ಕುಬ್ಜ ಮಕ್ಕಳ ತಾಯಿಗೆ ನಿತ್ಯವೂ ನರಕ
ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಶಾಂತಮ್ಮ ಎಂಬಾಕೆಗೆ ಹುಟ್ಟಿರುವ ಮೂರು ಮಕ್ಕಳೂ ಹುಟ್ಟಿನಿಂದಲೇ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಜತೆಗೆ ಈಕೆಯನ್ನೇ ಅವಲಂಬಿಸಿರುವ ತಮ್ಮನೂ ಜನ್ಮತಃ ಅಂಗವಿಕಲ. ಇವರೆಲ್ಲರಿಗೂ ವಯಸ್ಸಾಗಿದ್ದರೂ ಕೂಡ ನೋಡಲು ಕುಬ್ಜರಾಗಿದ್ದು, ಇತರರಂತೆ ಸಲೀಸಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಕಾಲ ಮೇಲೆ ಬಹಳ ಹೊತ್ತು ನಿಲ್ಲಲಾಗದ ಸ್ಥಿತಿ ಅವರದು.
ಮಕ್ಕಳೆಲ್ಲಾ ಕುಬ್ಜರು: ಶಾಂತಮ್ಮ ಅವರಿಗೆ ಸೋದರಮಾವನ ಜತೆಯಲ್ಲಿ ವಿವಾಹವಾಗಿ 25 ವರ್ಷಗಳೇ ಆಗಿದೆ. ಈಕೆಗೆ ಮಂಜುನಾಥ(23), ಹರೀಶ(18) ಹಾಗೂ ರಾಜೇಶ(16) ಎಂಬ ಮೂರು ಮಕ್ಕಳಿದ್ದಾರೆ. ಇದರ ಜೊತೆಯಲ್ಲಿ ಶಾಂತಮ್ಮನ ತಮ್ಮ ಕುಮಾರ(33) ಕೂಡ ಹುಟ್ಟಿನಿಂದಲೇ ಕುಬ್ಜ. ಹೀಗೆ ಹುಟ್ಟಿದ ಮೂರು ಮಕ್ಕಳೂ ಅಂಗವಿಕಲತೆಯಿಂದ ಹುಟ್ಟಿದ ಮೇಲೆ, ಶಾಂತಮ್ಮನ ಗಂಡ ಒಂದು ದಿನ ಹೇಳದೇ ಕೇಳದೆ ಮನೆ ಬಿಟ್ಟು ಹೋದವನು ಮತ್ತೆ ಮರಳಿ ಬಂದಿಲ್ಲ. ಈಗ ಆಕೆ ತನ್ನ ಅಣ್ಣ ರಮೇಶನ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದಾಳೆ.
ಅಂಗವಿಕಲ ವೇತನವೇ ಆದಾಯ
ಈ ಮೂವರು ಅಂಗವಿಕಲ ಮಕ್ಕಳಿಗೆ ಸರ್ಕಾರದ ಅಂಗವಿಕಲ ವೇತನವಾಗಿ ಮಾಸಿಕ ತಲಾ 500 ರು. ಸಿಗುತ್ತಿದ್ದು, ಇದು ಯಾವುದಕ್ಕೂ ಸಾಲುತ್ತಿಲ್ಲ. ಶಾಂತಮ್ಮನ ತಮ್ಮ ಕುಮಾರನದೂ ಇದೇ ಸ್ಥಿತಿ. ಇವರೆಲ್ಲರೂ ಅಂಗವಿಕಲರ ವೇತನದ ಹೆಚ್ಚಳಕ್ಕಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮೂಳೆ ರೋಗ ತಜ್ಞರಾದ ಡಾ. ಜೆ.ಕೆ.ದಿನೇಶ್ ಅವರಲ್ಲಿ ಮರು ವೈದ್ಯಕೀಯ ತಪಾಸಣೆಗಾಗಿ ಒಳಗಾಗಿದ್ದರು. ವೈದ್ಯರು ಅಂಗವಿಕಲತೆಯ ಪ್ರಮಾಣವು ಹೆಚ್ಚಿದ್ದಲ್ಲಿ ನೀಡುವ ಪತ್ರದ ಮೇಲೆ ಸರ್ಕಾರದ ಅಂಗವಿಕಲ ವೇತನವು 500 ರು.ಗಳಿಂದ 1ಸಾವಿರ ರು. ಗಳಿಗೆ ಹೆಚ್ಚಾಗುತ್ತದೆ.
ನೆರವಿಗೆ ಮನವಿ
ಈ ಅಂಗವಿಕಲ ಮಕ್ಕಳ ಸಹಾಯ ಮಾಡಲಿಚ್ಚಿಸುವವರು ರಮೇಶ್ ಮೊಬೈಲ್ ಸಂಖ್ಯೆ -
9611520753 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

