಗೆ ಕೊಡೆಂದೇರ ಕುಟುಂಬಸ್ಥರೇ ಆದ ಮೇಜರ್ ಜನರಲ್ ಕೊಡಂದೇರ ಅರ್ಜುನ ಮುತ್ತಣ್ಣ ನಮನ ಸಲ್ಲಿಸಿದರು.
ಕುಂದದ ಕೊಡಂದೇರ ಐನ್ಮನೆಯಲ್ಲಿ ಎಫ್.ಎಂ. ಕಾರ್ಯಪ್ಪ ಅವರ 114ನೇ ಸಂಭ್ರಮಾಚರಣೆ ಕಂಡುಬಂತು. 9 ಗಂಟೆ ಸುಮಾರಿಗೆ ಆಗಮಿಸಿದ ಮೇಜರ್ ಜನರಲ್ ಮುತ್ತಣ್ಣ, ದೀಪಕ್ಕೆ ಕೈಮುಗಿದು ಹಿರಿಯರನ್ನು ಪ್ರಾರ್ಥಿಸಿದರು.
ಕೊಡಂದೇರ ಕುಟುಂಬದ ಅಧ್ಯಕ್ಷ ಕೆ.ಎಂ. ದೇವಯ್ಯ, ಕಾರ್ಯದರ್ಶಿ ಕೆ.ಟಿ. ಕರುಂಬಯ್ಯ, ನಿವೃತ್ತ ಐಎಎಸ್ ಅಧಿಕಾರಿ ಕೆ.ಎಂ. ಮಂದಣ್ಣ, ಫೋರಂ ನಿರ್ದೇಶಕ ಶಂಭು ಅಯ್ಯಣ್ಣ ಮುಂತಾದವರು ಮೇಜರ್ ಜನರಲ್ ಮುತ್ತಣ್ಣ ಅವರನ್ನು ಸ್ವಾಗತಿಸಿದರು.
ಜಿ.ಪಂ. ಸದಸ್ಯ ಕೊಡಂದೇರ ಗಣಪತಿ ಅವರು ಐನ್ಮನೆಗೆ ಭೇಟಿ ನೀಡಿದ ಕುಟುಂಬಸ್ಥರನ್ನು ಸ್ವಾಗತಿಸಿದರಲ್ಲದೆ, ಯಾವದೇ ಶುಭಕಾರ್ಯ ಐನ್ಮನೆಯಿಂದ ಅರಂಭಗೊಳ್ಳಲಿ. ಗುರು ಹಿರಿಯರ ಆಶೀರ್ವಾದದೊಂದಿಗೆ ಆರಂಭಗೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ವಿಘ್ನ ಇರುವದಿಲ್ಲ ಎಂದು ಹೇಳಿದರು.
ಅತಿಥಿಗಳಿಗೆ ಲಘು ಉಪಾಹಾರವನ್ನು ಐನ್ಮನೆಯಲ್ಲಿ ಏರ್ಪಡಿಸಲಾಗಿತ್ತು. ಐನ್ಮನೆ ಮುಂಭಾಗದ ಆವರಣದಲ್ಲಿ ಸಭೆ ನಡೆಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಸಾಧನೆಯ ಗುಣಗಾನ ಮಡಲಾಯಿತು.
ಬ್ರಿಟಿಷ್ ಸರ್ಕಾರದಲ್ಲಿ ಸಹಾಯಕ ಕಮಿಷನರ್ ಆಗಿದ್ದ, ಹಾಗೂ ಕೊಡಗು ಡಿಸಿಸಿ ಬ್ಯಾಂಕ್ನ ಸ್ಥಾಪಕ ಅಧ್ಯಕ್ಷರಾಗಿದ್ದ ರಾವ್ ಬಹದ್ದೂರ್ ಕುಟ್ಟಯ್ಯ ಅವರ ಸಾಧನೆಯನ್ನೂ ಈ ಸಂದರ್ಭ ಮೆಲುಕು ಹಾಕಲಾಯಿತಲ್ಲದೆ, ಕೊಡಂದೇರ ಕುಟುಂಬದಲ್ಲಿ ಮತ್ತಷ್ಟು ವೀರಾ ಸೇನಾನಿಗಳು ಹುಟ್ಟಿ ಬರಲಿ ಎಂದು ಫೋರಂ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ ಅವರು ಹಾರೈಸಿದರು.
ಕೊಡಂದೇರ ಐನ್ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಟುಂಬ ಸದಸ್ಯರಾದ ಖಜಾಂಜಿ ಕೆ.ಎಸ್. ಕಿರಣ್, ಕೆ.ಕೆ.ನರೇನ್, ರಂಜನ್, ಗ್ರೇಷ್ಮಾ ಗಣಪತಿ, ಕೆ.ಎಂ. ಮಂದಣ್ಣ, ಡಾಟಿ ಮಂದಣ್ಣ, ಸಂದ್ಯಾ, ಉತ್ತರೆ ತಿಮ್ಮಯ್ಯ, ನಮಿತಾ, ಕೆ.ಎಂ. ಕಾರ್ಯಪ್ಪ( ಗೇರುಬಾಣೆ) ಕೊಡಂದೇರ ಚಂಗಪ್ಪ, ಕಂಡ್ರತಂಡ ಬೋಜಿ ಸುಬ್ಬಯ್ಯ ಅವರು ಪಾಲ್ಗೊಂಡಿದ್ದರು.
ನಂತರ 10 ಗಂಟೆ ಸುಮಾರಿಗೆ ಅಜರ್ಮೆನ್ ಮುತ್ತಣ್ಣ ಶಂಕು ಸ್ಥಾಪನೆಗೆ ಗೋಣಿಕೊಪ್ಪಲಿಗೆ ಆಗಮಿಸಿದರು. ಈ ಸಂದರ್ಭ ಮಡಿಕೇರಿ ಎಫ್.ಎಂ.ಕೆ.ಎಂ.ಸಿ ಕಾಲೇಜು ಎನ್ಸಿಸಿ ಘಟಕದ ವತಿಯಿಂದ ಮೇಜರ್ ಜನರಲ್ ಮುತ್ತಣ್ಣ ಅವರಿಗೆ ಗೌರವ ವಂದನೆ ಅರ್ಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

