ನಮ್ಮ ಕೆಲಸಗಳು ಶಾಶ್ವತ: ಹೊಸಮನಿ
ಶಿಗ್ಗಾಂವಿ: ಸರ್ಕಾರಿ ನೌಕರಿ ಸಿಗುವುದು ಆಕಸ್ಮಿಕ ನಿವೃತ್ತಿ ಶಾಶ್ವತ. ಅದರ ಮಧ್ಯ ನಾವು ಜನ ಸಾಮಾನ್ಯರ ಜೊತೆ ಬೆರೆತು ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವೆಂದು ಸಿಪಿಐ ಹೊಸಮನಿ ಹೇಳಿದರು. ತಾಲೂಕಿನ ಬಂಕಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ 38 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಎಎಸ್ಐ ಸಿ.ಕೆ. ಜೋಡಳ್ಳಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಂತರ ಪಿಎಸ್ಐ ಸಿದ್ದಾರೂಢ ಬಡಿಗೇರ ಮಾತನಾಡಿ, ಜೋಡಳ್ಳಿಯವರು ಹಿರಿಯ ಅಧಿಕಾರಿಗಳ ಆದೇಶವನ್ನು ಚಾಚು ತಪ್ಪದೆ ಪಾಲಿಸುವಂತಹ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು.
ಈ ಠಾಣೆಯಲ್ಲಿಯೇ ಹಿರಿಯ ಅನುಭವಿ ಮಾರ್ಗದರ್ಶಕರಾಗಿದ್ದರು. ಅವರನ್ನು ನಾವು ಬೀಳ್ಕೊಡಲು ಮನಸ್ಸಿಲ್ಲದಿದ್ದರೂ ಅದು ಸರ್ಕಾರದ ನಿಯಮದಿಂದ ಅನಿವಾರ್ಯ ಎಂದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ವೇದಿಕೆಯಲ್ಲಿಯೇ ವಿವಿಧ ಸಂಘಟನೆಗಳು ಸಿ.ಕೆ. ಜೋಡಳ್ಳಿಯವರಿಗೆ ಸನ್ಮಾನಿಸಿದರು. ಪುರಸಭೆ ಸದಸ್ಯರಾದ ಎನ್.ವಿ. ಪದ್ಮಾ, ಮಾಲತೇಶ ಬಾಬುಸಿಂಗನವರ, ಮಾಜಿ ಪುರಸಭೆ ಸದಸ್ಯ ಗುಡ್ಡಪ್ಪ ಮತ್ತೂರ, ಗುರುಶಾಂತಪ್ಪ, ಶಿವಾನಂದ ದೇವಸೂರ, ಮಂಜುನಾಥ ಕೂಲಿ, ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

