ಸಂಘಟನೆ ಇದ್ದರೆ ಮಾತ್ರ ಭದ್ರತೆ
ಹಾವೇರಿ: ವಿದ್ಯುತ್ ಇಲಾಖೆಯು ಕಾರ್ಮಿಕ ಪ್ರಧಾನವಾದ ಶ್ರಮಜೀವಿಗಳ ಇಲಾಖೆ. ಅತ್ಯಂತ ಸಾಮಾನ್ಯನಿಂದ ಹಿಡಿದು ಉನ್ನತ ವರ್ಗದವರೆಗೂ ಸೇವೆ ಮಾಡುವ ಇಲಾಖೆಯಾದ್ದರಿಂದ ತುಂಬಾ ಎಚ್ಚರಿಕೆಯಿಂದ, ಕಾರ್ಮಿಕ ವರ್ಗಕ್ಕೆ ಗೌರವ ಬರುವ ರೀತಿ ನಾವೆಲ್ಲಾ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎನ್.ಬಿ. ಕಟಕೋಳ ಹೇಳಿದರು.
ಕವಿಪ್ರನಿ ನೌಕರರ ಸಂಘದ ಸ್ಥಳೀಯ ಸಮಿತಿ ಆಶ್ರಯದಲ್ಲಿ ಗುರುವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಇಲ್ಲಿಯ ಹೆಸ್ಕಾಂ ಆವರಣದ ಕಾರ್ಮಿಕ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕವಿಪನಿ ನೌಕರರ ಸಂಘ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ, ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಜಡೆಮಳೆ, ಬೀಸಿದ ಬಿರುಗಾಳಿ ಮಾಡಿದ ಹಾನಿ ತುಂಬಲು ನಮ್ಮ ವಿದ್ಯುತ್ ನೌಕರರು ತೋರಿದ ನಾಗರಿಕ ಪ್ರಜ್ಞೆ ಅದ್ಭುತವಾದದ್ದು. ವಿದ್ಯುತ್ ಇಲಾಖೆ ಜನಜೀವನದ ಜೀವನಾಡಿಯೆಂದು ಹೇಳಬಹುದು. ಸಂಘಟನೆ ಇದ್ದರೆ ಮಾತ್ರ ಸುಭದ್ರತೆ ಇರುತ್ತದೆ. ಹಕ್ಕುಗಳಿಗೆ ಹೋರಾಡುವವರು ಕರ್ತವ್ಯಕ್ಕೆ ಬದ್ಧರಾದಾಗ ಮಾತ್ರ ಇಲಾಖೆ ಉಳಿಯುತ್ತದೆ ಮತ್ತು ನೌಕರರು ಉಳಿಯುತ್ತಾರೆ ಎಂದರು.
ಹಾನಗಲ್ಲ ಲೋಕೊಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ವೈ. ಬಂಡಿವಡ್ಡರ ಮಾತನಾಡಿದರು. ಇದೇ ಸಂದರ್ಭ ಇಲಾಖೆಯಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ನೌಕರರಿಗೆ ವಿಶ್ವ ಕಾರ್ಮಿಕ ಪ್ರಶಸ್ತಿ ಕೊಡಮಾಡಲಾಯಿತು. ಸಿ.ಬಿ. ಇಟಗಿ, ಎಫ್.ಎಂ. ಕಾಕಡ ಹಾಗೂ ಚಂದ್ರಪ್ಪ ಮ್ಯಾಗೇರಿ ಅವರನ್ನು ಗಣ್ಯರು ಸನ್ಮಾನಿಸಿದರು. ನಂತರ ನಡೆದ ಕಾರ್ಮಿಕ ಕವಿಗೋಷ್ಠಿಯಲ್ಲಿ ಗಂಗಾಧರ ನಂದಿ, ಎ.ಕೆ. ಯಮನೂರ, ಜಿ.ಎಂ. ಓಂಕಾರಣ್ಣನವರ, ವಾಗೀಶ ಹೂಗಾರ, ಬಸವರಾಜ ಕಾವ್ಯವಾಚನ ಮಾಡಿದರು.
ಓ.ಎಸ್. ಶಶಿಧರ, ಮೊಮ್ಮದ್ ಅಮಾನುಲ್ಲಾ, ಸಿ.ಎಂ. ಪಂಡಿತಾರಾಧ್ಯ, ಎಚ್.ವೈ. ಪ್ರಶಾಂತ, ಎಂ.ಎಸ್. ಕುಮ್ಮುರ, ಎಂ.ಡಿ ಮಾಳಾಪೂರ, ಎಸ್.ಎಸ್. ಜಿಂಗಾಡೆ ಹಾಗೂ ಸಿ.ಎನ್. ಬಡ್ನಿ ಮಾತನಾಡಿದರು.
ಸುರೇಶ ಬಡ್ನಿ ಪ್ರಾರ್ಥಿಸಿದರು. ಎಲ್. ಶಿವಕುಮಾರ ಸ್ವಾಗತಿಸಿದರು. ಎಂ.ಎಸ್. ಕುಮ್ಮುರ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಸಾಳುಂಕೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

