ಹಾವೇರಿ

ಮತ್ತೆ ಹಾರಿದ ಸ್ಪೈಸ್ ಜೆಟ್

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 24
ಹದ್ದು ಡಿಕ್ಕಿ ಹೊಡೆದು, ಹಾನಿಗೀಡಾಗಿ ಆರು ದಿನಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದುರಸ್ತಿಗೊಳ್ಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ಗುರುವಾರ ಮಧ್ಯಾಹ್ನ ಮುಂಬೈಗೆ ತೆರಳಿತು.
ನಿಗದಿಯಂತೆ ಬುಧವಾರವೇ ವಿಮಾನ ಹಾರಾಟ ಪ್ರಾರಂಭಿಸಬೇಕಿತ್ತಾದರೂ ತಾಂತ್ರಿಕ ಕಾರಣಗಳಿಂದ ಒಂದು ದಿನ ತಡವಾಗಿ ಮುಂಬಯಿನತ್ತ ಪ್ರಯಾಣ ಬೆಳೆಸಿತು. ವಿಮಾನ ಹಾರಾಟಕ್ಕೆ ಎಲ್ಲ ರೀತಿಯಿಂದ ಸಮರ್ಪಕವಾಗಿರುವುದನ್ನು ಪರಿಶೀಲಿಸಿದ ಮೇಲೆ ಮುಂಬೈನಿಂದ ಬಂದಿದ್ದ ಪರಿಣಿತರ ತಂಡ ಮಂಗಳವಾರ ರಾತ್ರಿ ಅಥವಾ ಬುಧವಾರ ಮಧ್ಯಾಹ್ನ ಫಿಟ್ನೆಸ್ ಸರ್ಟಿಫಿಕೇಟ್ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ವಿಳಂಬವಾಗಿದ್ದರಿಂದ ವಿಮಾನ ಬುಧವಾರದ ಬದಲು ಗುರುವಾರ ಮುಂಬೈಗೆ ಹಾಯಿತು. ಬುಧವಾರ ಸಂಜೆ 4 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನ ಗಗನಕ್ಕೆ ನೆಗೆಯಿತು. ವಿಮಾನದಲ್ಲಿ ಪೈಲಟ್ ಹಾಗೂ ಕೆಲ ಪರಿಣಿತರನ್ನು ಹೊರತುಪಡಿಸಿ ಯಾವುದೇ ಪ್ರಯಾಣಿಕರು ಇರಲಿಲ್ಲವೆಂದು ಹೇಳಲಾಗಿದೆ.
ದಿಲ್ಲಿ-ಜಬಲಪುರ-ಮುಂಬೈ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈಯಿಂದ ಏ. 19ರಂದು ಮಧ್ಯಾಹ್ನ 2.30ಕ್ಕೆ ಬಂದಿಳಿದು ರನ್ ವೇಯಲ್ಲಿ ಸಾಗುತ್ತಿದ್ದಾಗ ಹದ್ದು ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ವಿಮಾನದ ಮುಂಭಾಗಕ್ಕೆ ಧಕ್ಕೆಯಾಗಿತ್ತು. ವಿಮಾನದಲ್ಲಿ 67 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.