ಮತ್ತು ಬರಿಸಿ ಮಹಿಳೆ ಆಭರಣ ಕಳವು
ಕುಶಾಲನಗರ: ಸಂತೆಗೆಂದು ಬಂದ ಮಹಿಳೆಯೊಬ್ಬರಿಗೆ ಮತ್ತು ಬರಿಸಿ ಅವರಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಪ್ರಕರಣ ಕುಶಾಲನಗರದಲ್ಲಿ ಮಂಗಳವಾರ ಸಂಭವಿಸಿದೆ.
ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿ ಗ್ರಾಮದ ನಿವಾಸಿ ನಿವೃತ ಅರಣ್ಯರಕ್ಷಕ ಕೆಂಗನಾಯ್ಕ ಎಂಬುವವರ ಪತ್ನಿ ಬಸಮ್ಮ(60) ಕುಶಾಲನಗರದ ಸಂತೆಗೆ ಮಂಗಳವಾರ ಆಗಮಿಸಿದ್ದ ಸಂದರ್ಭ ಸಂತೆಯಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಬಸಮ್ಮ ಅವರನ್ನು ಪರಿಚಯ ಮಾಡಿಕೊಂಡು ಅಗರಬತ್ತಿ ಪರಿಮಳ ಆಸ್ವಾದಿಸುವಂತೆ ಕೋರಿದರು. ಅಗರಬತ್ತಿಯನ್ನು ಮೂಸಿದ ಕೂಡಲೇ ಬಸಮ್ಮ ಮಂಕಾದರು. ಬಸಮ್ಮ ಅವರನ್ನು ಸಂತೆ ಪಕ್ಕದಲ್ಲಿಯೇ ಇದ್ದ ಕಾವೇರಿ ನದಿ ದಾರಿಗೆ ಕರೆದುಕೊಂಡು ಹೋಗಿ ಅವರ ಮೈಮೇಲಿದ್ದ 35 ಗ್ರಾಂ. ಚಿನ್ನವನ್ನು ಚೋರರು ಅಪಹರಿಸಿದ್ದಾರೆ. ಕೆಲ ಕ್ಷಣಗಳ ಕಾಲ ಎಚ್ಚತ್ತುಕೊಂಡ ಬಸಮ್ಮ ತಮ್ಮ ಮೈಮೇಲಿದ್ದ ಮಾಂಗಲ್ಯಸರ, ಬಳೆ, ಓಲೆಗಳು ಕಳುವಾಗಿರುವುದನ್ನು ಕಂಡು ಗಾಬರಿಯಾದರು. ಈ ಬಗ್ಗೆ ಅವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

