ಹಾಸನ

ನಗರಸಭೆ ಸೂಪರ್ ಸೀಡ್ ಮಾಡಿ

Published On :

ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ, ಆರೋಪಿಗಳ
ಬಂಧನಕ್ಕೆ ತಾಲೂಕು ಬಿಜೆಪಿ ಒತ್ತಾಯ, ಟೆಂಡರ್ ಕರೆಯಿರಿ
ಹಾಸನ: ನಗರಸಭೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರ ಎಸಗಿದವರನ್ನು ಬಂಧಿಸಿ, ನಗರಸಭೆಯನ್ನು ಸೂಪರ್ ಸೀಡ್ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ಅಗಿಲೆ ಯೋಗೇಶ್, ನಗರಸಭೆಯಲ್ಲಿ ಅವ್ಯವಹಾರದಿಂದ ಆಡಳಿತ ಸಂಪೂರ್ಣ ಕುಂದಿದೆ. ನಗರಸಭೆಯಲ್ಲಿ ಇ-ಪ್ರಕ್ಯೂರ್ ಮೆಂಟ್ ಮೂಲಕ ಟೆಂಡರ್ ಕರೆಯಬೇಕು. ಆದರೆ ಹಲವಾರು ಟೆಂಡರ್‌ಗಳನ್ನು ಒಳಗೊಳಗೆ ಮಾಡಿ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಪಾರ್ಕ್‌ಗಳಿಗೆ ಮಕ್ಕಳ ಆಟದ ಸಾಮಾನು ಅಳವಡಿಸಲು ಒಂದು ಕೋಟಿಗೂ ಹೆಚ್ಚು ಹಣಕ್ಕೆ ಟೆಂಡರ್ ಮಾಡಿದ್ದು, ಇದು ಯಾವ ರಾಜ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ. ಆಟದ ಸಾಮಾಗ್ರಿಗಳು ಕಳಪೆ ಗುಣಮಟ್ಟದಾಗಿದ್ದು, 2 ಲಕ್ಷ ಬೆಲೆ ಬಾಳುವುದೆಂದು ತಜ್ಞರು ಹೇಳುತ್ತಾರೆ. ನಗರಸಭೆಗೆ ಸೇರಿರುವ ಸತ್ಯಮಂಗಲ ಪಂಚಾಯ್ತಿಯ ಒಂದು ಪಾರ್ಕಿಗೆ ಆಟದ ಸಾಮಾನು ಅಳವಡಿಸಿದ್ದಾರೆ ಮತ್ತು ಬೆಂಗಳೂರಿನ ಯಾರದೋ ಹೆಸರಿಗೆ ಗುತ್ತಿಗೆ ನೀಡಿದ್ದಾರೆ. ಅವರು ಸಿದ್ಧಪಡಿಸಿರುವ ಬಿಲ್‌ಗಳು ಸರಿ ಇಲ್ಲದ ಕಾರಣ ಆಯುಕ್ತರು ಬಿಲ್‌ಗಳಿಗೆ ಸಹಿ ಮಾಡಿಲ್ಲ. ಇದರಿಂದ ನಗರಸಭೆ ಸದಸ್ಯರು ಆಯುಕ್ತರನ್ನು ಕೂಡಿ ಹಾಕಿದ್ದರು ಎಂದು ಆರೋಪಿಸಿದರು.
ಇದರ ವಿರುದ್ಧ ನಾವು ಕಳೆದ ಜು.25ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಬಂದಾಗ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾರವರು ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ ನಾವು ಅವರಿಗೆ ದಿಗ್ಬಂಧನ ಹಾಕಲು ಮುಂದಾದವೇ ಅಷ್ಟೇ. ಆದರೆ ಜೆಡಿಎಸ್ ನಗರಸಭೆ ಸದಸ್ಯರು ಗೂಂಡಾವರ್ತನೆ ಪ್ರದರ್ಶಿಸಿದ್ದು, ಜೆಡಿಎಸ್ ಗೂಂಡಾ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಘೋಷಣೆ ಕೂಗಿದೆವು ಅಷ್ಟೇ. ಆದರೆ ಜೆಡಿಎಸ್ ಸದಸ್ಯರು ಅವಾಚ್ಯ ಶಬ್ಧಗಳಿಂದ ನಿಂದಿಸಿದರು ಎಂದು ದೂರಿದರು.
ಭ್ರಷ್ಟಾಚಾರದ ಬಗ್ಗೆ ಕರ ಪತ್ರ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾತನಾಡಿ, ನಗರಸಭೆಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಬಗ್ಗೆ ಕರಪತ್ರ ಸಿದ್ಧಪಡಿಸಿ ಮನೆ ಮನೆಗೆ ಹಂಚಿ ಸಾರ್ವಜನಿಕರನ್ನು ಎಚ್ಚರಿಸಲಾಗುತ್ತದೆ ಎಂದರು. ನಗರಸಭೆಯಲ್ಲಿ ಭ್ರಷ್ಟಾಚಾರ ಎಸಗಿರುವವರನ್ನು ಬಂಧಿಸಬೇಕು ಹಾಗೂ ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶೋಭನ್ ಬಾಬು, ಉಮೇಶ್, ಸುರೇಶ್, ಆಶಾಬಾಹುಬಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.