ಕೊಡಗು

ಹಾರೆಹೊಸೂರು ಶಾಲೆ ವಾರ್ಷಿಕೋತ್ಸವ

Published On :

ಶನಿವರಸಂತೆ: ಶಾಲೆಗಳಲ್ಲಿ ನಡೆಯುವ ಕ್ರೀಡಾಕೂಟ ಹಾಗೂ ಶಾಲಾ ವಾರ್ಷಿಕೋತ್ಸವವೆಂದರೆ ಗ್ರಾಮೀಣ ಜನರಿಗೆ ಹಬ್ಬಗಳಿದ್ದಂತೆ ಎಂದು ನಿಡ್ತ ಗ್ರಾ.ಪಂ. ಮಾಜಿ ಸದಸ್ಯ ಡಿ.ಬಿ. ವಂಸಂತ ಹೇಳಿದರು.
ಅವರು ಹಾರೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮೀಣ ಭಾಗಗಳ ಶಾಲೆಯಲ್ಲಿ ನಡೆಯುವ ಸಮಾರಂಭ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ಸಾಹ, ಉಲ್ಲಾಸದೊಂದಿಗೆ ಪಾಲ್ಗೊಂಡು ಸಂತೋಷವನ್ನು ವ್ಯಕ್ತಡಿಸುತ್ತಾರೆ. ಗ್ರಾಮೀಣ ಭಾಗಗಳ ಜನರಿಗೆ ಕ್ರೀಡೆಗಳೆಂಬುವುದು ಒಂದು ಅವಿಭಾಜ್ಯ ಅಂಗವಾಗಿದೆ. ಇಂಥಹ ಕ್ರೀಡಾ ಕೂಟಗಳಿಂದಾಗಿ ಕ್ರೀಡಾಪಟುಗಳಲ್ಲಿ ಮಾನಸಿಕ ನೆಮ್ಮದಿ, ದೈಹಿಕ ಬೆಳವಣಿಗೆ, ಮನಸ್ಸಿಗೆ ಮುದವನ್ನು ನೀಡುತ್ತವೆ. ಹಾಗೆ ವರ್ಷವಿಡೀ ಶಾಲಾ ಕೊಠಡಿಗಳ ನಡುವೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಒಂದು ಬಾರಿ ಶಾಲಾ ಆವರಣದಲ್ಲಿ ವಾರ್ಷಿಕೋತ್ಸವ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಚೇತನಗಳು ಬೆಳೆಯುತ್ತವೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನಹರಿಸುವುದರೊಂದಿಗೆ ಕ್ರೀಡಾ ಚಟುವಟಿಕೆಗಳಿಗೂ ಕೂಡ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿಡಿಗಳಲೆ ಮಠದ ಬಸವರಾಜೇಂದ್ರ ಸ್ವಾಮೀಜಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಿ.ಬಿ. ಸುರೇಶ್ ವಹಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ. ಧರ್ಮಪ್ಪ, ನಿಡ್ತ ಗ್ರಾ.ಪಂ. ಸದಸ್ಯರಾದ ಎಚ್.ಜೆ. ಜವರಶೆಟ್ಟಿ, ಕಮಲಮ್ಮ, ಚೌಡೇನಹಳ್ಳಿ ಗ್ರಾಮದ ಸಿ.ಎಸ್. ಧರ್ಮಪ್ಪ, ಎಸ್.ಪಿ. ಧರ್ಮಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಿ.ಡಿ. ರಂಗಯ್ಯ, ಸದಸ್ಯ ಎಚ್.ಕೆ. ಪುಟ್ಟಸ್ವಾಮಿ, ಹಾರೆಹೊಸೂರು ಶಾಲೆಯ ಶಿಕ್ಷಣ ಪದವೀದರ ಎಚ್.ಡಿ. ಲೋಕೇಶ್, ಮಲ್ಲಿಕಾರ್ಜುನ, ಕುಶಾಲಪ್ಪ, ಗೀತಾ ಜಯಪ್ಪ, ಸಿ.ಸಿ. ಹೂವಮ್ಮ, ಡಿ.ಡಿ. ದಯಾಕರ, ಡಿ.ಇ.ಪುಟ್ಟಸ್ವಾಮಿ, ಎಸ್.ಕೆ. ವೆಂಕಟಯ್ಯ, ಎಸ್.ಕೆ. ರಾಜಪ್ಪ, ಪರಮೇಶ್, ಶಾಲಾ ಮುಖ್ಯ ಶಿಕ್ಷಕ ನಾಗರಾಜು, ಶಿಕ್ಷಕಿ ಕವಿತಾಜಯಸ್ವಾಮಿ, ಮುಂತಾದವರಿದ್ದರು.
ಸಭೆಯ ನಂತರ ಸಾರ್ವಜನಿಕರಿಗೆ ವಿವಿಧ ಕ್ರೀಡಾಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.