ಹಾಸನ

ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published On :

ಆಲೂರು: ಅಪ್ರಾಪ್ತ ಬಾಲಕಿಯರು ಹಾಗು ವಿದ್ಯಾರ್ಥಿನಿಯರು ಹಾಗೂ ಗೃಹಿಣಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತೆ ನೇತೃತ್ವದಲ್ಲಿ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥ್ಥಿಗಳು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಿಂದ ಹೊರಟ ಪ್ರತಿಭನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಮಹದೇವಯ್ಯರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ವಿದ್ಯಾರ್ಥಿನಿಯರು,  ದೇಶದೆಲ್ಲೆಡೆ ಮಹಿಳೆಯರು ಮಕ್ಕಳೆನ್ನದೆ ಮಾನಭಂಗ, ಅತ್ಯಾಚಾರ ಹಾಗು ಲೈಂಗಿಕ ಶೋಷಣೆಗಳು ನಡೆದು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಲುವಾಗಿ ಅಮಾಯಕ ಹೆಣ್ಣು ಜೀವಗಳನ್ನು ಕ್ರೂರವಾಗಿ ಕೊಲೆ ಮಾಡಲಾಗುತ್ತಿದೆ
ಬೆಂಗಳೂರಿನಲ್ಲಿ ತನ್ನ ಗೆಳೆಯನ ಸಮ್ಮುಖದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ನಾಸಿರ್ ಹೈದರ್‌ನಂತಹ ಮೃಗಗಳು ನಾಳೆಯ ದಿನ ಹೆಣ್ಣು ಹೆತ್ತ ಪೋಷಕರ ಎದುರೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲು ಹೇಸಲಾರರು. ಈ ಅತ್ಯಾಚಾರಿಗಳಿಗೆ ಕಡಿವಾಣ ಹಾಕುವಂತಹ ಯಾವುದೇ ವಿಶೇಷ ಕಾನೂನು ರಚನೆಯಾಗಿಲ್ಲದಿರುವುದು ದೇಶಕ್ಕೆ ದೇಶವೇ ತಲೆ ತಗ್ಗಿಸುವ ವಿಚಾರ ಕರ್ನಾಟಕವೊಂದರಲ್ಲೇ 2009 ರಿಂದ 2011ರವರೆಗೆ 14,989 ಮಹಿಳೆ ಹಾಗೂ ಯುವತಿಯರು ಕಾಣೆಯಾಗಿದ್ದಾರೆ ಈ ಪ್ರಸಕ್ತ ಸಾಲಿನಲ್ಲಿ ಕೇವಲ ಬೆಂಗಳೂರು ನಗರದಲ್ಲೇ 325 ಬಾಲಕಿಯರು ಹಾಗು 151 ಯುವತಿಯರ ಮೇಲೆ ಅತ್ಯಾಚಾರ ನಡೆದ ಬಗ್ಗೆ ದಾಖಲಾಗಿದ್ದು 1061 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ವಿಷಾದಿಸಿದರು.  ಬೆರಳೆಣಿಕೆಯ ಆರೋಪಿಗಳಿಗೆ ಸಾಮಾನ್ಯ ಶಿಕ್ಷೆ ನಡೆದಿದ್ದು ಉಳಿದ ಪ್ರಕರಣಗಳು ಸಾಕ್ಷಿ ಕೊರತೆ, ಲಂಚ ಹಾಗೂ ಪ್ರಭಾವಿ ವ್ಯಕ್ತಿಗಳ ಮಧ್ಯ ಪ್ರವೇಶದಿಂದ ವಿಚಾರಣೆಯಲ್ಲಿ ವಿಳಂಬವಾಗುತ್ತಿದೆ ಈ ರೀತಿ ಅತ್ಯಾಚಾರ, ಕೊಲೆ, ಲೈಂಗಿಕ ಶೋಷಣೆಗನ್ನು ನಡೆಸುವ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗುವಂತಹ ಹಾಗೂ  ಅಪರಾಧವೆಸಗುವ ಮುನ್ನ ಶಿಕ್ಷೆಯ ತೀವ್ರತೆಯನ್ನು ನೆನೆದು ಅಪರಾಧವೆಸಗುವ ಖಯಾಲಿಯನ್ನು ಬಿಡುವ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣಗಳ ಕುರಿತು ಕೇವಲ ಚರ್ಚೆಯಾಗದೇ ಈ ಪ್ರಕರಣಗಳಿಗೆ ಸರ್ಕಾರ ಪ್ರಬಲ ಕಾನೂನನ್ನು ರೂಪಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.