ರೈತರ ಮರೆತ ಸರ್ಕಾರ: ಟೀಕೆ
ಬೇಲೂರು: ಚುನಾವಣಾ ಸಂದರ್ಭದಲ್ಲಿ ರಾಜ್ಯದ ರೈತರಿಗೆ ನೀಡಿದ್ದ ವಚನವನ್ನು ಮರೆತು ರೈತ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ದೂರಿದರು.
ಅಸಮರ್ಪಕ ವಿದ್ಯುತ್ ಸರಬರಾಜನ್ನು ಖಂಡಿಸಿ ತಾಲೂಕು ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬೆಳೆದ ಬೆಳೆಯು ಸರಿಯಾದ ನೀರಿನ ಪೂರೈಕೆ ಇಲ್ಲದೆ ಮತ್ತು ಸಮಯಕ್ಕೆ ವಿದ್ಯುತ್ ನೀಡದೆ ಬೆಳೆಯು ಹಾಳಾಗುತ್ತಿದೆ ಎಂದು ಆರೋಪಿಸಿದರು.
ರೈತರ ಮರೆತ ಸರ್ಕಾರ: ಮುಖಂಡ ಕೊರಟಿಗೆರೆ ಪ್ರಕಾಶ್ ಮಾತನಾಡಿ, ಲೋಡ್ ಶಡ್ಡಿಂಗ್, ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ನಾಡಿನ ಜನರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ರಾಜ್ಯದ ಕೆಲವು ಭಾಗಗಳಿಗೆ ಮಾತ್ರ ಮಳೆ ಬಂದಿದ್ದು ಇನ್ನು ಕೆಲವು ಕಡೆ ಬರಗಾಲವಿದೆ. ಸರ್ಕಾರ ಒಳ ಜಗಳಗಳ ಮೂಲಕ ಕಾಲಹರಣ ಮಾಡುತ್ತಿದ್ದು ರೈತರ ಬಗ್ಗೆ ಸ್ವಲ್ಪವೂ ಕನಿಕರ ತೋರುತ್ತಿಲ್ಲ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಾವಗಲ್ ಚಂದ್ರಶೇಖರ್, ರಾಜ್ಯ ಕಾರ್ಯಕಾರಣಿ ರೈತ ಮೋರ್ಚಾ ಸದಸ್ಯ ಹಾಲಪ್ಪ ಹೆಬ್ಬಾಳು, ತಾಲೂಕು ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್, ಜಿಲ್ಲಾ ಯುವ ಮೋರ್ಚಾದ ಅಭಿಗೌಡ, ವಿಜಯಲಕ್ಷ್ಮಿ, ಅನ್ನಪೂರ್ಣ ಚಂದ್ರಶೇಖರ್, ನಾಯಕನಹಳ್ಳಿ ಮಹದೇವ್, ಬಲ್ಲೇನಹಳ್ಳಿ ರವಿ, ಗೋವಿಂದಪ್ಪ ಇತರರು ಇದ್ದರು.
ಮೆರವಣಿಗೆ: ಇದಕ್ಕೂ ಮೊದಲು ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಕೆಂಪೇಗೌಡ ವೃತ್ತದ ಮುಖಾಂತರ ಬಸವೇಶ್ವರ ವೃತ್ತವನ್ನು ತಲುಪಿ ನಂತರ ಮೂಡಿಗೆರೆ ರಸ್ತೆಯಲ್ಲಿರುವ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

