ಮೊರಾರ್ಜಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಶನಿವಾರಸಂತೆ: ಆಲೂರು ಸಿದ್ದಾಪುರ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ 64ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸ್ಥಳೀಯ ಮೊರಾರ್ಜಿ ವಸತಿ ಶಾಲೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷ ಅಶೋಕ್ ನೆರವೇರಿಸಿದರು. ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಕುಮಾರ್, ಜಿ.ಪಂ. ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಅಶೋಕ್, ಆಲೂರು ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಕೆ. ಚಂದ್ರಶೇಖರ್, ಐ.ಟಿ.ಐ ಪ್ರಾಂಶುಪಾಲ ಗಂಗದಾರ್, ಆಲೂರು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹಾಲಿಂಗ ಯು, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಮ್ಮ , ಭೋಜಪ್ಪ, ಪಿ.ಡಿ.ಒ. ಸಂತೋಷ, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಭಾರತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದರು.
ಕೊಡವ ಪಾಟ್ಕೋರ್ ಆಟ್ ಸ್ಪರ್ಧೆ
ಮಡಿಕೇರಿ: ಮಡಿಕೇರಿಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡವ ಪಾಟ್ಕೋರ್ ಆಟ್ ಸ್ಪರ್ಧೆ ಯೋಜನೆ ಇವರ ವತಿಯಿಂದ ಕೊಡವ ನೃತ್ಯವನ್ನು ಜನಪ್ರಿಯಗೊಳಿಸಲು ಮತ್ತು ಹೊಸ ಹೊಸ ಕೊಡವ ಹಾಡುಗಳಿಗೆ ನೃತ್ಯ ಸಂಯೋಜಿಸಿ, ಕೊಡವ ಸಮೂಹ ನೃತ್ಯ ತಂಡಗಳನ್ನು ಕಟ್ಟುವ ಪ್ರಯತ್ನದ ಯೋಜನೆ ಕೊಡವ ಪಾಟ್ಕೋರ್ ಆಟ್. ಈ ಸಮೂಹ ನೃತ್ಯ ತಂಡಗಳನ್ನು ಸ್ಪರ್ಧೆ ನಡೆಸಲು ಆಹ್ವಾನಿಸಲಾಗಿತ್ತು. ಭಾರತೀಯ ವಿದ್ಯಾಭವನದಲ್ಲಿ ಗುರುವಾರ ಪದವಿ ಪೂರ್ವ ಕಾಲೇಜಿಗೆ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದೊಡ್ಡವರ ವಿಭಾಗ, 10ನೇ ತರಗತಿಯ ಒಳಗಿನ ವಿದ್ಯಾರ್ಥಿಗಳಿಗೆ ಮಕ್ಕಳ ವಿಭಾಗ ಎಂದು ವಿಭಾಗಿಸಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯ ವಿಜೇತರ ವಿವರ- ಕೊಡವ ಸಾಹಿತ್ಯ ಅಕಾಡೆಮಿ ನಡೆಸಿದ ಕೊಡವ ಪಾಟ್ಕೋರ್ ಆಟ್ ಸ್ಪರ್ಧೆಯಲ್ಲಿ ದೊಡ್ಡವರ ವಿಭಾಗದಲ್ಲಿ ಎರಡು ತಂಡಗಳು ಮಾತ್ರ ಸ್ಪರ್ಧಿಸಿದ್ದು, ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜ್ ಮತ್ತು ಕಾವೇರಿ ಪದವಿ ಕಾಲೇಜ್. ಸ್ಪರ್ಧೆಯ ಬಹುಮಾನದ ವಿವರ- ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿಗೆ ಮೊದಲನೇ ಬಹುಮಾನ ರು. 10,000, ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿಗೆ ಎರಡನೇ ಬಹುಮಾನ ರು. 7,000.ಮಕ್ಕಳ ವಿಭಾಗದ ಸ್ಪರ್ಧೆ- ಈ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ಏಳು ತಂಡಗಳು- ಪೊನ್ನಂಪೇಟೆಯ ವಿದ್ಯಾಲಯದ ಅಪ್ಪಚ್ಚಕವಿ, ಶ್ರೀ ಸಾಯಿ ಶಂಕರ್ ವಿದ್ಯಾಸಂಸ್ಥೆ, ಟಿ. ಶೆಟ್ಟಿಗೇರಿಯ ರೂಟ್ಸ್ಕೂಲ್, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ವಿರಾಜಪೇಟೆಯ ರೋಟರಿ ಸ್ಕೂಲ್, ಮೂರ್ನಾಡ್ ಮಾರುತಿ ಸ್ಕೂಲ್, ಜ್ಞಾನಜ್ಯೋತಿ ಸ್ಕೂಲ್. ಸ್ಪರ್ಧೆಯ ಬಹುಮಾನ- ಮೊದಲನೇ ಬಹುಮಾನ ರೋಟರಿ ಸ್ಕೂಲ್, ವಿರಾಜಪೇಟೆ ರು. 10,000, ಎರಡನೇ ಬಹುಮಾನ ಅಪ್ಪಚ್ಚಕವಿ ವಿದ್ಯಾಲಯ, ಪೊನ್ನಂಪೇಟೆ ರು. 7,000, ಮೂರನೇ ಬಹುಮಾನ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಮಡಿಕೇರಿ ರು. 5,000. ತೀರ್ಪುಗಾರರಾಗಿ ನೃತ್ಯ ಮತ್ತು ಸಂಗೀತ ಕಲಾ ನಿರ್ದೇಶಕ ವಿನಯ ಕೃಷ್ಣಮೂರ್ತಿ, ಮಡಿಕೇರಿ ಮತ್ತು ಶ್ರೀ ಬಿ.ಸಿ ಶಂಕರಯ್ಯ, ಕುಶಾಲನಗರ ಸಹಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

