ವಿ.ಆರ್.ಭಟ್ ಬಂಧನಕ್ಕೆ ಒತ್ತಾಯ
ಮಂಡ್ಯ: ಸಾಮಾಜಿಕ ಜಾಲ ತಾಣ ಫೇಸ್ ಬುಕ್ನಲ್ಲಿ ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಎನ್. ಪ್ರಭಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರ್ಎಸ್ಎಸ್ ಮುಖಂಡ ವಿ.ಆರ್.ಭಟ್ ಬಂಧನಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ಮೆರವಣಿಗೆ ನಡೆಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಎಸ್ಎಫ್ಐ ಹಾಗೂ ಸಿಐಟಿಯು ಸಂಘಟನೆಗಳ ಕಾರ್ಯಕರ್ತರು ವಿ.ಆರ್. ಭಟ್ ವಿರುದ್ಧ ಘೋಷಣೆ ಕೂಗಿದರು.
ಸನಾತನ ಧರ್ಮ ಮತ್ತು ಆಚರಣೆಗಳು ಮಹಿಳೆಯರಿಗೆ ಅನೇಕ ಕಟ್ಟುಪಾಡುಗಳನ್ನು ವಿಧಿಸಿವೆ ಎಂದು ಫೇಸ್ ಬುಕ್ನಲ್ಲಿ ಬರೆದಿದ್ದಕ್ಕೆ ಪ್ರತಿಯಾಗಿ ವಿ.ಆರ್.ಭಟ್ ಇಂತಹ ಹೆಣ್ಣು ಮಕ್ಕಳನ್ನು ಜುಟ್ಟು ಹಿಡಿದು ಬಲವಂತವಾಗಿ ಅತ್ಯಾಚಾರವೆಸಗಬೇಕು ಎಂದು ಟೀಕಿಸಿ ಫೇಸ್ ಬುಕ್ನಲ್ಲಿ ಪ್ರಕಟಿಸಿರುವುದನ್ನು ಖಂಡಿಸಿದರು.
ಸನಾತನ ಧರ್ಮವನ್ನು ಪ್ರತಿಪಾದಿಸುವ ವ್ಯಕ್ತಿಯ ಮನಸ್ಥಿತಿ ಹೇಗಿರುತ್ತದೆ. ಅವರಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಭಾವನೆ ಇರುವುದಕ್ಕೆ ಅವರ ನಡೆ-ನುಡಿಗಳೇ ಸಾಕ್ಷಿಯಾಗಿವೆ. ಇಂತಹ ಮನಸ್ಥಿತಿಯುಳ್ಳವರನ್ನು ಶೀಘ್ರವೇ ಬಂಧಿಸಬೇಕು. ವಿ.ಆರ್. ಭಟ್ ವಿರುದ್ಧ ಪ್ರಭಾ ಅವರು ಈಗಾಗಲೇ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಶೀಘ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ ಮುಖಂಡೆ ಸಿ.ಕುಮಾರಿ, ವಿವಿಧ ಸಂಘಟನೆಗಳ ಮುಖಂಡರಾದ ದೇವಿ, ಗೌರಮ್ಮ, ಕುಮಾರ್, ಪವಿತ್ರಾ, ರಂಜಿತಾ, ಶೋಭಾ, ಭಾಗ್ಯಮ್ಮ, ಲತಾ, ಪುನೀತಾ, ಸುಶೀಲಾ, ನಾಗರಾಜು, ರಾಮು ಹಲವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

