ಹಾವೇರಿ

ಬಾಬಾ ಹೇಳಿಕೆ: ಪ್ರತಿಭಟನೆ

Published On :

ಸವಣೂರ: ದಲಿತರನ್ನು ಅವಮಾನಿಸಿದ ಬಾಬಾ ರಾಮದೇವ್ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಗುರುವಾರ ದಲಿತ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಹಿರಂಗ ಸಭೆಯಲ್ಲಿ ಬಾಬಾ ರಾಮದೇವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಿಕ್‌ನಿಕ್ ಮತ್ತು ಹನಿಮೂನ್‌ಗಾಗಿ ದಲಿತರ ಮನೆಗೆ ಭೇಟಿ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದ ರಾಮದೇವ್ ಅವರು ಶ್ರಮಜೀವಿಗಳಾಗಿರುವ ದಲಿತರ ಬಗ್ಗೆ ಹೇಳಿಕೆ ನೀಡುವ ಮೂಲಕ ತಾನೊಬ್ಬ ಯೋಗಗುರು ಎಂಬುದನ್ನು ಮರೆತು ದಲಿತರನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದರು.
ತಮ್ಮ ಹೇಳಿಕೆ ಬಗ್ಗೆ ಕೇವಲ ಕ್ಷೆಮೆ ಕೋರುವುದಾಗಲಿ, ಕಪಟ ನಾಟಕ ಮಾಡುವುದಾಗಲಿ ದಲಿತರ ಮೇಲಿನ ಮಾನಸಿಕ ದೌರ್ಜನ್ಯಕ್ಕೆ ಪರಿಹಾರವಲ್ಲ. ಹಾಗಾಗಿ, ತಕ್ಷಣ ರಾಮದೇವ್ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರಾಮದೇವ್ ಅವರ ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಮತ್ತು ರಾಮದೇವ್ ಅವರನ್ನು ಗಡಿಪಾರು ಮಾಡುವ ಮೂಲಕ ಸಮಸ್ತ ಸಮಾಜಕ್ಕೆ ಸೂಕ್ತ ಸಂದೇಶ ನೀಡಬೇಕು ಎಂದು  ಸವಣೂರಿನ ದಲಿತ ಸಮುದಾಯ ಹಾಗೂ ಸಂಘಟನೆಗಳ ವತಿಯಿಂದ ಆಗ್ರಹಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ದಲಿತ ಮುಖಂಡರಾದ ಎಲ್.ಡಿ. ಕನವಳ್ಳಿ, ಮಲ್ಲೇಶ ಬಾಲೆಹೋಸೂರ, ರಂಗಪ್ಪ ಮೈಲ್ಮನವರ, ಮುತ್ತು ಮೈಲ್ಮನವರ, ಸುಭಾಸ ಮಜ್ಜಗಿ, ಸಂತೋಷ ಪೂಜಾರ, ಈರಣ್ಣ ದೂಡ್ಡಮನಿ, ಉಮೇಶ ಹುಲ್ಲಮ್ಮನವರ, ರಮೇಶ ಹರಿಜನ, ಪರಮೇಶ ಮರಗಪ್ಪನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.