ಯುವ ಶಕ್ತಿಯಿಂದ ಬದಲಾವಣೆ
ಹಾವೇರಿ: ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಕನಸಿರಬೇಕು. ಅದನ್ನು ನನಸು ಮಾಡುವತ್ತ ಶಿಸ್ತು ಮತ್ತು ಆದರ್ಶಗಳ ಮೂಲಕ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಶ್ರಮ, ನಂಬಿಕೆ ಮತ್ತು ಶ್ರದ್ಧೆಗಳ ಮೂಲಕ, ಸವಾಂರ್ಗೀಣ ಅಭಿವೃದ್ಧಿಯ ಮೂಲಕ ಸಮಗ್ರ ದೇಶ ಬದಲಾಯಿಸುವ ಶಕ್ತಿ ಯುವ ಜನಾಂಗಕ್ಕಿದೆ ಎಂದು ಉಪಪ್ರಾಚಾರ್ಯ ಪ್ರೊ.ಎನ್.ಕೆ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 2013-14ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗಗಳು ಭಾರತ ದೇಶದ ಸಂಪದ್ಭರಿತ ಕ್ಷೇತ್ರಗಳಾಗಿವೆ. ಬೆಳೆಯುವ ಯುವ ಜನಾಂಗ ಈ ಎರಡು ವಿಭಾಗಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ದೇಶದ ಪ್ರಗತಿಗೆ ದುಡಿಯುವ ಅಗತ್ಯವಿದೆ. ವೈಚಾರಿಕತೆ ಮತ್ತು ವೈಜ್ಞಾನಿಕತೆ ಇಂದಿನ ಅವಶ್ಯಕತೆಗಳಾಗಿದ್ದು, ವ್ಯಕ್ತಿ ಹೆತ್ತ ತಾಯಿ ತಂದೆ ಮತ್ತು ವಿದ್ಯೆ ಕಲಿಸಿದ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದದ್ದೇ ಆದಲ್ಲಿ ಸುಂದರ ಭವಿಷ್ಯ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ಕೆಎಲ್ಇ ಸಂಸ್ಥೆಯ ಮಾಜಿ ಸದಸ್ಯ ಎಂ.ಸಿ. ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಪಿ.ಡಿ. ಶಿರೂರ, ಕ್ರೀಡಾ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಡಿ.ಎ. ಕೊಲ್ಲಾಪುರೆ, ಕಾಲೇಜಿನ ಸ್ಥಾನಿಕ ಸದಸ್ಯ ಬಿ.ಸಿ. ಹೆರೂರ, ಬಸವರಾಜ ಮಾಸೂರ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಚಾರ್ಯ ಡಾ.ಬಿ.ಸಿ. ಬನ್ನೂರ ಸ್ವಾಗತಿಸಿದರು. ಪ್ರೊ.ಎನ್.ವಿ. ಕಂಬಾಳಿಮಠ ವಾರ್ಷಿಕ ವರದಿ ವಾಚನ ಮಾಡಿದರು. ಪ್ರೊ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಪ್ರೊ. ಶ್ವೇತಾ ಮರಿಗೌಡರ ವಂದಿಸಿದರು.
--
ಮನಸ್ಸು ಜಾಗೃತವಾದರೆ ಸಾಧನೆ
ಹಾನಗಲ್ಲ: ಸಾಧನೆಯ ಮನಸ್ಸಿಗಾಗಿ ಶ್ರಮವಹಿಸುವ ಇಚ್ಛಾಶಕ್ತಿ ಬೇಕು. ಪರಿಶ್ರಮವಿಲ್ಲದೆ ಯಾವುದೂ ಸಿಗದು. ಅದಕ್ಕಾಗಿ ನಮ್ಮೊಳಗಿನ ಮನಸ್ಸು ಜಾಗೃತವಾಗಿರಬೇಕು ಆಗ ಮಾತ್ರ ಸಾಧನೆ ಸಾಧ್ಯ ಎಂದು ಉಪನ್ಯಾಸಕ ವಿಶ್ವನಾಥ ಬೋಂದಾಡೆ ಹೇಳಿದರು.
ಅವರು ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ, ಸಾಧನೆಗೆ ಶ್ರಮವೋ, ಅದೃಷ್ಟವೋ ಎಂಬ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಪನ್ಯಾಸಕ ಎಂ.ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಟಿ.ಟಿ. ಹರೀಶ, ಬಿ.ಎಸ್. ರುದ್ರೇಶ ಪ್ರಶಿಕ್ಷಣಾರ್ಥಿಗಳಾದ ಪರಮೇಶ್ವರ ಮೊಗವೀರ, ಪ್ರವೀಣ ತಳವಾರ, ಹನುಮಂತಪ್ಪ ಹೈಬತ್ತಿ, ಅಶ್ವಿನಿ ತಿಮ್ಮಾಪೂರ, ಶಂಕರಗೌಡ ಪಾಟೀಲ್, ಉಪನ್ಯಾಸಕ ಪ್ರಕಾಶ ಹುಲ್ಲೂರ, ರಾಘವೇಂದ್ರ ಮಾಡಳ್ಳಿ, ಜಿ.ವಿ ಪ್ರಕಾಶ ಉಪಸ್ಥಿತರಿದ್ದರು. ಅನಿತಾ ನಾಯಕ ಸ್ವಾಗತಿಸಿದರು. ನಮಿತಾ ನಾಯಕ ನಿರ್ವಹಿಸಿದರು. ಪೂರ್ಣಿಮಾ ಕುರುಬರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

