ಕೊಡಗು

ರಾಜ್ಯ ಬಜೆಟ್ 2013: ಜನ ಏನಂತಾರೆ?

Published On :

ಕೊಡಗಿಗೆ ಸರ್ಕಾರ ಏನನ್ನೂ ನೀಡದೇ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕುಶಾಲನಗರ-ಮೈಸೂರು ರೇಲ್ವೇ ಯೋಜನೆಗೆ ರಾಜ್ಯ ಸರ್ಕಾರದ ಪಾಲು ಹಣದ ಪ್ರಸ್ತಾಪ ಪ್ರಸ್ತಾಪಿಸಿಲ್ಲ.
-ಜಿ. ಚಿದ್ವಿಲಾಸ್. ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ

ಇದೊಂದು ಚುನಾವಣಾ ಪರ ಬಜೆಟ್. ಖರ್ಚುಗಳೇ ಹೆಚ್ಚು, ಆದಾಯ ಮೂಲ ಕಡಿಮೆಯಿದೆ. ಹಣದುಬ್ಬರ ಪ್ರಮಾಣ ಮಿತಿ ಮೀರಿದೆ. ಕೋಟಿ ಕೋಟಿ ರುಪಾಯಿ ಯೋಜನೆಗಳ ಆಶ್ವಾಸನೆಗಳು ಪ್ರಕಟಗೊಂಡಿವೆ.
-ಗೀತಾ ಗಿರೀಶ್. ವಿಮೆ ಸಲಹೆಗಾರರು

ಉದ್ಯಮಿಗಳಿಗೆ, ವಹಿವಾಟುದಾರರಿಗೆ ಪ್ರಯೋಜನವಿಲ್ಲದ ಬಜೆಟ್. ಆದಾಯ ತೆರಿಗೆ ಮಿತಿಯನ್ನು  ಶೇ. 14.50 ರಿಂದ ಶೇ. 14 ಕ್ಕೆ ಇಳಿಸಿರುವುದು ಸ್ವಾಗತಾರ್ಹ.
-ಎ.ಕೆ. ಜೀವನ್. ರಾಜ್ಯ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ

ವರ್ಷವಿಡೀ ಬೆಲೆ ಏರಿಕೆ ನಡುವೆ ನೊಂದು ಬಸವಳಿದಿರುವ ಜನತೆಗೆ ಸರ್ಕಾರ ಮಂಡಿಸಿರುವ ಬಜೆಟ್ ಅನುಷ್ಠಾನಕ್ಕೆ ಬರುವುದರ ಬಗ್ಗೆ ಸಂಶಯ ಉಂಟಾಗಿದೆ.
-ಎಂ. ಕೃಷ್ಣ. ಜಿಲ್ಲಾಧ್ಯಕ್ಷರು, ಕರ್ನಾಟಕ ಕಾವಲು ಪಡೆ

ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಲ್ಲಿ ಇದೊಂದು ಜನಪರ ಬಜೆಟ್ ಎನ್ನುವುದರಲ್ಲಿ ತಪ್ಪಿಲ್ಲ. ಕಳೆದ ಸಾಲಿನ ಬಜೆಟ್‌ನಂತಾಗಬಾರದು. ಅನುಷ್ಠಾನಕ್ಕೆ ತರುವಲ್ಲಿ ಜನಪ್ರತಿನಿಧಿಗಳು ಮುತುವರ್ಜಿವಹಿಸಬೇಕು.
-ಸುಧಾಮಣಿ. ಪ್ರಾಂಶುಪಾಲರು

ಈ ಬಜೆಟ್ ಬಿಜೆಪಿ ಸರ್ಕಾರದ ಬಜೆಟ್ ಅಲ್ಲ. ಇದು ಅವರ ಚುನಾವಣಾ ಪ್ರಣಾಳಿಕೆಯಂತೆ ಕಾಣುತ್ತಿದೆ. ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡೇ ಬಜೆಟ್ ಮಂಡಿಸಲಾಗಿದೆ.
- ಹಸೀನಾ ಬಾನು. ಗೋಣಿಕೊಪ್ಪಲು

ಇದು ರೈತರಿಗೆ ಅನುಕೂಲಕರವಾದ ಬಜೆಟ್ ಅಲ್ಲ. ಅಧಿಕಾರಿಗಳು ತಯಾರಿಸಿದ ಬಜೆಟ್ ಅನ್ನಷ್ಟೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಓದಿದ್ದಾರೆ ಅಷ್ಟೇ.
-ಕೊಟ್ಟಂಗಡ ಸುಜಿತಾ. ಬಲ್ಯಮುಂಡೂರು.

ಬಜೆಟ್ ಜನಪರವಾಗಿದೆ. ರಾಜ್ಯದ ವಿವಿಧೆಡೆಗಳಲ್ಲಿ ನರಕಯಾತನೆ ಅನುಭವಿಸುತ್ತಿರುವ ಎಂಡೋ ಸಂತ್ರಸ್ತರ ಜೀವನದಲ್ಲಿ ಬೆಳಕು ಮೂಡಿಸುವ ಯೋಜನೆ ಇನ್ನೂ ವಿಸ್ತಾರ ರೂಪದಲ್ಲಿ ಪ್ರಕಟಿಸಬೇಕಾಗಿತ್ತು.
-ಕಂಗ್ವೆ ವಿಶ್ವಾನಾಥ ಶೆಟ್ಟಿ, ಉಪ್ಪಿನಂಗಡಿ

ಬಡವರ ಮತ್ತು ರೈತರ ಪರವಾಗಿರುವ ಸುಪರ್ ಬಜೆಟ್. ನೂತನ ಮೂಡಬಿದ್ರೆ ಮತ್ತು ಕಡಬ ತಾಲೂಕು ಘೋಷಣೆ ಮಾಡುವ ಮೂಲಕ ದ.ಕ, ಜಿಲ್ಲೆಗೆ ಉತ್ತಮ ಕೊಡುಗೆ ನೀಡಲಾಗಿದೆ.
-ಗೋಪಾಲಕೃಷ್ಣ ಹೇರಳೆ
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ

ಇದೊಂದು ಚುನಾವಣಾ ಪರ ಬೋಗಸ್ ಬಜೆಟ್. ಬಿಜೆಪಿಯ ಇಮೇಜ್ ಜನರ ನಡುವೆ ಉತ್ತಮವಾಗಿಲ್ಲದ ಕಾರಣ ಬಜೆಟ್‌ನಲ್ಲಿ ತಿಳಿಸಿದ ಅಂಶಗಳು ಜಾರಿಯಾಗುವ ಅವಕಾಶಗಳು ಕಡಿಮೆಯಾಗಿದೆ.
- ಲೋಕೇಶ್ ಹೆಗ್ಡೆ, ಜೆಡಿಎಸ್ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.