ಹಾವೇರಿ

ಹಾವೇರಿ: 10ರಿಂದ ಮೇ ಸಾಹಿತ್ಯ ಮೇಳ

Published On :

ಹಾವೇರಿ: ಗದಗನ ಲಡಾಯಿ ಪ್ರಕಾಶನದಿಂದ ಮೇ ಸಾಹಿತ್ಯ ಮೇಳ ಮೇ 10 ಹಾಗೂ 11ರಂದು ನಗರದ ಗೆಳೆಯರ ಬಳಗದ ಮಣಿಭಾಯಿ ಲೋಡಾಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮೇಳದ ಕುರಿತು ಮಾಹಿತಿ ನೀಡಿದ ಅವರು, ಕೌರವ ಪತ್ರಿಕೆ, ಚಿತ್ತಾರ ಕಲಾ ಬಳಗ ಧಾರವಾಡ, ಕನ್ನಡ ಸಂಸ್ಕೃತಿ ಇಲಾಖೆ, ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ, ಕರ್ನಾಟಕ ಜನಸಾಹಿತ್ಯ ಸಂಘಟನೆ ಸಹಭಾಗಿತ್ವದಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.
ಮೇ 10ರಂದು ಬೆಳಗ್ಗೆ 10.30ಕ್ಕೆ ಮೇಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೈದರಾಬಾದ್ನ ಡಾ. ಕೆ. ಶಿವಾರೆಡ್ಡಿ ಉದ್ಘಾಟಿಸುವರು. ಡಾ. ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಡಾ. ಎಚ್.ಎಸ್. ಅನುಪಮಾ ಪ್ರಾಸ್ತಾವಿಕ ಮಾತುಗಳನ್ನಾಡುವರು. ಡಾ. ಡಿ.ಬಿ. ಗವಾನಿ ನಿರ್ವಹಿಸುವರು.
ಮಧ್ಯಾಹ್ನ 12ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಡಾ. ನಾ. ಡಿಸೋಜಾ ಪುಸ್ತಕ ಬಿಡುಗಡೆಗೊಳಿಸುವರು. ಡಾ. ಶೈಲಜಾ ಹಿರೇಮಠ, ಡಾ. ಅಪ್ಪಗೆರೆ ಸೋಮಶೇಖರ್, ಡಾ. ಸುರೇಶ ನಾಗಲಮಡಿಕೆ ಪುಸ್ತಕಗಳ ಕುರಿತು ಮಾತನಾಡುವರು. ಜ. ಹೊ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು. ನಗ್ನಮುನಿ ಡಾ. ಟಿ.ಆರ್. ಚಂದ್ರಶೇಖರ್, ಪ್ರೊ. ಬಿ. ಗಂಗಾಧರಮೂರ್ತಿ, ರಾಹು, ಬಸವರಾಜ ಹೂಗಾರ, ಚಂದ್ರಕಾಂತ ಪೋಕಳೆ, ಡಾ. ಸಿದ್ದರಾಮ ಕಾರಣಿಕ, ಡಾ. ಜೆ.ಪಿ. ದೊಡ್ಡಮನಿ, ಡಾ. ಐ.ಜೆ. ಮ್ಯಾಗೇರ, ಡಾ. ಎಚ್.ಎಸ್. ಅನುಪಮಾ ಪಾಲ್ಗೊಳ್ಳಲಿದ್ದಾರೆ ಎಂದರು.
