ಹಾವೇರಿ

ಅರ್ಜಿ ಆಹ್ವಾನ

Published On :

ಹಾವೇರಿ: ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರವು ಹಾವೇರಿ ಜಿಲ್ಲೆಯ ಪ್ರತಿ ತಾಲೂಕಿಗೆ ಎರಡು ರಾಷ್ಟ್ರೀಯ ಯುವದಳ ಹುದ್ದೆಯಂತೆ (ಮಾಸಿಕ ರು. 2,500) ತಾತ್ಕಾಲಿಕ ಒಂದು ವರ್ಷದ ಅವಧಿಗೆ, ಎರಡು ವರ್ಷದ ಅವಧಿಗೆ ಮಾತ್ರ ನೇಮಕಾತಿ ಮಾಡಲು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಂದ ಫೆ. 5ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಹಾಗೂ ಇತರೆ ಜಾತಿ ಪುರುಷರು ಪದವೀಧರರಾಗಿರಬೇಕು. ಮಹಿಳಾ ಹಾಗೂ ಎಸ್‌ಸ್ಸಿ-ಎಸ್ಟಿ  ಅಭ್ಯರ್ಥಿಗಳು ಮೆಟ್ರಿಕ್, ದ್ವಿತೀಯ ಪಿಯುಸಿ ಉತ್ತೀರ್ಣರಾಗಿಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08375-233062 ಇಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.
ಮದ್ಯವ್ಯಸನಿ ಆತ್ಮಹತ್ಯೆ
ಹಾವೇರಿ: ಮದ್ಯವ್ಯಸನಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ. ಮೃತನನ್ನು ಹೊನ್ನಪ್ಪ ಶಂಕ್ರಪ್ಪ ಸಣ್ಣಗಣ್ಣನವರ (38) ಎಂದು ಗುರುತಿಸಲಾಗಿದೆ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಚಿಕಿತ್ಸೆಗೆ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ತಗುಲಿ ಮಹಿಳೆ ಸಾವು
ಹಾವೇರಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆಯೋರ್ವಳು ಮೃತಪಟ್ಟ ಘಟನೆ ರಾಣಿಬೆನ್ನೂರು ತಾಲೂಕು ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಸುಶೀಲಮ್ಮ ನಾಗರಾಜರಾವ್ ಎರೆಸೀಮಿ ಎಂದು ಗುರುತಿಸಲಾಗಿದೆ. ಸೀಮೆ ಎಣ್ಣೆ ಹಾಕಿ ಕಡ್ಡಿಗೀರಿ ದೀಪ ಹಚ್ಚುವ ವೇಳೆ ಸೀಮೆ ಎಣ್ಣೆ ಕ್ಯಾನು ದೀಪದ ಮೇಲೆ ಉರುಳಿ ಬಿದ್ದು ಬೆಂಕಿ ಹೊತ್ತಿದ ಪರಿಣಾಮ ಈ ಘಟನೆ ಸಂಭವಿಸಿದೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ಹಾವೇರಿ: ಶಾಲೆಗೆಂದು ಹೋದ ಬಾಲಕನೋರ್ವ ತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಘಟನೆ ಸವಣೂರು ತಾಲೂಕ ಹೂವಿನ ಶಿಗ್ಲಿಯಲ್ಲಿ ಜರುಗಿದೆ. ನಾಪತ್ತೆಯಾದ ಬಾಲಕ ಹೂವಿನ ಶಿಗ್ಲಿ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ನಂದೀಶ ಗುರುಲಿಂಗಯ್ಯ ಸುಂಕದಮಠ (16) ಎಂದು ಗುರುತಿಸಲಾಗಿದೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬ್ಬಂದಿ ಕೊಲೆ ಯತ್ನ
ಹಾವೇರಿ: ರಾಷ್ಟ್ರೀಯ ಹೆದ್ದಾರಿಯ ಟೋಲ್ ನಾಕಾ ಸಿಬ್ಬಂದಿಯ ಕೊಲೆಗೆ ಯತ್ನಿಸಿದ ಘಟನೆ ರಾಣಿಬೆನ್ನೂರು ತಾಲೂಕು ಚಳಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಟೋಲ್ ನಾಕಾದಲ್ಲಿ ಜರುಗಿದೆ. ಕೋಡಿಯಾಲ ಹೊಸಪೇಟೆ ನಿವಾಸಿ ಗಿರೀಶ ಜುಂಜಪ್ಪ ಹೆಗ್ಗಪ್ಪನವರ ಸೇರಿದಂತೆ ಮೂವರಿಂದ ನಾಕಾ ಸಿಬ್ಬಂದಿ ಕಾರಿನ ಹಣ ಕೇಳಿದಾಗ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಕ್ಕದಲ್ಲಿದ್ದ 6 ಜನ ಸಿಬ್ಬಂದಿಗೆ ಕಲ್ಲು, ರಾಡಿನಿಂದ ಹೊಡೆದು ರು. 18 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.