ಮೂರ್ನಾಡು: ಟ್ಯಾಂಕರ್ ನೀರು ಪೂರೈಕೆ
ಮೂರ್ನಾಡು: ಐದು ದಿನಗಳಿಂದ ಕುಡಿಯುವ ನೀರಿಲ್ಲದೆ ಸೊರಗಿದ ಮೂರ್ನಾಡು ಪಟ್ಟಣದ ನಿವಾಸಿಗಳಿಗೆ ಗ್ರಾಪಂ ವತಿಯಿಂದ ಬಲಮುರಿ ಹೊಳೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಯಿತು.
ಮೋಟಾರು ಕೆಟ್ಟು ಹೋಗಿ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿರುವ ನಿವಾಸಿಗಳು ಟ್ಯಾಂಕರ್ ನೀರಿಗೆ ಮುಗಿಬಿದ್ದರು. ಪಟ್ಟಣದ ಮುಖ್ಯ ಬೀದಿಯ ಅಂಗಡಿ, ಹೊಟೇಲ್, ಮಾರುಕಟ್ಟೆ, ಗಾಂಧಿನಗರ, ಸುಭಾಷ್ನಗರ ನಿವಾಸಿಗಳಿಗೆ ನೀರು ಪೂರೈಕೆ ಮಾಡಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಟ್ಯಾಂಕರ್ನಲ್ಲಿ 60 ಸಾವಿರ ಲೀ. ನೀರು ಸರಬರಾಜು ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಸದಸ್ಯ ಖಾದರ್, ವಜೀರ್ ಅವರು ಬೆಳಗ್ಗೆಯಿಂದ ನೀರು ಸರಬರಾಜಿನಲ್ಲಿ ತೊಡಗಿಕೊಂಡಿದ್ದರು. ಮಡಿಕೇರಿಯಿಂದ ಕರೆಸಲಾದ ಟ್ಯಾಂಕರ್ ಹಾಗೂ ನೀರು ತುಂಬಿಸಲು ಮೋಟಾರ್ಗೆ ಡೀಸೆಲ್ ವೆಚ್ಚಗಳನ್ನು ತಾನೆ ಭರಿಸುತ್ತೇನೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಳಿಸಿದ್ದಾರೆ.
ಹೊಸ ಮೋಟಾರ್ ಅಳವಡಿಕೆ: ಕೋಡಂಬೂರಿನ ಉಪ್ಪುಗುಂಡಿಯಲ್ಲಿ ನೀರೆತ್ತುವ ಮೋಟಾರು ಕೆಟ್ಟು ಹೋಗಿ ಪಟ್ಟಣದಲ್ಲಿ ಕುಡಿಯುವ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ನಾಲ್ಕು ದಿನಗಳಿಂದ ಮೋಟಾರು ದುರಸ್ತಿ ಕಾರ್ಯದಲ್ಲಿ ತೊಡಗಿರುವ ಗ್ರಾಮ ಪಂಚಾಯಿತಿ ವಿಫಲವಾಗಿ ಶನಿವಾರ ಹೊಸ ಮೋಟಾರು ಅಳವಡಿಸಲಾಗಿದೆ. ಉಪ್ಪುಗುಂಡಿಯಲ್ಲಿ ಅಕ್ರಮ ಮರಳು ಗಣಿಗಾರಿಗೆ ಮಾಡುತ್ತಿದ್ದು, ವಾಹನಗಳ ಓಡಾಟದಿಂದ ಮೂರ್ನಾಡು ಪಟ್ಟಣದ ನೀರಿನ ಟ್ಯಾಂಕ್ಗೆ ಬರುವ ಪೈಪ್ಲೈನ್ ಸಂಪೂರ್ಣವಾಗಿ ಒಡೆದು ಹೋಗಿ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಒಡೆದ ಪೈಪ್ ತೆಗೆದು ಹೊಸ ಪೈಪ್ ಅಳವಡಿಸಿದರೆ ನೀರು ಪೂರೈಕೆ ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ ಹೇಳಿದ್ದಾರೆ.
ಐದು ದಿನಗಳಿಂದ ನೀರಿಗಾಗಿ ಪರಿತಪಿಸುತ್ತಿದ್ದ ಮೂರ್ನಾಡಿನ ನಿವಾಸಿಗಳು ಟ್ಯಾಂಕರ್ ನೀರಿನಿಂದ ಸಲ್ಪ ನೆಮ್ಮದಿ ಕಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

