ಹಾಸನ

ಭಾಷೆ ಮೇಲೆ ಹಿಡಿತವಿರಲಿ

Published On :

ಹಾಸನ; ಭಾಷೆಯೇ ಕನ್ನಡ ಪತ್ರಿಕೋದ್ಯಮಕ್ಕೆ ದೊಡ್ಡ ಬಿರುಕು ತಂದಿದ್ದು, ಪತ್ರಕರ್ತರು ಭಾಷೆ  ಮೇಲೆ ಹಿಡಿತವನ್ನು ಸಾಧಿಸಿ ಭಾಷಾ ಶುದ್ಧಿಗೆ ಆದ್ಯತೆ ನೀಡಬೇಕು ಎಂದು ಮೈಸೂರು ಮಾನಸ ಗಂಗೋತ್ರಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎನ್. ನಿರಂಜನ ವಾನಳ್ಳಿ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮತ್ತು ವರದಿಗಾರರ ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
 ಕರ್ನಾಟಕದ ಮೊದಲ ಕನ್ನಡ ಪತ್ರಿಕೆ ಮಂಗಳೂರ ಸಮಾಚಾರದ ಕರ್ತೃ ರೆವರೆಂಡ್ ಫಾದರ್ ಹರ್ಮನ್ ಮೋಗ್ಲಿಂಗ್‌ನನ್ನು ನೆನೆದು, ಆತನ ವ್ಯಕ್ತಿತ್ವ ಮತ್ತು ಜೀವನ ಇಂದಿನ ಪತ್ರಕರ್ತರಿಗೆ ಮಾದರಿಯಾಗಬೇಕು. ಹವ್ಯಾಸಿ ಪತ್ರಿಕೋದ್ಯಮದಲ್ಲಿ ಭಾಷೆಯ ಮೇಲೆ ಹಿಡಿತ, ಸಮಯಪ್ರಜ್ಞೆ, ಬದ್ಧತೆ, ಸೂಕ್ಷ್ಮ ದೃಷ್ಟಿಕೋನ ಅಗತ್ಯವಾಗಿದ್ದು ಹವ್ಯಾಸಿ ಪತ್ರಕರ್ತರಿಗೂ ವೃತ್ತಿನಿರತ ಪತ್ರಕರ್ತರಷ್ಟೇ ಅವಕಾಶ, ಗೌರ  ವ, ಮನ್ನಣೆಯಿದೆ. ಪತ್ರಕರ್ತರಿಗೆ ತಾವು ಬರೆಯುವ ವಿಷಯ ಮತ್ತು ಅದರ ಬೇಡಿಕೆ ಕುರಿತು ಅರಿವಿದ್ದಾಗ ಬರಹ ಸಾರ್ಥಕವಾಗುತ್ತದೆ ಎಂದು ಹೇಳಿದರು. ಪತ್ರಿಕೋದ್ಯಮ ಶಿಕ್ಷಣ ಮತ್ತು ವೃತ್ತಿಯ ನಡುವೆ ದೊಡ್ಡ ಕಂದಕ ಏರ್ಪಟ್ಟಿದ್ದು ಅದನ್ನು ಕಿರಿದುಗೊಳಿಸಬೇಕಿರುವುದು ಇಂದಿನ ಅಗತ್ಯವಾಗಿದೆ. ಹೊಸತಲೆಮಾರಿನ ಪತ್ರಕರ್ತರ ಬರಹಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥವಾಗುವಂತಿರಬೇಕು. ಆಗ ಮಾತ್ರ ಪತ್ರಿಕೋದ್ಯಮದ ಮೂಲ ಆಶಯಗಳು ಈಡೇರಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್. ರೂಪ್‌ರಾಜ್ ಚಂದನ್ ಮಾತನಾಡಿ, ದೈನಂದಿನ ಜೀವನದ ಸಣ್ಣ ಪುಟ್ಟ ಅನುಭವಗಳೂ ಕೂಡ ಒಳ್ಳೆಯ ಬರಹಮೊಂದಕ್ಕೆ ವಸ್ತುವಾಗಬಲ್ಲವು. ಅದನ್ನು ಗುರುತಿಸುವ ಸೃಜನಶೀಲ ಮನಸ್ಸು ನಮ್ಮಲ್ಲಿರಬೇಕು ಹಾಗಾಗಿ ಹೊಸ ಹೊಸ ವ್ಯಕ್ತಿಗಳನ್ನು ಪರಿಚಯಿಸಿಕೊಳ್ಳುವ ಮೂಲಕ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು. ಸಾಧಕರ ಕುರಿತು ವಿದ್ಯಾರ್ಥಿಗಳು ಅಧ್ಯಯನ ಮಾಡುವುದರಿಂದ ಜೀವನದಲ್ಲಿ ಹೆಚ್ಚು ಅನುಭವ ಪಡೆದುಕೊಳ್ಳಬಹುದು. ಪತ್ರಿಕಾ ಕ್ಷೇತ್ರಕ್ಕೆ ಬರುವ ಯುವಕರು ಉತ್ತಮ ಭಾಷೆ ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಮಾಧ್ಯಮದಲ್ಲಿ ಸುಧಾರಣೆ ತರುಬಹುದಾಗಿದೆ ಎಂದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಚ್.ಕೆ. ದಿಲೀಪ್‌ಕುಮಾರ್, ಉಪನ್ಯಾಸಕರಾದ ಕವಿತಾ, ರವೀಂದ್ರ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.