ಮಳೆ: ಮರ, ವಿದ್ಯುತ್ ಕಂಬ ಧರೆಗೆ
ಹಾಸನ: ಜಿಲ್ಲೆ ನಾನಾ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮಲೆನಾಡು ಭಾಗದಲ್ಲಿ ಮಳೆಯಿಂದ ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿ ಸಾಕಷ್ಟು ಹಾನಿ ಉಂಟಾಗಿದೆ.
ಹಾಸನ, ಆಲೂರು, ಸಕಲೇಶಪುರ, ಬೇಲೂರು, ಆರಕಲಗೂಡು ಸೇರಿದಂತೆ ನಾನಾ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಸಂತಸ ತಂದಿದೆ. ಜಿಲ್ಲೆಯ ಜೀವನದಿ ಮತ್ತು ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಎಸನಿಸಿರುವ ಹೇಮಾವತಿ, ಯಗಜಿ ಮತ್ತು ವಾಟೇಹೊಳೆ ಜಲಾಶಯಗಳಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಡ್ಯಾಂ ಗಳಲ್ಲಿ ಇರುವ ಡೆಡ್ಸ್ಟೊರೇಜ್ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.
ಸಾಮರ್ಥ್ಯ ಹೆಚ್ಚಳ: ಹೇಮಾವತಿ ಜಲಾಶಯ 2922 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿಂದು ಕೇವಲ 2879.30 ಅಡಿ ನೀರಿದೆ. ಒಟ್ಟು 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಡ್ಯಾಂಗೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 250 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಸಕಲೇಶಪುರದಲ್ಲಿ ಕಳೆದೊಂದು ವಾರದಿಂದ ಆರಂಭವಾಗಿರುವ ಮುಂಗಾರು ಮಳೆ ತಾಲೂಕಿನಲ್ಲಿ ಹಲವು ಅವಘಡಗಳನ್ನು ಸೃಷ್ಟಿಸಿದೆ.
ಅಪಾರ ನಷ್ಟ: ಭಾನುವಾರ ಸತತ ಸುರಿದ ಜಡಿಮಳೆಗೆ ಪಟ್ಟಣದ ಕುಶಾಲನಗರ ಬಡಾವಣೆಯ ಕುಮಾರ ಎಂಬುವವರ ಮನೆಯ ಮೇಲೆ ಮರ ಕುಸಿದು ಹಾನಿ ಸಂಭವಿಸಿದೆ. ಇದೇ ಬಡಾವಣೆ ಸಿದ್ದವೀರಪ್ಪ ಎಂಬುವವರ ಮನೆ ಸಮೀಪ ಸಹ ಭೂಕುಸಿತ ಸಂಭವಿಸಿದೆ. ರಾತ್ರಿ ಬಿರುಗಾಳಿ ಮಳೆಗೆ ಕ್ರಾಪರ್ಡ್ ಆಸ್ಪತ್ರೆ ಶೀಟುಗಳು ಹಾರಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ.
ಇದಲ್ಲದೆ ಸ್ವಚ್ಛಗೊಳ್ಳದ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡು ಮಳೆ ನೀರು ರಸ್ತೆಯಲ್ಲೇ ಹರಿದು, ಜನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ. ಇದಲ್ಲದೆ ತಾಲೂಕಿನ ಶುಕ್ರವಾರ ಸಂತೆ ಗ್ರಾಮದಲ್ಲಿ ಮಳೆಗಾಳಿಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದಲ್ಲದೆ ಹೊಂಗಡಹಳ್ಳ, ಹೆತ್ತೂರು, ಜಗಾಟ, ಕುಪ್ಪಳ್ಳಿ, ಉಚ್ಚಂಗಿ, ಮಾವಿನೂರು ಸಮೀಪ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದರಿಂದಾಗಿ ಹಳ್ಳಗಳು ಉಕ್ಕಿ, ಬತ್ತದ ಗದ್ದೆಗಳಲ್ಲಿ ಹರಿದು ನಷ್ಟ ಉಂಟಾಗಿದೆ. ಒಟ್ಟಾರೆ ತಾಲೂಕಿನಲ್ಲಿ 33 ಅಂಗುಲ ಮಳೆಯಾಗಿದ್ದರೆ, ಕಳೆದ ವರ್ಷ ಜು.15ರ ವೇಳಗೆ 69 ಅಂಗುಲ ಮಳೆಯಾಗಿದ್ದು, ಈ ಬಾರಿ ಶೇ.44 ರಷ್ಟು ಮಳೆ ಕೊರತೆಯಾಗಿದೆ ಸೋಮವಾರದಿಂದ ಬಿಡುವು ನೀಡಿದ್ದ ಮಳೆ ಸಂಜೆಯ ನಂತರ ಮತ್ತೆ ಆರಂಭವಾಗಿದೆ.
