ಹಾಸನ

ಪದಗ್ರಹಣ ಕಾರ್ಯಕ್ರಮ ಇಂದು

Published On :

ಹಾಸನ: ಲಯನ್ ಕ್ಲಬ್ ವತಿಯಿಂದ ಆ.2ರಂದು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ ಕ್ಲಬ್ ಜಿಲ್ಲಾ ರಾಜ್ಯಪಾಲ ಎಚ್.ಎಸ್.ಮಂಜುನಾಥ ಮೂರ್ತಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದಗ್ರಹಣ ಕಾರ್ಯಕ್ರಮದಲ್ಲಿ ಸುಮಾರು 1300 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 1500 ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ವಾಚ್ ವಿತರಸಿಲಾಗುತ್ತದೆ. 10ನೇ ತಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೋಲಾರ್ ಲೈಟ್‌ಗಳನ್ನು ವಿತರಸಲಾಗುತ್ತದೆ ಎಂದ ಅವರು, ಕನ್ನಡ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು, ಗ್ರಂಥಾಲಯವನ್ನು ಸ್ಥಾಪಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಿ.ಮಂಜುನಾಥ್ ಹಾಗೂ ಇತರರು ಇದ್ದರು.
ಅಂಕವೀರರಿಗೆ ಸನ್ಮಾನ
ಹಾಸನ: ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಾಗುವ ಆಕರ್ಷಣೆಗಳ ಬಗ್ಗೆ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಹಾಗೆಯೇ ಪ್ರಸ್ತುತ ಸನ್ನಿವೇಶದಲ್ಲಿ ಸ್ತ್ರೀಯರ ಮಹತ್ವದ ಪಾತ್ರವನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ  ತಿಳಿಸಿದರು. ಇತ್ತೀಚೆಗೆ ಸುಜಲ ಪಿ.ಯು. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ ಜನಾರ್ದನ್ ಮಾತನಾಡಿ, ಹದಿನಾರರ ವಯಸ್ಸಿನಲ್ಲಾಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ಸ್ವಾಭಾವಿಕವಾಗಿದ್ದು, ವಿದ್ಯಾರ್ಥಿಗಳು ತಮ್ಮ  ಮನಸ್ಸನ್ನು ಓದಿನ ಕಡೆ ಕೇಂದ್ರೀಕರಿಸಬೇಕು ಎಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಲೋಕೇಶ್, ಸಂಸ್ಥೆಯಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ, ಅದರಲ್ಲೂ ಕನ್ನಡ ಮಾಧ್ಯಮದಿಂದ ಬಂದಿರುವ ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಸಂಸ್ಥೆ ಕಟಿಬದ್ಧ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಅಂಕ ಪಡೆದಿರುವ ಸಾಗರ್. ಬಿ.ಆರ್., ಸಚಿನ್.ವಿ.ಡಿ., ಹಾಗೂ ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಸಾರ ತಬಸ್ಸುಮ್‌ಳಿಗೆ 5000 ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಸಂಸ್ಥೆ ವತಿಯಿಂದ ಅಂಧ ಮಕ್ಕಳ ಶಾಲೆಗೆ 70.000 ಮೌಲ್ಯದ ಸೋಲಾರ್‌ಗಳನ್ನು ಸಹ ಅಳವಡಿಸಲು ಘೋಷಿಸಲಾಯಿತು.
ವಿದ್ಯುತ್ ಅವಘಡ: ಎಮ್ಮೆ ಸಾವು
ರಾಮನಾಥಪುರ: ವಿದ್ಯುತ್ ಕಂಬದ ತಂತಿ ತುಂಡಾಗಿ ರಸ್ತೆಯಲ್ಲಿ ಬರುತ್ತಿದ್ದ ಎಮ್ಮೆ ಮೇಲೆ ಬಿದ್ದು ಸ್ಥಳದಲ್ಲೇ ಮಣತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಸಮೀಪದ ಹಂಡ್ರಂಗಿ ಗ್ರಾಮದ ಶಂಭೇಗೌಡ ಎಂಬುವವರಿಗೆ ಸೇರಿದ 10 ಸಾವಿರ ಮೌಲ್ಯದ ಎಮ್ಮೆ  ಸಂಜೆ ಮನೆಗೆ ಹಿಂದಿರುಗುವ ವೇಳೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ತಂತಿ ಬಿದ್ದು ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಗ್ರಾಮಸ್ಥರಾರು ಮಳೆಯ ಕಾರಣ ಹೊರಬರದೆ ಜನರು ಓಡಾಟ ಮಾಡದೆ ಇದ್ದುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಕೊಣನೂರು ಚೆಸ್ಕಾಂನ ಸಹಾಯಕ ಇಂಜಿನಿಯರ್ ಈರಣ್ಣ ರೈತನಿಗೆ ಸಾಂತ್ವನ ಹೇಳಿ ಘಟನೆಗೆ ಸಂಬಂಧಿಸಿದ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಪಶು ವೈಧ್ಯಾಧಿಕಾರಿ ದಿಲೀಪ್ ಮರಣೋತ್ತರ ಪರೀಕ್ಷೆ ನಡೆಸಿದರು. ಜಾನುವಾರು ಕಳೆದುಕೊಂಡು ಕಂಗಾಲದ ರೈತನಿಗೆ ಚೆಸ್ಕಾಂ ಇಲಾಖೆಯಿಂದ ಕೂಡಲೆ ಪರಿಹಾರ ನೀಡುವಂತೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಈ. ಜಗದೀಶ್ ಆಗ್ರಹಿಸಿದ್ದಾರೆ.
ನಾನಾ ಹುದ್ದೆಗೆ ಅರ್ಜಿ ಕರೆ
ಹಾಸನ: ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್‌ನಲ್ಲಿ 233 ಸಹಾಯಕರ   ನೇಮಕಾತಿಗಾಗಿ ಆನ್‌ಲೈನ್ ಮೂಲಕ  ಆ.7 ರೊಳಗೆ ಅರ್ಜಿ ಸಲ್ಲಿಸಲು  ಕೋರಲಾಗಿದೆ. ಜಾಲತಾಣ ಢಿಢಿಢಿ.್ಝಡ್ಠ್ಟ.್ಜ್ಟಢ.್ಝಟಿ. ಶುಲ್ಕ 100 ರು. ಪರಿಶಿಷ್ಟದವರಿಗೆ, ಮಾಜಿ ಯೋಧರಿಗೆ, ವಿಕಲ ಚೇತನರಿಗೆ, ಮಹಿಳಾ ಅಭ್ಯರ್ಥಿಗಳಿಗೆ ವಿನಾಯ್ತಿ ಇದೆ. ಆ.7 ಕ್ಕೆ  ಪ್ರಥಮ ದರ್ಜೆಯಲ್ಲಿ ಯಾವುದೇ  ಪದವಿ  ಪಾಸಾಗಿರಬೇಕು.  ಮತ್ತು ಕಂಪ್ಯೂಟರ್ ಬಳಕೆ ಗೊತ್ತಿರಬೇಕು. ಲಿಖಿತ ಪರೀಕ್ಷೆಯು ಅ.12 ರಂದು ನಡೆಯಲಿದ್ದು, ಇದು ಬಹು ಆಯ್ಕೆ  ಮತ್ತು ವಿವರಣಾತ್ಮಕ  ವಿಧಾನವನ್ನು  ಒಳಗೊಂಡಿದೆ. ಅರ್ಹ ಆಸಕ್ತ ಜಿಲ್ಲೆಯ ಎಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ  ಸರಿಯಾದ ಸಿದ್ಧತೆಯೊಂದಿಗೆ ಈ ಅವಕಾಶಗಳನ್ನು  ತಮ್ಮದಾಗಿಸಿಕೊಳ್ಳುವಂತೆ ಕೃಷಿಕ್ ಸವೋದಯ ಫೌಂಡೇಷನ್ ಕೋರಿದೆ.
ಐಬಿಪಿಎಸ್ ಪರೀಕ್ಷೆಗೆ ತರಬೇತಿ: ಸಾರ್ವಜನಿಕರ ವಲಯದ 23 ಬ್ಯಾಂಕ್‌ಗಳಲ್ಲಿ ಲಭ್ಯವಾಗುವ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳನ್ನು  ತುಂಬಲು ಅಗತ್ಯವಿರುವ ಕಾಮನ್ ರಿಟನ್ ಪರೀಕ್ಷೆಯನ್ನು ಐಬಿಪಿಎಸ್ ಸಂಸ್ಥೆಯು ಅನ್‌ಲೈನ್ ನೂಲಕ ಅಕ್ಟೋಬರ್‌ನಲ್ಲಿ ನಡೆಸಲಿದೆ ಪರೀಕ್ಷೆಗೆ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆ.11 ಕೊನೆ ದಿನ.  ಜಾಲತಾಣ ಢಿಢಿಢಿ.್ಝಛಿಠಡ.್ಝಟಿ ಶುಲ್ಕ 600 ರು. ಮಾತ್ರ.
ಉಚಿತ ತಪಾಸಣಾ ಶಿಬಿರ 5ಕ್ಕೆ
ಹಾಸನ: ಅಪೊಲೋ ಆಸ್ಪತ್ರೆವತಿಯಿಂದ ಆ.5ರಂದು ನಗರದ ಎಸ್‌ಎಸ್‌ಎಂ ಆಸ್ಪತ್ರೆಯಲ್ಲಿ ಉಚಿತ ನರದೌರ್ಜಲ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನರರೋಗ ತಜ್ಞ ಡಾ.ಅರುಣ್ ನಾಯಕ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾಂತ್ರಿಕ ಜೀವನದಿಂದಾಗಿ ಜನರು ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿಲ್ಲ. ಆದ್ದರಿಂದ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದೆ. ಭಾರತದಲ್ಲಿ ಸರಾಸರಿ ಪ್ರತಿ ನಿಮಿಷಕ್ಕೊಬ್ಬರು ಪಾರ್ಶ್ವವಾಯುವಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಗುರಿಯನ್ನು ಹೊಂದಿದ್ದೇವೆ ಎಂದರು. ಈ ಸಂದರ್ಭದಲ್ಲಿ ಹರೀಶ್ ಕುಮಾರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.