ವಿಳಂಬ ನೀತಿ ವಿರುದ್ಧ ರೈತರ ಆಕ್ರೋಶ
ಅರಸೀಕೆರೆ: ಬರಗಾಲ, ಮಳೆಯ ಅಭಾವ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಕಾಲಕ್ಕೆ ಬೆಳೆವಿಮೆ ಪಾವತಿಸದೆ ವಿಳಂಭ ನೀತಿ ಅನುಸರಿಸುತ್ತಿರುವ ತಾಲೂಕಿನ ಜೆ.ಸಿ.ಪುರ ಎಸ್ಬಿಎಂ ಬ್ಯಾಂಕ್ನ ಧೋರಣೆ ಖಂಡಿಸಿ ತಾಲೂಕು ರೈತ ಸಂಘ ಹಾಗೂ ಬಿಜೆಪಿ ವತಿಯಿಂದ ಬ್ಯಾಂಕ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಕಷ್ಟ: ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್ ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿಂದಲೂ ಈ ಭಾಗದ ರೈತರು ಮಳೆಯಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು ಬಿಡಿಗಾಸಿಗೂ ಪರದಾಡುವಂತಾಗಿದೆ. ಇರುವ ಅಲ್ಪ ಹಣವನ್ನು ಬೆಳೆವಿಮೆಗಾಗಿ ಪಾವತಿಸಿ ಬರಿಗೈಯಾಗಿದ್ದಾನೆ. ಇಂತಹ ವೇಳೆಯಲ್ಲಿ ರೈತರ ನೆರವಿಗೆ ನಿಲ್ಲಬೇಕಿದ್ದ ಬ್ಯಾಂಕಕ್ವಿನಾಕಾರಣ ಈ ರೀತಿ ವರ್ತಿಸುತ್ತಿರುವುದು ಅಕ್ಷಮ್ಯ. ಕೂಡಲೇ ವಿಮೆ ಮೊತ್ತ ಪಾವತಿಸಲು ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ತಾ. ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್ ಮಾತನಾಡಿ, 2012-13ನೇ ಸಾಲಿನ ಬೆಳೆವಿಮೆ ಪಾವತಿ ಸಂಬಂಧ ಎಸ್ಬಿಎಂ ಬ್ಯಾಂಕ್ ಶಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಡಿ.ಎಂ. ಕುರ್ಕೆ ಕೆನರಾ ಬ್ಯಾಂಕ್ ಸೇರಿದಂತೆ ತಾಲೂಕಿನ ಇತರೆ ಬ್ಯಾಂಕುಗಳು ಈಗಾಗಲೇ ಬೆಳೆ ವಿಮೆ ಮೊತ್ತ ಪಾವತಿಸಿವೆ. ಆದರೆ ಇದೊಂದು ಶಾಖೆಯಲ್ಲಿ ಮಾತ್ರ ಈ ರೀತಿ ಮಾಡಲಾಗುತ್ತಿದೆ ಎಂದು ಬ್ಯಾಂಕ್ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಣ್ಣಾಯ್ಕನಹಳ್ಳಿ ಶಿವಮೂರ್ತಿ, ರವೀಶ್ ಬಾಬು, ಜಯದೇವ್ ಸೇರಿದಂತೆ ಜೆ.ಸಿ. ಪುರ, ಕಡಲಮಗ್ಗೆ, ಮೇಳೇನಹಳ್ಳಿ ಸುತ್ತಲಿನ ರೈತರು ಇದ್ದರು.
ಸಂಶೋಧನೆ ಅಗತ್ಯ
ಮೈಸೂರು: ಸಂವಹನ ನ್ಯೂನತೆಗೆ ಸಂಬಂಧಿಸಿದ ಪರಿಕರಗಳನ್ನು ಕಂಡು ಹಿಡಿಯಲು ತಾಂತ್ರಿಕ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಸ್.ಆರ್. ಸಾವಿತ್ರಿ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ಎಸ್ಜೆಸಿಇನಲ್ಲಿ ಸೋಮವಾರ ಏರ್ಪಡಿಸಿದ್ದ ಬೋಧನಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಹನ ನ್ಯೂನತೆಗೆ ಈಗ ಬಳಸುತ್ತಿರುವ ಪರಿಕರಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಮೂಹ ಹಾಗೂ ಪರಿಣಿತರು ಅಂತಹ ಉಪಕರಣಗಳನ್ನು ಇಲ್ಲಿಯೇ ಸಂಶೋಧಿಸಿದರೆ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ಆ ಕೆಲಸ ಆಗಬೇಕಿದೆ ಎಂದರು. ಜೆಎಸ್ಎಸ್ ಮಹಾವಿದ್ಯಾಪೀಠದ ಶೈಕ್ಷಣಿಕ ವಿಭಾಗದ ಜಂಟಿ ನಿರ್ದೇಶಕ ಡಾ.ಬಿ.ಜಿ. ಸಂಗಮೇಶ್ವರ ಮಾತನಾಡಿ, ತಾಂತ್ರಿಕ ಸಂಶೋಧನೆಯಲ್ಲಿ ಭಾರತ ಜಾಗತಿಕವಾಗಿ ಎತ್ತರಕ್ಕೆ ಬೆಳೆಯುವ ಅವಶ್ಯಕತೆ ಇದೆ. ಜಾಗತಿಕವಾಗಿ ಶೇ 0.3 ರಷ್ಟು ತಂತ್ರಾಂಶಗಳ ಮೇಲಿನ ಪೇಟೆಂಟ್ನ್ನು ನಮ್ಮ ದೇಶವನ್ನು ಪಡೆದಿದೆ. ತಾಂತ್ರಿಕ ಸಂಶೋಧನೆಗಳ ಪ್ರಕಟಣೆಗಳಲ್ಲಿ ಜಾಗತಿಕವಾಗಿ ಶೇ. 3.5ರಷ್ಟು ಮಾತ್ರ ಭಾರತ ಪಾಲು ಹೊಂದಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