ಜಿಲ್ಲೆಯ ಮಳೆ ವಿವರ
ಹಾಸನ: ಜಿಲ್ಲೆಯಲ್ಲಿ ಜು. 13ರಂದು ಬಿದ್ದ ಮಳೆಯ ವಿವರ ಇಂತಿದೆ.
ಆಲೂರು-25.8 ಮಿಮೀ. ಕೆಂಚಮ್ಮನಹೊಸಕೋಟೆ-50.1, ಕುಂದೂರು-1.5, ಪಾಳ್ಯ-33.2, ಕುಂದೂರು-16.2, ಅರಕಲಗೂಡು-7.1, ಮಲ್ಲಿಪಟ್ಟಣ-15, ರಾಮನಾಥಪುರ-11, ಬಸವಾಪಟ್ಟಣ-10, ಕೊಣನೂರು-13.4, ದೊಡ್ಡಮಗ್ಗೆ-7.2, ದೊಡ್ಡಬೆಮ್ಮತ್ತಿ-8.2, ಅರಸೀಕೆರೆ-3.2, ಬಾಣಾವರ-3.6, ಗಂಡಸಿ-1.8, ಕಣಕಟ್ಟೆ-2.2,ಇಳವಾರೆ-1.1, ಜಾವಗಲ್-2.0, ಬೇಲೂರು-12, ಅರೇಹಳ್ಳಿ-58.4, ಬಿಕ್ಕೋಡು- 23.1, ಹಳೇಬೀಡು-8.4, ಹಗರೆ-10, ಗೆಂಡೆಹಳ್ಳಿ-18.2, , ಚನ್ನರಾಯಪಟ್ಟಣ-2.6, ಉದಯಪುರ-1.2, ಬಾಗೂರು-7.1, ನುಗ್ಗೇಹಳ್ಳಿ-8.4, ಹಿರಿಸಾವೆ-7.9, ಶ್ರವಣಬೆಳಗೊಳ-2.4, ಹಾಸನ-16.4, ಕಟ್ಟಾಯ-15, ಸಾಲಗಾಮೆ-15, ಶಾಂತಿಗ್ರಾಮ-18, ದುದ್ದ 7, ಗೊರೂರು 7.5, ಹೊಳೆನರಸೀಪುರ-2.2, ಹಳೇಕೋಟೆ-6.2, ಸಕಲೇಶಪುರ-81.6, ಬಾಳ್ಳುಪೇಟೆ 46, ಯಸಳೂರು-30, ಶುಕ್ರವಾರಸಂತೆ-18.3, ಮಾರನಹಳ್ಳಿ-100.4, ಹೊಸೂರು 31.3, ಬೆಳಗೋಡು-56.2, ಹಾನಬಾಳು 104.6 ಮತ್ತು ಹೆತ್ತೂರು 71.6ಮಿಮೀ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922. ಅಡಿಗಳು, ಇಂದಿನ ನೀರಿನ ಮಟ್ಟ 2879.30 ಅಡಿಗಳು, ಜಲಾಶಯಕ್ಕೆ ನೀರಿನ ಒಳಹರಿವು 10 ಸಾವಿರ ಕ್ಯೂಸೆಕ್, ಹೊರಹರಿವು 250 ಕ್ಯೂಸೆಕ್, ಜಲಾಶಯದಲ್ಲಿರುವ ನೀರಿನ ಒಟ್ಟು ಸಂಗ್ರಹ 9.81 ಟಿಎಂಸಿ, ಬಳಕೆಗೆ ಲಭ್ಯ ನೀರು 5.009 ಟಿಎಂಸಿ
ವಾಟೆಹೊಳೆ ಜಲಾಶಯದ
ಇಂದಿನ ಮಟ್ಟ 3134.35 ಅಡಿ. ಒಳ ಹರಿವು 252 ಕ್ಯೂಸೆಕ್, ಹೊರ ಹರಿವು ಇಲ್ಲ, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ 0.275 ಟಿಎಂಸಿ ಬಳಕೆಗೆ ಲಭ್ಯವಿರುವ ನೀರು 0.131 ಟಿಎಂಸಿ,
ಯಗಚಿ ಜಲಾಶಯದ
ಜಲಾಶಯದ ನೀರಿನ ಮಟ್ಟ 3150.519 ಅಡಿ. ಒಳ ಹರಿವು 50 ಕ್ಯೂಸೆಕ್, ಹೊರ ಹರಿವು ನಾಲೆಗೆ 50 ಕ್ಯೂಸೆಕ್, ಜಲಾಶಯದಲ್ಲಿ ಒಟ್ಟು ನೀರು 3.600 ಟಿಎಂಸಿ ಬಳಕೆಗೆ ಲಭ್ಯ 1.674 ಟಿಎಂಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

