ಇಂದು ಜನಪರ ಚಳುವಳಿ: ಭರತ್
ಮಡಿಕೇರಿ: ಕೊಡಗು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಫೆ.15 ರಂದು ನಡೆಯಲಿರುವ ಪ್ರತಿಭಟನೆಯು ರಾಜಕೀಯ ರಹಿತವಾಗಿ ಜಾತೀಯತೆಯ ಸೋಂಕಿಲ್ಲದೆ ನಡೆಯಲಿರುವ ಜನಪರ ಚಳವಳಿಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪಿ.ಆರ್. ಭರತ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭರತ್ ಜನಜಾಗೃತಿ ಸಮಾವೇಶದ ಬಗ್ಗೆ ಹಲವೆಡೆ ಅಪಪ್ರಚಾರ ಹಾಗೂ ಷಡ್ಯಂತ್ರ ನಡೆಯುತ್ತಿದೆ. ಈ ಚಳವಳಿ ಯಾರ ವಿರುದ್ಧವಾದ ಚಳವಳಿಯಲ್ಲ. ಬದಲಾಗಿ ಜನಪರ ಕಾಳಜಿಯ ಚಳವಳಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ, ವಾಸವಿರುವ ಜಾಗಕ್ಕೆ ಹಕ್ಕು ಪತ್ರ ನೀಡುವಂತೆ ಮತ್ತು ಜಿ. ಪಂ. ಸಾಮಾನ್ಯ ಸಭೆಯಲ್ಲಿ ದೇವರಕಾಡು, ಊರುಡುವೆ, ಪೈಸಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವ ನಿರ್ಣಯವನ್ನು ಖಂಡಿಸಿ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಭರತ್ ಹೇಳಿದರು.
ಇಂತಹ ಸ್ಥಳಗಳಲ್ಲಿ ವಾಸಿಸುತ್ತಿರುವ ಜನರಿಂದ ಆರಿಸಿ ಬಂದ ಜಿಪಂ ಸದಸ್ಯರು ಅಧಿಕಾರ ದೊರೆತೊಡನೆ ಜಿಲ್ಲೆಯ ಸೌಂದರ್ಯದ ನೆಪವೂಡ್ಡಿ, ಬಡವರ್ಗದ ಮಂದಿಯನ್ನು ಒಕ್ಕಲೆಬ್ಬಿಸುವ ಮೂಲಕ ನಿರ್ವಸತಿಗರನ್ನಾಗಿಸುವ ಸಂಚು ಮಾಡುತ್ತಿರುವುದಾಗಿ ಭರತ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗುಡಿಸಲು ಹೇಗೆ ಮಾರಕ?: ಬಡವರ್ಗದ ಗುಡಿಸಲುಗಳು ಪರಿಸರಕ್ಕೆ ಹೇಗೆ ಧಕ್ಕೆ ಉಂಟುಮಾಡುತ್ತದೆ ಎಂದು ಪ್ರಶ್ನಿಸಿದ ಭರತ್, ದುಡಿಯುವ ವರ್ಗದ ಜನ ಜಿಲ್ಲೆಯ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಹೆಚ್ಚಿನ ಕಾಣಿಕೆಯನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬಡವರ ದುರಂತ ಬದುಕಿಗೆ ಮತ್ತು ಜೀತದಾಳುಗಳಂತೆ ದುಡಿಯುತ್ತಿರುವವರ ಬದುಕನ್ನು ಹಸನಾಗಿಸಿ, ಅವರಿಗೊಂದು ಸೂರು ಕಲ್ಪಿಸಿ, ಹಕ್ಕುಪತ್ರ ಬದಗಿಸುವುದು ತಮ್ಮ ಹೋರಾಟದ ಮುಖ್ಯ ಗುರಿ ಎಂದು ಭರತ್ ಹೇಳಿದರು.
ಉಪಾಧ್ಯಕ್ಷೆ ಎಚ್.ಬಿ. ಜಯಮ್ಮ, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಕಾರ್ಯದರ್ಶಿ ಜಯಪ್ಪ ಹಾನಗಲ್, ಖಜಾಂಚಿ ಬಿ.ಡಿ. ನಾರಾಯಣ ರೈ, ಪದಾಧಿಕಾರಿ ಟಿ.ಎನ್. ಗೋವಿಂದಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸೋಮಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

