ಹಾವೇರಿ

ಕಲುಷಿತ ನೀರು: ಪ್ರತಿಭಟನೆ

Published On :

ಶಿಗ್ಗಾಂವಿ: ಪಟ್ಟಣದ ಪುರಸಭೆ ಪೂರೈಸುತ್ತಿರುವ ನಳದ ನೀರು ಕಲುಷಿತ ಮತ್ತು ಕ್ರೀಮಿಕೀಟಗಳಿಂದ ಕೂಡಿದ್ದು, ಶುದ್ಧ ನೀರು ಪೂರೈಸುವಂತೆ  ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎಂದು 5ನೇ ವಾರ್ಡ್‌ನ ನಾಗರಿಕರು ಪ್ರತಿಭಟನೆ ನಡೆಸಿದರು.
ಪುರಸಭೆ ಪೂರೈಕೆ ಮಾಡುವ ನಾಗನೂರ ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೆ ನೀರಿನಲ್ಲಿ ಕ್ರಿಮಿಕೀಟಗಳು ಬರುತ್ತಿವೆ. ಅಂತಹ ನೀರನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದೂವರೆ ತಿಂಗಳಿಂದ ಇಂತಹ ನೀರು ವಾರಕ್ಕೆರಡು ಬಾರಿ ಪೂರೈಕೆ ಮಾಡುತ್ತಿರುವ ಪುರಸಭೆ ಗಮನ ಸೆಳೆದರೂ ಯಾರೊಬ್ಬರೂ ಇತ್ತ ಗಮನಹರಿಸುತ್ತಿಲ್ಲ. ಪುರಸಭೆಯ ಅಧ್ಯಕ್ಷ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಕಲುಷಿತ ನೀರು ನಾಗನೂರು ಕೆರೆಯಿಂದ ಪೂರೈಕೆಯಾಗುತ್ತಿಲ್ಲ. ವಿಭಾಗದ ಪೈಪ್‌ಲೈನ್‌ನಲ್ಲಿ ಕೊಳಚೆ ಸೇರಿಕೊಂಡಿರಬಹುದು ಇಲ್ಲ ಪೈಪ್‌ಲೈನ್ ಕಾಲುವೆಯಲ್ಲಿ ಒಡೆದಿರುವ ಕುರಿತು ಸಂಶಯ ವ್ಯಕ್ತಪಡಿಸಿ ಸಮಸ್ಯೆಯನ್ನು ತಕ್ಷಣ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸ್ಥಳಕ್ಕೆ ಬೇವಿನಮರದ ಭೇಟಿ: ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಪ್ರತಿಭಟನೆ ನಡೆಯುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಕ್ರೋಶಗೊಂಡಿದ್ದ ಜನರನ್ನು ಸಮಾಧಾನ ಪಡಿಸಿದರು. ಅಲ್ಲದೆ, ನಿರ್ಲಕ್ಷ್ಯ ವಹಿಸಿದ ನೀರು ಪೂರೈಕೆ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವುದಾಗಿ ತಿಳಿಸಿದರು. ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಶುದ್ಧ ನೀರಿನಲ್ಲಿ ಕಲುಷಿತ ನೀರು ಎಲ್ಲಿ ಮಿಶ್ರಣಗೊಳ್ಳುತ್ತಿದೆ ಎಂಬುದನ್ನು ತಕ್ಷಣ ಪತ್ತೆ ಹಚ್ಚುವಂತೆ ಸೂಚಿಸಿದರು. ಎರಡು ಗಂಟೆಗೂ ಹೆಚ್ಚು ಕಾಲ ವಿಭಾಗದಲ್ಲೇ ಠಿಕಾಣಿ ಹೂಡಿದ ವಿಧಾನಪರಿಷತ್ ಸದಸ್ಯ ಬೇವಿನಮರದ ಸಮಸ್ಯೆಗೆ ಪರಿಹಾರ ಕಲ್ಪಿಸಿ ಚರಂಡಿಯಿಂದ ಮಿಶ್ರಣಗೊಳ್ಳುತ್ತಿದ್ದ ನೀರನ್ನು ತಕ್ಷಣ ಬಂದ್ ಮಾಡಿಸಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಪುರಸಭೆ ಸಿಬ್ಬಂದಿಗೆ ಸೂಚಿಸಿದರು.
ಸದಸ್ಯರಾದ ಸುಭಾಸ ಚೌಹಾಣ್, ಪರಶುರಾಮ ಸೊನ್ನದ, ಬರಮಜ್ಜ ನವಲಗುಂದ, ಮುಖಂಡರಾದ ನರಹರಿ ಕಟ್ಟಿ, ಉಮೇಶ ಗೌಳಿ, ಕುಮಾರ ಬಾಳಿಕಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.