ಪೌರ ಕಾರ್ಮಿಕರ ಮುಷ್ಕರ ಮುಂದೂಡಿಕೆ
ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪೌರ ಕಾರ್ಮಿಕರು ನಗರಸಭೆ ಆವರಣದಲ್ಲಿ 5 ದಿನ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರ ಮುಂದೂಡಲಾಯಿತು.
ಗುತ್ತಿಗೆ ಮುನಿಸಿಪಲ್ ಕಾರ್ಮಿಕರಿಗೆ ಬಾಕಿ ವೇತನ, ಸರ್ಕಾರದ ಆದೇಶದಂತೆ ತುಟ್ಟಿಭತ್ಯೆ ಸಹಿತ ವೇತನ ಹಾಗೂ ಇತರೆ ಸೇವಾ ಸೌಲಭ್ಯಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿದರು.
2 ತಿಂಗಳ ವೇತನ ಪಾವತಿ: ಕಳೆದ 5 ದಿವಸಗಳಿಂದ ಪೌರಕಾರ್ಮಿಕರು ಯಾವುದೇ ಕೆಲಸ ಮಾಡದೆ ಸ್ಥಗಿತಗೊಳಿಸಿ ನಗರಸಭೆ ಆವರಣದಲ್ಲಿ ಮುಷ್ಕರ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಬಾಕಿ ಇದ್ದ ಮೇ ಮತ್ತು ಜೂನ್ ಎರಡು ತಿಂಗಳ ಸಂಬಳವನ್ನು ನೀಡಲಾಯಿತು.
ಆದರೆ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೈರ್ಮಲ್ಯ (ಕಸ ವಿಲೇವಾರಿ) ಹಾಗೂ ನೀರು ನಿರ್ವಹಣೆ ವಿಭಾಗದ ಪೌರ ಕಾರ್ಮಿಕರಿಗೆ ಕಳೆದ ಏಪ್ರಿಲ್ನಿಂದ ಹೆಚ್ಚಾಗಿರುವ ತುಟ್ಟಿಭತ್ಯೆಯನ್ನೂ ಪಾವತಿಸಿಲ್ಲ. ಮೂರು ವರ್ಷಗಳಿಂದ ಕಾರ್ಮಿಕರಿಗೆ ಭವಿಷ್ಯ ನಿಧಿ ಹಣ ಪಾವತಿಸಿಲ್ಲ. ಯಾವುದೇ ಕಾರ್ಮಿಕರಿಗೆ ಮತ್ತು ಇಎಸ್ಐ ಸೌಲಭ್ಯ ನೀಡಿಲ್ಲ. ಮೇಸ್ತ್ರಿಗಳಿಗೆ, ಕುಶಲ ಕಾರ್ಮಿಕರಿಗೆ ನೀಡುವ ವೇತನ ಮತ್ತು ಅವರಿಗೆ ಕೊಡಬೇಕಿರುವ ಪೆಟ್ರೋಲ್ ಮತ್ತು ಮೊಬೈಲ್ ಕರೆನ್ಸಿ ಭತ್ಯೆಗಳನ್ನು ನೀಡಿಲ್ಲ.
ಆಯುಕ್ತರು ಮೌನ: ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಉಸ್ತುವಾರಿ ನೋಡಿಕೊಳ್ಳಲು ಗುತ್ತಿಗೆದಾರರಾಗಲೀ ಅಥವಾ ಅಧಿಕೃತ ಪ್ರತಿನಿಧಿಗಳಾಗಲೀ ಹಾಜರಿರುವುದಿಲ್ಲ. ಕೆಲಸದ ಸ್ಥಳದಲ್ಲಿ ರಕ್ಷಣೆಯಿಲ್ಲದೆ ಕಾರ್ಮಿಕರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ನಗರಸಭೆ ಆಯುಕ್ತರಿಗೆ 15 ದಿನಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದರೂ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕಿರುವುದಿಲ್ಲ ಎಂದು ದೂರಿ ಇಂದು ತಾತ್ಕಲಿಕವಾಗಿ ತಮ್ಮ ಮುಷ್ಕರವನ್ನು ಮುಂದೂಡಿದ್ದಾರೆ.
ಮುನಿಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಧರ್ಮೇಶ್ ಪತ್ರಕರ್ತರೊಂದಿಗೆ ಮಾತನಾಡಿ, ಜು. 23ರ ರಂದು ನಗರಸಭೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸುವ ಭರವಸೆಯೊಂದಿಗೆ ತಮ್ಮ ಮುಷ್ಕರವನ್ನು ಕೈ ಬಿಟ್ಟಿದ್ದೇವೆ. ಕಾರ್ಮಿಕರ ಪರ ಸಭೆ ತೀರ್ಮಾನ ಮಾಡದಿದ್ದರೇ ಮತ್ತೆ ತಮ್ಮ ಧರಣಿಯನ್ನು ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

