ಕುಟುಂಬ ಸಾಮರಸ್ಯ ಕಾಪಾಡಿ: ದೇಸಾಯಿ ಕರೆ
ಹಾನಗಲ್ಲ: ತಾಳ್ಮೆ, ಸಹಿಷ್ಣುತೆ ಗುಣಗಳುಳ್ಳ ಭಾರತೀಯ ಸ್ತ್ರೀ, ಕುಟುಂಬದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಅಗತ್ಯವಿದೆ ಎಂದು ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಯಮುನಾ ದೇಸಾಯಿ ಹೇಳಿದರು.
ಪಟ್ಟಣದ ಫ್ರೆಂಡ್ಸ್ ಅಸೋಸಿಯೇಶನ್ ಕ್ಲಬ್ನಲ್ಲಿ ಜರುಗಿದ ಸರಸ್ವತಿ ಮಹಿಳಾ ಮಂಡಳದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಪಾಶ್ಚ್ಯಾತ್ಯರ ಅನುಕರಣೆ ಬಿಟ್ಟು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ, ಸ್ತ್ರೀಯರ ಮಾನ-ಪ್ರಾಣ ಉಳಿಸಲು ಆದ್ಯತೆ ನೀಡಬೇಕು. ಮಹಿಳೆಯರು ಪುರುಷರಿಗಿಂತ ಹೆಚ್ಚು ಕ್ರಿಯಾಶೀಲಳಾಗಿದ್ದು, ಜವಾಬ್ದಾರಿಯನ್ನು ಅರಿತು ಬಾಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ, ಈಚೆಗೆ ಸ್ತ್ರೀಯರಿಗೆ ಸಮಾನ ಅವಕಾಶ, ಸ್ಥಾನಮಾನ ದೊರೆಯುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕುಟುಂಬದ ಪ್ರಗತಿ ಸಾಧಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳದ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಗುಡಿ, ಲಕ್ಷ್ಮೀ ಕುಲಕರ್ಣಿ ಮಾತನಾಡಿದರು. ಡಾ ವಿಜಯಾ ಕುಲಕರ್ಣಿ, ಅಕ್ಕಮ್ಮ ಕುಂಬಾರಿ, ಶಾರದಾ ಉದಾಸಿ, ಪಾರ್ವತಿಬಾಯಿ ಕಾಶಿಕರ, ಶಾಂತಕ್ಕ ಹೊಳಲದ, ಛಾಯಾ ದೇಶಪಾಂಡೆ, ವಿಜಯಾ ಕಬ್ಬೂರ, ಸುನಂದಾ ಸುಗಂಧಿ, ರೇಖಾ ಶೆಟ್ಟರ, ಡಾ ಪುಷ್ಪಾ ಬಸ್ತಿ, ಎನ್.ಎಂ. ಹೊಳಲದ, ಶಿವಗಂಗಕ್ಕ ಪಟ್ಟಣದ ಇದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