ಮಧ್ಯಾಹ್ನ 3ಕ್ಕೆ ಅಸಮಾನ ಕರ್ನಾಟಕ- ಪ್ರತಿರೋಧದ ನೆಲೆಗಳು ಎಂಬ ವಿಷಯ ಕುರಿತು ಚರ್ಚೆ ನಡೆಯಲಿದ್ದು, ಡಾ. ಟಿ.ಆರ್. ಚಂದ್ರಶೇಖರ್ ಆಶಯ ನುಡಿಗಳನ್ನಾಡುವರು. ತಳಸಮುದಾಯಗಳ ನೆಲೆ ಕುರಿತು ಡಾ. ಚಂದ್ರ ಪೂಜಾರಿ, ವರ್ಗಮೂಲ ಚಳವಳಿ ಕುರಿತು ಪ್ರೊ. ವಿ.ಎಸ್. ಶ್ರೀಧರ, ಮಹಿಳಾ ನೆಲೆ ಕುರಿತು ಡಾ. ಮೀನಾಕ್ಷಿ ಬಾಳಿ, ಪತ್ರಿಕಾ ನೆಲೆ ಕುರಿತು ದಿನೇಶ ಅಮಿನಮಟ್ಟು ಮಾತನಾಡುವರು. ಸನತ್ಕುಮಾರ ಬೆಳಗಲಿ ಅಧ್ಯಕ್ಷತೆ ವಹಿಸುವರು. ಡಾ. ಎಚ್.ವಿ. ವಾಸು, ನಾರಾಯಣ ಬೆಳಕುರ್ಕಿ, ಪದ್ಮಶ್ರೀ ಟಿ. ಪ್ರತಿಕ್ರಿಯಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 6.15ಕ್ಕೆ ನನ್ನ ಬದುಕು ನನ್ನ ಕವಿತೆ ಕುರಿತು ದು. ಸರಸ್ವತಿ, ಎಚ್.ಎನ್. ಆರತಿ ಕಾರ್ಯಕ್ರಮ ನಡೆಸುವರು. ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ಲ ಚಾಲನೆ ನೀಡುವರು. ಶಶಿಕಲಾ ಹುಡೇದ ಅಧ್ಯಕ್ಷತೆ ವಹಿಸುವರು. ಎ. ರೇವತಿಯವರ ಹಿಜ್ರಾ ಒಬ್ಬಳ ಆತ್ಮಕತೆ ಆಧಾರಿತ ಕನ್ನಡದ ಪ್ರಥಮ ನಾಟಕ ಬದುಕು ಬಯಲು ಪ್ರದರ್ಶನಗೊಳ್ಳುವುದು.
11ರಂದು ಬೆಳಗ್ಗೆ 9ಕ್ಕೆ ಕವಿಯೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಹೈದರಾಬಾದ್ನ ನಗ್ನಮುನಿ, ಡಾ. ಬಂಜಗೆರೆ ಜಯಪ್ರಕಾಶ ಪಾಲ್ಗೊಳ್ಳುವ ಈ ಸಂವಾದದಲ್ಲಿ ಸುಜ್ಞಾನಮೂರ್ತಿ, ಡಾ. ದೇವೇಂದ್ರಪ್ಪ ಜಾಜಿ, ಡಾ. ವೆಂಕಟಗಿರಿ ದಳವಾಯಿ, ಎಂ.ಕೆ. ಕಲ್ಲಜ್ಜನವರ, ಶಿವಕುಮಾರ ಕಂಪ್ಲಿ, ಕೆ. ಖಾದರ್ ಭಾಷಾ ಸಿಂಧನೂರ, ಸೃಜನ್, ಡಾ. ಜಗನ್ನಾಥ ಗೆನಣ್ಣನವರ ಭಾಗವಹಿಸುವರು. ಬೆಳಗ್ಗೆ 10.30ಕ್ಕೆ ವರ್ತಮಾನದ ಸವಾಲುಗಳು- ಭವಿಷ್ಯದ ಕರ್ನಾಟಕ ಎಂಬ ವಿಷಯ ಕುರಿತು ಚರ್ಚೆ ನಡೆಯಲಿದೆ. ಡಾ. ವಿ. ಲಕ್ಷ್ಮೀನಾರಾಯಣ ಆಶಯ ನುಡಿಗಳನ್ನಾಡುವರು. ಡಾ. ಮುಜಾಫರ್ ಅಸಾದಿ ಮಾತನಾಡುವರು. ಪ್ರೊ. ಬಿ. ಗಂಗಾಧರಮೂರ್ತಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.15ಕ್ಕೆ ಜನಸಾಹಿತ್ಯದ ಹೊಳಹುಗಳು ಕಾರ್ಯಕ್ರಮ ನಡೆಯಲಿದ್ದು, ಡಾ. ರಹಮತ್ ತರೀಕೆರೆ ಆಶಯ ನುಡಿಗಳನ್ನಾಡುವರು. ಕಾವ್ಯದ ಕುರಿತು ಶಂಕರ ಕಟಗಿ, ಕತೆ-ಕಾದಂಬರಿ ಕುರಿತು ಸರ್ಜಾ ಶಂಕರ ಹರಳೀಮಠ, ವಿಚಾರ ಸಾಹಿತ್ಯದ ಕುರಿತು ಡಾ. ರಂಗನಾಥ ಕಂಟನಕುಂಟೆ ಮಾತನಾಡುವರು. ಡಾ. ಬಿ.ಎನ್. ಸುಮಿತ್ರಾಬಾಯಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಕ್ಕೆ ನಡೆಯುವ ಕವಿಗೋಷ್ಠಿಗೆ ಪ್ರೊ. ಅಶೋಕ ಶೆಟ್ಟರ್ ಚಾಲನೆ ನೀಡುವರು. ಕೆ.ಪಿ. ಸುರೇಶ ಅಧ್ಯಕ್ಷತೆ ವಹಿಸುವರು ಎಂದು ಸೂಳಿಭಾವಿ ತಿಳಿಸಿದರು.
ಸಾಹಿತಿ ಸತೀಶ ಕುಲಕರ್ಣಿ, ಬಿ. ಶ್ರೀನಿವಾಸ, ವಿರೂಪಾಕ್ಷಪ್ಪ ಕೋರಗಲ್ಲ, ಕೆ. ಮಂಜಪ್ಪ, ವೈ.ಬಿ. ಆಲದಕಟ್ಟಿ, ಹೊನ್ನಪ್ಪ ಮರಿಯಮ್ಮನವರ, ಪಿ.ಎಚ್. ನೀರಲಕೇರಿ, ವಿರೂಪಾಕ್ಷಪ್ಪ ಪಡಿಗೋದಿ ಇತರರಿದ್ದರು.



ವಿಭಾ ಸಾಹಿತ್ಯ ಪ್ರಶಸ್ತಿ ಪ್ರದಾನ
ಮೇ 11ರಂದು ಸಂಜೆ 5ಕ್ಕೆ ನಡೆಯುವ ಸಾಹಿತ್ಯ ಮೇಳ ಸಮಾರೋಪ ಸಮಾರಂಭದಲ್ಲಿ ವಿಭಾ ಸಾಹಿತ್ಯ ಪ್ರಶಸ್ತಿ ವಿತರಣೆ ನಡೆಯಲಿದೆ. ಈ ಸಾಲಿನ ಪ್ರಶಸ್ತಿ ಕೆ.ಪಿ. ಮೃತ್ಯುಂಜಯ ಅವರ 'ನಿನ್ನ ಶಬ್ದ ನನ್ನಲಿ' ಬಂದು ಎಂಬ ಹಸ್ತಪ್ರತಿಗೆ ಸಂದಿದೆ. ಪ್ರಶಸ್ತಿ ರು. 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಸಮಾರೋಪದಲ್ಲಿ ಸುನಂದಾ ಕಡಿಮೆ ಪ್ರಾಸ್ತಾವಿಕ ಮಾತನಾಡುವರು. ಪ್ರಶಸ್ತಿ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆಯನ್ನು ಶೂದ್ರ ಶ್ರೀನಿವಾಸ ನೆರವೇರಿಸುವರು. ಪುಸ್ತಕದ ಕುರಿತು ಬಿ. ಶ್ರೀನಿವಾಸ ಮಾತನಾಡುವರು. ಪಂಪಾರಡ್ಡಿ ಅರಳಹಳ್ಳಿ, ಹೇಮಲತಾ ವಸ್ತ್ರದ ಕವಿತೆ ವಾಚಿಸುವರು. ಡಾ. ಎಸ್. ನಟರಾಜಬೂದಾಳು ಸಮಾರೋಪ ನುಡಿಗಳನ್ನಾಡುವರು. ಡಾ. ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.