ಹಾವೇರಿ

ಪ್ರಚೋದನಕಾರಿ ಬರಹ: ಭಜರಂಗದಳ ಪ್ರತಿಭಟನೆ

Published On :





ಕನ್ನಡಪ್ರಭ ವಾರ್ತೆ, ಹಿರೇಕೇರೂರು, ಜ. 29
ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ವೃತ್ತ ಬಳಿ ಕಟ್ಟಲಾಗಿದ್ದ ಫ್ಲೆಕ್ಸ್‌ನಲ್ಲಿ ಪ್ರಚೋದನಾಕಾರಿ ವಿವಾದಾತ್ಮಕ ಹೇಳಿಕೆಯನ್ನು ಹಾಕಿದ್ದ ಸಂಘಟಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಜರಂಗದಳದ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಘೋಷಣೆ ಹಾಕುತ್ತಾ ಪೊಲೀಸ್ ಠಾಣೆಗೆ ಆಗಮಿಸುತ್ತಿದಂತೆ ಒಂದು ಕೋಮಿನ ಯುವಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆಯಿತು.
ಮಧ್ಯ ಪ್ರವೇಶಿಸಿದ ಪೊಲೀಸರು, ಸಮುದಾಯದ ಮುಖಂಡರು ಆ ಕೋಮಿನ ಯುವಕರನ್ನು ಎದುರಿಗಿದ್ದ ಈದ್ಗಾ ಮೈದಾನದ ಒಳಗೆ ಕಳುಹಿಸಿ ಗೇಟ್ ಹಾಕಿದರು. ಇತ್ತ ಬಜರಂಗದಳದ ಕಾರ್ಯಕರ್ತರನ್ನು  ಮೈದಾನದ ಬಳಕೆ ಕರೆದೊಯ್ಯಲಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು.
ಬಳಿಕ ಬಜರಂಗದ ಕಾರ್ಯಕರ್ತರು ಸಿಪಿಐ ವಿಜಯ ಮುರಗುಂಡಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗ ದಳದ ಜಿಲ್ಲಾ ಸಂಚಾಲಕ ಶಿವಕುಮಾರ ಪ್ಯಾಟೇರ, ಅಂಬೇಡ್ಕರ್ ವೃತ್ತದ ಬಳಿ ಒಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಬೇಕು ಎಂಬ ಉದ್ದೇಶದಿಂದ ಇಂತಹ ಪ್ರಚೋದನಕಾರಿ ಹೇಳಿಕೆಯನ್ನು ಬ್ಯಾನರ್‌ನಲ್ಲಿ ಹಾಕಲಾಗಿದೆ. ಇದು ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ ಎಂದು ದೂರಿದರು. ಬ್ಯಾನರ್ ಕಟ್ಟಿದವವರನ್ನು ಪತ್ತೆ ಹಚ್ಚಿ, ಕೂಡಲೇ ಬಂಧಿಸಬೇಕು. ಈ ಹೇಳಿಕೆಯನ್ನು ಆಕ್ಷೇಪಿಸಿದವರಿಗೆ ಕೆಲವರು ಜೀವ ಬೇದರಿಕೆ ಹಾಕಿದ್ದಾರೆ. ತಕ್ಷಣ ಇಂಥವರ ವಿರುದ್ಧ ಮೂರು ದಿನಗಳ ಒಳಗಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಿರೇಕೆರೂರ ಬಂದ್ ಕರೆ ನೀಡಲಾಗುವುದು ಎಂದು ತಿಳಿಸಿದರು.
ಸಿಪಿಐ ವಿಜಯ ಮರಗುಂಡಿ ಮಾತನಾಡಿ, ಈಗಾಗಲೇ ಈ ಕುರಿತು ಪ್ರಕರಣ ದಾಖಲಾಗಿದ್ದು, ತಕ್ಷಣ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು. ಕಾರಣ ಪಟ್ಟಣದಲ್ಲಿ ಶಾಂತಿಯನ್ನು ಕಾಪಾಡಿ ಎಂದು ಮನವಿಮಾಡಿದರು.
ಕಾರ್ಯಕರ್ತರಾದ ಮಂಜು ಶಿರಳ್ಳಿ, ರಾಮು ಒಡೆಯರ್, ಅನಿಲ ಹಲವಾಗಿಲ, ದೇವರಾಜ ಚಿಂದಿ, ವಿನಾಯಕ ವಾಲಿ, ದೇವರಾಜ ಹಂಚಿನಮನಿ, ವಿಜಯ ಮುದಿಗೌಡ್ರ, ಅನಿಲ ಜೋಗಿಹಳ್ಳಿ, ಗಣೇಶ ಹಾಲಪೂಜಿ, ರಮೇಶ ಬಾತಣ್ಣನವರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.