ಕೊಡಗು

22ರಿಂದ ಮುಕ್ತ ಫುಟ್ಬಾಲ್ ಪಂದ್ಯಾಟ

Published On :

ಮಡಿಕೇರಿ: ಚೆಟ್ಟಳ್ಳಿಯಲ್ಲಿ ಕೊಂಗೇಟ್ಟಿರ ಕಾರ್ಸನ್ ಕಾಳಪ್ಪ ಸ್ಮಾರಕ ಮುಕ್ತ ಕಾಲ್ಚೆಂಡು ಪಂದ್ಯಾಟ ಚೆಟ್ಟಳ್ಳಿಯ ಚೇತನ ಯುವಕ ಸಂಘದ ವತಿಯಿಂದ ಫೆ.22 ರಿಂದ 24ರವರೆಗೆ ನಡೆಯಲಿದೆ. ಈ ಬಾರಿ 5್ಗ3 ಆಟಗಾರರ ಮುಕ್ತ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ.
ಚೆಟ್ಟಳ್ಳಿ ಚೇತನ ಯುವಕ ಸಂಘದ ಅಧ್ಯಕ್ಷರಾಗಿದ್ದು, ದಿವಂಗತರಾದ ಕೊಂಗೆಟ್ಟಿರ ಕಾರ್ಸನ್ ಕಾಳಪ್ಪ ಸ್ಮರಣಾರ್ಥವಾಗಿ ಚೆಟ್ಟಳ್ಳಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಸಲು ತೀರ್ಮಾನಿಸಲಾಗಿದೆ.
ಪ್ರಥಮ ಬಹುಮಾನ ಪಡೆಯುವ ತಂಡಕ್ಕೆ ಆಕರ್ಷಕ ವೈಯಕ್ತಿಕ ಟ್ರೋಫಿ ಹಾಗೂ 10 ಸಾವಿರ ನೀಡಲಾಗುವುದು. ದ್ವಿತೀಯ ತಂಡಕ್ಕೆ ಆಕರ್ಷಕ ವೈಯಕ್ತಿಕ ಟ್ರೋಫಿ ಹಾಗೂ 5 ಸಾವಿರ ನೀಡಲಾಗುವುದು.
ಕಳೆದ 15 ವರ್ಷಗಳಿಂದಲೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಸಹಕಾರದೊಂದಿಗೆ ಅತ್ಯಂತ ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಸಂಘದ ಕ್ರಿಯಾಶೀಲ ಅಧ್ಯಕ್ಷರಾಗಿ ಸಂಘ ಮುನ್ನಡೆಸುತ್ತಿದ್ದ ದಿವಂಗತ ಕೊಂಗೆಟ್ಟಿರ ಕಾರ್ಸನ್ ಕಾಳಪ್ಪ ಜ್ಞಾಪಕಾರ್ಥವಾಗಿ ಅವರ ಪತ್ನಿ ವಾಣಿ ಅವರು ಪ್ರಥಮ ಟ್ರೋಫಿ ನೀಡುತ್ತಿದ್ದಾರೆ.  ದ್ವಿತೀಯ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನವನ್ನು ಟಿ.ಎಸ್. ರವಿಚಂದ್ರ ನೀಡಲಿದ್ದಾರೆ ಎಂದು ಚೇತನ ಯುವಕ ಸಂಘದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.