ಎಪಿಎಂಸಿಯಲ್ಲಿ ಸೌಲಭ್ಯ ಕಲ್ಪಿಸಿ
ಬ್ಯಾಡಗಿ: ಸ್ಥಳೀಯ ಎಪಿಎಂಸಿಯಲ್ಲಿ ಖಾಲಿ ಲಾರಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು, ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಿಸುವಂತೆ, ಟೆಂಡರ್ ತಿಳಿದುಕೊಳ್ಳಲು ಬೃಹತ್ ಟಿವಿ ಸ್ಕ್ರೀನ್ ಅಳವಡಿಸಿ ಅನುಕೂಲ ಕಲ್ಪಿಸುವಂತೆ ರೈತರು ಆಗ್ರಹಿಸಿದ ಘಟನೆ ಗುರುವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಯಚೂರಿನ ರೈತ ಭೀಮೇಶ್ ಅಂತಾರಾಷ್ಟ್ರೀಯ ಖ್ಯಾತಿ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಸ್ಥಳೀಯ ಎಪಿಎಂಸಿ ಸಮಸ್ಯೆಗಳ ಆಗರವಾಗಿದೆ. ನಿತ್ಯ ಸಾವಿರಾರು ಲಾರಿಗಳು ಮೆಣಸಿನಕಾಯಿ ಮಾಲ್ನ್ನು ಹೊತ್ತು ಎಪಿಎಂಸಿ ಪ್ರವೇಶಿಸುತ್ತವೆ. ಆದರೆ, ಚೀಲ ಇಳಿಸಿದ ಬಳಿಕ ಮಾರುಕಟ್ಟೆ ಪ್ರಾಂಗಣದಿಂದ ಹೊರ ಹೋಗುವುದಿಲ್ಲ. ಈ ಸಂದರ್ಭದಲ್ಲಿ ಉಂಟಾಗುವ ಟ್ರಾಫಿಕ್ಜಾಮ್ನಿಂದ ರೈತರಿಗೆ ಅನಗತ್ಯ ಕಿರಿಕಿರಿಯಾಗುತ್ತಿದೆ. ಅಲ್ಲದೇ ಹಿಂದಿನಿಂದ ಬರುವ ಲಾರಿಗಳಿಗೆ ಅನ್ಲೋಡ್ ಮಾಡಲು ಅವಕಾಶವೇ ಇಲ್ಲದಂತಾಗಿದೆ. ಕೂಡಲೇ ಎಪಿಎಂಸಿ ಆಡಳಿತ ಮಂಡಳಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ರುದ್ರೇಶ್ ಆಸಂಗಿ ಮಾತನಾಡಿ, ಡಿಕ್ಲೇರ್ ಮಾಡಿದ ಟೆಂಡರ್ಗಳನ್ನು ರೈತರಿಗೆ ತಿಳಿಸುವಲ್ಲಿ ರೈತರಿಗೆ ಮೋಸವಾಗುತ್ತಿದೆ. ಕೆಲ ಅಂಗಡಿಗಳ ಮಾಲೀಕರು ತಮಗೆ ಮನಸ್ಸಿಗೆ ಬಂದ ದರಗಳನ್ನು ರೈತರಿಗೆ ತಿಳಿಸುವ ಮೂಲಕ ರೈತನ ಮೇಲೆ ಆರ್ಥಿಕ ಶೋಷಣೆ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯ ಎಪಿಎಂಸಿ ಅಧಿಕಾರಿಗಳು ಕೇವಲ ದಂಡ, ದೋಷಗಳನ್ನು ತುಂಬಿಸಿಕೊಂಡು ಮತ್ತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ.. ಎಂದು ಪ್ರಶ್ನಿಸಿದರು. ಪ್ರಾಂಗಣದ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್ ಟಿವಿ ಸ್ಕ್ರೀನ್ಗಳನ್ನು ಅಳವಡಿಸುವ ಮೂಲಕ ಡಿಕ್ಲೇರ್ ಮಾಡಿದ ದರಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.
ರೈತ ಭವನ ಏಕಿಲ್ಲ?: ರೈತ ವಿರೇಶ್ ಮಾತನಾಡಿ, ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ರೈತರ ಅನುಕೂಲಕ್ಕಾಗಿ ರೈತ ಭವನಗಳನ್ನು ನಿರ್ಮಿಸಿದೆ. ಆದರೆ, ಸ್ಥಳೀಯ ಎಪಿಎಂಸಿಯಲ್ಲಿ ರೈತ ಭವನವೇ ಮಾಯವಾಗಿದ್ದು, ದೂರದಿಂದ ಆಗಮಿಸುವ ರೈತರಿಗೆ ಶೌಚಾಲಯ, ಸ್ನಾನಗೃಹ ಮತ್ತು ವಿಶ್ರಾಂತಿ ಗೃಹಗಳಿಲ್ಲದೇ ಒದ್ದಾಡುವಂತಾಗಿದೆ. ರೈತರಿಂದಲೇ ಕೋಟಿಗಟ್ಟಲೇ ಆದಾಯ ಪಡೆಯುತ್ತಿರುವ ಸ್ಥಳೀಯ ಎಪಿಎಂಸಿ ಅವರ ಪಾಲಿಗೆ ಮಾತ್ರ ಇದ್ದೂ ಸತ್ತತ್ತಾಂಗಿದ್ದು ಕೂಡಲೇ ಸುಸಜ್ಜಿತ ರೈತಭವನ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಎಪಿಎಂಸಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರುದ್ರಪ್ಪ ಹರ್ತಿಕೋಟಿ, ಹರೀಶ್ ನಾಯ್ಕ್, ಮಾರುದ್ರಪ್ಪ ಹರಿಜನ, ಹುಲುಗಪ್ಪ ವಾಲ್ಮೀಕಿ, ಅಲ್ಲಾಭಕ್ಷ ಕಲಕೋಟಿ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

