ಆಯುರ್ವೇದ ವಿಶ್ವಮಾನ್ಯ
ಹಾಸನ: ವಮನ, ವಿರೇಚನ, ನಸ್ಯ, ಬಸ್ತಿ ಹಾಗೂ ರಕ್ತಮೋಕ್ಷಣಗಳೆಂಬ ಆಯುರ್ವೇದದ ಪಂಚಕರ್ಮ ಚಿಕಿತ್ಸೆಗಳು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಗಳಾಗಿವೆ. ಅನೇಕ ದೀರ್ಘಕಾಲೀನ ವ್ಯಾಧಿಗಳಲ್ಲಿ ಈ ಚಿಕಿತ್ಸೆಗಳು ಅತ್ಯುತ್ತಮ ನಿವಾರಣೆ ಉಂಟು ಮಾಡುತ್ತವೆ ಎಂದು ಹಾಸನದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ. ಗುರುದೀಪ್ಸಿಂಗ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಭಾರತ ಸರ್ಕಾರದ ಆಯುಷ್ ಇಲಾಖೆಯ ಪ್ರಾಯೋಜಕತ್ವ ಹಾಗೂ ನವದೆಹಲಿಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಸಂಯೋಜಕತ್ವದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 6 ದಿನಗಳ ಆಯುರ್ವೇದ ವೈದ್ಯರ ಪಂಚಕರ್ಮ ಚಿಕಿತ್ಸೆ ಕುರಿತಾದ ನಿರಂತರ ವೈದ್ಯಕೀಯ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ, ಭಾರತ ಸರ್ಕಾರವು ಆಯುರ್ವೇದ ವೈದ್ಯರಿಗೆ ಪಂಚಕರ್ಮ ಚಿಕಿತ್ಸೆಗಳ ಕುರಿತಾದ ಪುನಶ್ವೇತನ ಕಾರ್ಯಾಗಾರಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಮಾತೃವಿಜ್ಞಾನ: ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಮಾತನಾಡಿ, ಆಯುರ್ವೇದದ ಅವಿಭಾಜ್ಯ ಅಂಗಗಳಾದ ಆಹಾರ, ವ್ಯಾಯಾಮ, ಯೋಗ, ಪ್ರಕೃತಿ ಚಿಕಿತ್ಸೆಗಳು ಪ್ರತ್ಯೇಕ ವಿಜ್ಞಾನಗಳಾಗಿ ಬೆಳೆಯುತ್ತಿವೆ. ಆದರೆ ಇವುಗಳ ಮಾತೃವಿಜ್ಞಾನವಾದ ಆಯುರ್ವೇದವು ಭಾರತದಲ್ಲೇ ನಿಧಾನ ಗತಿಯಲ್ಲಿ ಸಾಗಿತ್ತಿರುವುದು ಖೇದಕರ ಸಂಗತಿ. ಆದ್ದರಿಂದ ಯುವ ಆಯುರ್ವೇದ ವೈದ್ಯರು ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಭ್ಯಾಸ ಮಾಡಬೇಕು. ಚಿಕಿತ್ಸಾ ವಿಷಯಗಳಲ್ಲಿ ತಮ್ಮ ಜ್ಞಾನ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ನುಡಿದರು.
ಪಂಚಕರ್ಮ: ಹರಿದ್ವಾರ ಪತಂಜಲಿ ಆಯುರ್ವೇದ ವಿಜ್ಞಾನ ಸಂಸ್ಥೆಯ ಪಂಚಕರ್ಮ ತಜ್ಞ ಡಾ. ಕೇತನ್ ಮಹಾಜನ್, ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ. ಮುರಲೀಧರ್ ಪೂಜಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಪ್ರಕಾಶ್ ಹೆಗಡೆ ಇದ್ದರು.
ಆರು ದಿನಗಳ ಈ ಕಾರ್ಯಾಗಾರದಲ್ಲಿ ಭಾರತದ10 ರಾಜ್ಯಗಳಿಂದ ಆಯ್ಕೆಯಾದ 30 ಜನ ಸರಕಾರಿ ಆಯುರ್ವೇದ ವೈದ್ಯಾಧಿಕಾರಿಗಳು ಭಾಗವಹಿಸಿದ್ದಾರೆ. ಕಾರ್ಯಾಗಾರದಲ್ಲಿ ಭಾರತದ ಅನೇಕ ನುರಿತ ಆಯುರ್ವೇದ ತಜ್ಞರು ಪಂಚಕರ್ಮ ಚಿಕಿತ್ಸೆಗಳ ಕುರಿತು ಬೆಳಕು ಚೆಲ್ಲಲಿದ್ದಾರೆ. ಗಾಯಿತ್ರಿ ಮತ್ತು ವೃಂದ ಪ್ರಾರ್ಥಿಸಿದರು. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿಕುಮಾರ್ ಎಂ ಸ್ವಾಗತಿಸಿದರು. ಡಾ. ಅಶುತೋಷ್ ಚತುರ್ವೇದಿ ನಿರೂಪಿಸಿ, ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷ ಡಾ. ಮುರಲೀಧರ್ ಪೂಜಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

