ಸೈನಿಕ ಶಾಲೆಗೆ ಕೊಡಗು ಅಭ್ಯರ್ಥಿಗಳ ಬರ: ಪೂವಯ್ಯ
ಗೋಣಿಕೊಪ್ಪಲು: ಕೊಡಗು ಸೈನಿಕ ಶಾಲೆಗೆ ಇತ್ತೀಚೆಗೆ ಆಯ್ಕೆ ಪರೀಕ್ಷೆ ನಡೆದು ಒಟ್ಟು 150 ಮಂದಿ ಅಭ್ಯರ್ಥಿಗಳಲ್ಲಿ ಕೊಡಗಿನ 6 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ವೀರ ಸೇನಾನಿಗಳ ನಾಡಿನಲ್ಲಿ ಸ್ಥಾಪಿತವಾಗಿರುವ ಸೈನಿಕ ಶಾಲೆಯ ಆಯ್ಕೆ ಪರೀಕ್ಷೆಗೆ ಕೊಡಗಿನಿಂದ ಕೇವಲ 12 ಮಂದಿ ಅಭ್ಯರ್ಥಿಗಳು ಮಾತ್ರಾ ಅರ್ಜಿ ಸಲ್ಲಿಸಿರುವುದು ಅವಮಾನಕರ ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆ ಸಂಪಾದಕ ಉಳ್ಳಿಯಡ. ಎಂ. ಪೂವಯ್ಯ ವಿಷಾದಿಸಿದರು.
ಇತ್ತೀಚೆಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಜರುಗಿದ ಪೊನ್ನಂಪೇಟೆ ಗೋಲ್ಡನ್ ಜೇಸಿಐನ 10ನೇ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ 2 ಸೈನಿಕ ಶಾಲೆಯಿದ್ದು, ಇತ್ತೀಚೆಗೆ 6ನೇ ತರಗತಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಆಯ್ಕೆ ಸಂದರ್ಭ ಉತ್ತರ ಕರ್ನಾಟಕದಿಂದ ಸುಮಾರು 5- 6 ಬಸ್ಗಳಲ್ಲಿ 150ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು, ಪೋಷಕರು, ತರಬೇತುದಾರರು ಕೂಡಿಗೆಗೆ ಬಂದಿದ್ದರು. ಉತ್ತರ ಕರ್ನಾಟಕದ ಹಲವೆಡೆ ಗೂಡಂಗಡಿಗಳಂತೆ
ಸೈನ್ಯಕ್ಕೆ ಸೇರಲು ಅಗತ್ಯ ತರಬೇತಿ ಕೇಂದ್ರಗಳಿವೆ. ಆದರೆ, ಕೊಡಗಿನಲ್ಲಿ ಅಂತಹಾ ವ್ಯವಸ್ಥೆ ಇಲ್ಲ. ಇನ್ನು ಮುಂದೆ ಪೊನ್ನಂಪೇಟೆ ಜೇಸಿ ಸಂಸ್ಥೆಯು ಸೈನಕ್ಕೆ ಸೇರಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದರೊಂದಿಗೆ ಅಗತ್ಯ. ಪೂರ್ವಭಾವಿ ತರಬೇತಿ ಕಾರ್ಯಾಗಾರವನ್ನು ತಮ್ಮ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಅವರು ಸಲಹೆ ನೀಡಿದರು.
ವಲಯ 14ರ 2013ನೇ ಸಾಲಿನ ವಲಯಾಧ್ಯಕ್ಷ ದೇವಿ ಪ್ರಸಾದ್ ಮಾತನಾಡಿ, ಜೇಸಿ ಸಂಸ್ಥೆಗಳು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದರು.
ಪದಗ್ರಹಣ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ವಲಯ 14ರ ಉಪಾಧ್ಯಕ್ಷ ಮಧೋಶ್ ಪೂವಯ್ಯ ಮಾತನಾಡಿ, ವಲಯ 14ರ ಪೊನ್ನಂಪೇಟೆ ಗೋಲ್ಡನ್ ಜೇಸಿ ಸಂಸ್ಥೆಯು ಸಾಧನಾ ಶ್ರೀ ಪ್ರಶಸ್ತಿಯೊಂದಿಗೆ ನಂ. 1ರ ಸ್ಥಾನದಲ್ಲಿದೆ. 2013ರಲ್ಲಿಯೂ ನೂತನ ಘಟಕಾಧ್ಯಕ್ಷ ರಾಬಿನ್ ಸುಬ್ಬಯ್ಯ ಅವರ ಅವಧಿಯಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಬೇಕು ಎಂದು ಶುಭ ಹಾರೈಸಿದರು.
ರಾಬಿನ್ ಸುಬ್ಬಯ್ಯ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಶಿವಾ ನಾಚಪ್ಪ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿಯಾಗಿ ನಿರನ್ ಮೊಣ್ಣಪ್ಪ ಅವರು ಎಂ.ಟಿ. ನಂಜಪ್ಪ ಅವರಿಂದ ಅಧಿಕಾರವಹಿಸಿಕೊಂಡರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ರಾಜಾ ಸುಬ್ಬಯ್ಯ, ಜೇಸೀರೆಟ್ ಪುಷ್ಪಾ ನಂಜಪ್ಪ, ಜೂಲಿ ಅನೀಶ್, ಜ್ಯೂನಿಯರ್ ಜೇಸಿ ಅಧ್ಯಕ್ಷೆ ಶ್ರಾವ್ಯ, ನೂತನ ಅಧ್ಯಕ್ಷ ಯಕ್ಷ ಅಪ್ಪಣ್ಣ, ಖಜಾಂಚಿ ಸಿ.ಪಿ. ಸೂರಜ್ ಇದ್ದರು.
ನೂತನ ಪದಾಧಿಕಾರಿಗಳಾಗಿ ನಟೇಶ್ ತಿಮ್ಮಯ್ಯ, ಸುಜು ಕರುಂಬಯ್ಯ, ನವೀನ್ ಪೂನ್ನಪ್ಪ, ದಿನೇಶ್ ಚಿಟ್ಟಿಯಪ್ಪ, ಬಿ.ಕೆ. ನವೀನ್, ಭರತ್, ಸಜನ್ ಸೋಮಣ್ಣ, ಅರುಣ್, ನಾಚಪ್ಪ, ಕಿಶನ್ ಸುಬ್ಬಯ್ಯ ಅವರಿಗೆ ಪ್ರಮಾಣ ವಚನ ಭೋದಿಸಲಾಯಿತು.
ನೂತನ ಸದಸ್ಯರಾಗಿ ಕೋದೇಂಗಡ ದೀಪಕ್ ತಿಮ್ಮಯ್ಯ, ಪೆಮ್ಮಂಡ ಡ್ಯಾನಿ, ತೀತಿಮಾಡ ಪವಿ ಮೊಣ್ಣಪ್ಪ, ಚೆಪ್ಪುಡಿರ ಬೋಪಣ್ಣ ಕೊಣಿಯಂಡ ಸಂಜು ಸೋಮಯ್ಯ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಶಿವಾ ನಾಚಪ್ಪ ಸ್ವಾಗತಿಸಿ, ನಿರನ್ ಮೊಣ್ಣಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

