102 ಎಕರೆಗೆ ಹಾನಿ
ಚನ್ನರಾಯಪಟ್ಟಣ: ಪಟ್ಟಣದ ಹೊರಭಾಗದಲ್ಲಿ ಹಾದುಹೋಗಿರುವ ಹೇಮಾವತಿ ಎಡದಂಡೆ ನಾಲೆ ಒಡೆದ ಪರಿಣಾಮ 102 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಲವು ಬೆಳೆಗಳು ಹಾಳಾಗಿರುವ ಅಂದಾಜು ಮಾಡಲಾಗಿದೆ ಎಂದು ತಹಸೀಲ್ದಾರ್ ಕೆ. ಕೃಷ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಾಲೆ ಒಡೆದು ರಭಸವಾಗಿ ನೀರು ಹರಿದ ಪರಿಣಾಮ ನಾಗಸಮುದ್ರ, ಮಾರೇನಹಳ್ಳಿ ಯಾಚೇನಹಳ್ಳಿ, ಡಿ.ಕಾಳೇನಳ್ಳಿ, ಗದ್ದೆಬಿಂಡೇನಹಳ್ಳಿ ಹಾಗೂ ಚನ್ನರಾಯಪಟ್ಟಣ ಅಮಾನಿಕೆರೆ ಅಚ್ಚುಕಟ್ಟಿನಲ್ಲಿ ಶುಂಠಿ, ಕಬ್ಬು, ಭತ್ತ, ರಾಗಿ ತೆಂಗು, ಕುಂಬಳ, ಅಡಿಕೆ, ಜೋಳ ಬಾಳೆ, ದ್ವಿದಳ ದಾನ್ಯ ಸೇರಿದಂತೆ ಮಣ್ಣು ಕೊಚ್ಚಿಹೋಗಿರುವುದನ್ನು ಮೂರು ತಂಡಗಳನ್ನು ರಚಿಸಿ ಬೆಳೆ ಹಾನಿ ಗುರುತಿಸಲಾಗಿದೆ. 102 ಎಕರೆ ಬೆಳೆ ಹಾನಿಗಾಗಿ 20.2ಲಕ್ಷ, ಪಟ್ಟಣದ ವ್ಯಾಪ್ತಿಯಲ್ಲಿ 11 ಮನೆಗಳಿಗೆ ಹಾನಿಯಾಗಿರುವುದರಿಂದ 7.43ಲಕ್ಷ, ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ, ಬೋರ್ವೆಲ್ಗಳು ಹಾಗೂ ಸೇತುವೆ ಹಾನಿಯಾಗಿರುವುದಕ್ಕೆ 36.5ಲಕ್ಷ ರು.ಗಳಷ್ಟು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ಡಿಸಿಗೆ ಕಳುಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

